ಬನಹಟ್ಟಿ ನಗರದಲ್ಲಿ ಸತತ ಸುರಿಯುತ್ತಿರುವ ಮಳೆಯಿಂದ ,ಈದ್ಗಾ ತೆರಳದೆ ಮಸೀದಿಯಲ್ಲಿ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು* :
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯ ಪ್ರಭಾವದಿಂದ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆಯನ್ನು ಈದ್ಗಾ ಮಸೀದಿಗೆ , ಹೋಗದೆ ಆಯಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ದೃಶ್ಯ ಕಂಡುಬಂತು .
ನಿನ್ನೆ ಸಂಜೆ ಸತತ ಮಳೆಯ ಪ್ರಭಾವದಿಂದ ನಗರದ ಅಂಜುಮನ್ ಸಂಸ್ಥೆಯ ಹಾಗೂ ಮರ್ಕಜ್ ಮಸೀದಿಯ ಮುಖಂಡರುಗಳು ಸಭೆ ನಡೆಸಿದ ಬಳಿಕ , ಆಯಾ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು .ಅದೇ ರೀತಿಯಾಗಿ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆ ಆಯಾ ಮಸೀದಿಗಳಲ್ಲಿ ನಿರ್ವಹಿಸಲಾಯಿತು .
ಈ ಸಂದರ್ಭದಲ್ಲಿ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆಯನ್ನು ಮೌಲಾನಾ ಆಸೀಫ ಅತ್ತಾರ ನಿರ್ವಹಿಸಿದರು . ಹಾಗೂ ಅಯ್ಯೂಬ್ ಅತ್ತಾರ , ಪ್ರಾರ್ಥನೆ ಸಂದರ್ಭದಲ್ಲಿ ಬರುವಂತಹ ಆಯಾಮಗಳನ್ನು ನಿರೂಪಿಸಿದರು .
ಬನಹಟ್ಟಿ ನಗರದ ಪೊಲೀಸ್ ಇಲಾಖೆ ಯಾವುದೇ ಆಹಿತ ಘಟನೆ ನಡೆಯದಂತೆ , ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು ಎಂದು ಸಿಪಿಐ ವೀರೇಶ್ ಮಠಪತಿ ಹೇಳಿದರು .
ಈ ಸಂದರ್ಭದಲ್ಲಿ ಮಾತನಾಡಿದ ನಗರದ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಹಾರೂನ್ ರಶೀದ್ ಸಾಂಗ್ಲಿಕರ್ , ಎಲ್ಲ ಸಮಸ್ತ ಜನತೆಗೆ ಬಕ್ರೀದ್ ಹಬ್ಬದ ಶುಭಾಶಯ ಹೇಳುತ್ತಾ , ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿರುವುದರಿಂದ ಈದ್ ಉಲ್ ಅದಹ ಹಬ್ಬದ ಸಾಮೂಹಿಕ ಪ್ರಾರ್ಥನೆಯನ್ನು ಮಸೀದಿಗಳಲ್ಲಿ ನಿರ್ವಹಿಸಿದವು. ಹಾಗೂ ಇಡೀ ಸಮಸ್ತ ಮುಸ್ಲಿಂ ನಾಗರಿಕರಿಂದ ದೇಶದಲ್ಲಿ ಎಲ್ಲರಿಗೂ ಶಾಂತಿ ಸೌಹಾರ್ದ ಸಹಬಾಳ್ವೆಯಿಂದ ಬಾಳೋಣ ಎಂದು ಹಾರೈಸಿದರು .
KALAAM EXPRESS NEWS
TERDAL ZONE
BAGALKOTE
RABKAVI - BANHATTI
Good
ReplyDelete