Skip to main content

ಬಿ ಜಡ್ ಜಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ನೀಡಲು ಮುಸ್ಲಿಂ ಸಮುದಾಯ ಅಗ್ರಹ

ಜಮೀರ್ ಅಹಮ್ಮದ್ ಖಾನ್ ಆವರಿಗೆ ಸಚಿವ ಸ್ಥಾನ ನೀಡಲು ಅಗ್ರಹ .
 ತೇರದಾಳ ( ರಬಕವಿ ) : ರಬಕವಿ ಬನಹಟ್ಟಿ ತಾಲ್ಲೂಕು ಸಮಸ್ತ ಮುಸ್ಲಿಂ ಸಮುದಾಯದಿಂದ ಬಿ ಜಡ್ ಜಮೀರ್ ಅಹ್ಮದ್ ಖಾನ್ ಅವರಿಗೆ ಡಿಕೆ ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನ ನೀಡಲು ಅಗ್ರಹಿಸಿದರು . ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಲ್ಪಸಂಖ್ಯಾತರ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ರಫೀಕ್ ಬಾರಿಗಡ್ಡಿ, ಜಮೀರ್ ಅಹಮ್ಮದ್ ಖಾನ್ ರವರು ಕೇವಲ ಕೇವಲ ಮುಸ್ಲಿಂ ಸಮುದಾಯಕ್ಕೆ ಸೀಮಿತವಾಗದೇ ಸರ್ವಜನಾಂಗದ ನಾಯಕರಾಗಿ ಹೊರಹಮ್ಮಿದ್ದಾರೆ. ಆಯ್ಕೆಯಾಗಿ ಬಂದಿರುವ ಚಾಮರಾಜನಗರ ಕ್ಷೇತ್ರದಲ್ಲಿ ಅಷ್ಟೇ ಅಲ್ಲದೆ ಕರ್ನಾಟಕದಾದ್ಯಂತ ಜನಪರ ಕೆಲಸಗಳ ಮೂಲಕ ರಾಜ್ಯದ ಎಲ್ಲಾ ಸಮುದಾಯಗಳ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಸರ್ವ ಜನಾಂಗದ ಅಭಿವೃದ್ಧಿ ಕಾರ್ಯಗಳು ಇದಲ್ಲದೆ , ಜನಸೇವೆ ಮಾಡುತ್ತಿರುವ ಇವರಿಗೆ ತಮ್ಮ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಅಗ್ರಹಿಸಿದರು . ಮೌಲಾನಾ ಮೋಹಸಿನ್ ಅಹಮದ್ ಗೋಕಾಕ್ ಅವರು ಬೀ ಜಡ್ ಜಮೀರ್ ಅಹ್ಮದ್ ಖಾನ್ ಅವರು ಯಾವುದೇ ಸಮುದಾಯಕ್ಕೆ ಸೀಮಿತವಾಗದೆ ಇಡೀ ರಾಜ್ಯದ್ಯಂತ ನಾಯಕರಾಗಿ ಹೊರಹೊಮ್ಮಿದ್ದು , ಡಿಕೆ ಶಿವಕುಮಾರ್ ಅವರು ತಮ್ಮ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡಬೇಕು ಒಂದು ವೇಳೆ ನೀಡದಿದ್ದಲ್ಲಿ , ಮುಂದಿನ ದಿನಮಾನಗಳಲ್ಲಿ ಬೇರೆ ಮಾರ್ಗ ನೋಡಿ ಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ರಬಕವಿ ಬನಹಟ್ಟಿ ನಗರಸಭೆ ಮಾಜಿ ಅಧ್ಯಕ್ಷ ಉಸ್ಮಾನ್ ಸಾಬ್ ಲೇಂಗ್ರೆ, ಅಂಜುಮನ್ ಅಧ್ಯಕ್ಷ ಇಕ್ಬಾಲ್ ಲಿಂಗ್ರೆ , ಹಸನ್ ಕೊತ್ವಾಲ್ , ಮೌಲಾ ಪೆಂಡಾರಿ, ಅಬ್ದುಲ್ ಲೆಂಗ್ರೇ, ಸೊಹೈಲ್ ಅತ್ತಾರ್, ಇಸ್ಮಾಯಿಲ್ ನಮಾಜ್ ಕಟ್ಟಿ, ಇನ್ನಿತರರು ಇದ್ದರು.


 ವರದಿ  : 
ಮಹಿಬೂಬ್ಎಂ ಬಾರಿಗಡ್ಡಿ 

Comments

Popular posts from this blog

ಬನಹಟ್ಟಿ ನಗರದಲ್ಲಿ ಎಸ್‌ಡಿಪಿಐ ವತಿಯಿಂದ ಎಸ್‌ಐಆರ್ ಜಾಗೃತಿ ಕಾರ್ಯಕ್ರಮ

ಬನಹಟ್ಟಿ ನಗರದಲ್ಲಿ ಎಸ್‌ಡಿಪಿಐ ವತಿಯಿಂದ ಎಸ್‌ಐಆರ್ ಜಾಗೃತಿ ಕಾರ್ಯಕ್ರಮ  ರಬಕವಿ - ಬನಹಟ್ಟಿ:  ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ (ಎಸ್‌ಡಿಪಿಐ) ಬನಹಟ್ಟಿ ನಗರ ಘಟಕದ ವತಿಯಿಂದ ನಗರದ ಬಿಲಾಲ್ ಮಸೀದಿ ಸಮೀಪ ಎಸ್‌ಐಆರ್ (SIR) ಮ್ಯಾಪಿಂಗ್ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಎಸ್‌ಐಆರ್ ಮ್ಯಾಪಿಂಗ್ ಹಾಗೂ ಫಾರಂ ಭರ್ತಿ ಮಾಡುವ ವಿಧಾನ, ಅಗತ್ಯ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಅಲ್ಲದೆ, ಸಹಾಯವಾಣಿ (Help Desk) ಮೂಲಕ ಸ್ಥಳದಲ್ಲೇ ಸಾರ್ವಜನಿಕರಿಗೆ ಉಚಿತವಾಗಿ ಫಾರಂ ಭರ್ತಿ ಮಾಡಿಕೊಡುವ ಸೇವೆಯನ್ನು ಒದಗಿಸಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಈ ಸೇವೆಯನ್ನು ಪಡೆದುಕೊಂಡರು. ಮತದಾರರ ಮಾಹಿತಿಯನ್ನು ಸರಿಯಾಗಿ ದಾಖಲಿಸುವುದು ಮತ್ತು ಅಗತ್ಯ ಪ್ರಕ್ರಿಯೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಂತೆ, ಸಾರ್ವಜನಿಕರಲ್ಲಿ ಮನವಿ ಮಾಡಲಾಯಿತು. ಈ ಜಾಗೃತಿ ಕಾರ್ಯಕ್ರಮವು ಸಾರ್ವಜನಿಕರಿಂದ ಉತ್ತಮ ಸ್ಪಂದನೆ  ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಎಸ್‌ಡಿಪಿಐ ನಗರ ಘಟಕ ತಿಳಿಸಿದೆ. ಈ ಸಂದರ್ಭದಲ್ಲಿ ಸಲೀಮ ನದಾಫ್ –...

ಸಚಿವ ಜಮೀರ ಅಹ್ಮದ ಖಾನ್ ಜನ್ಮ ದಿನಾಚರಣೆ ನಿಮಿತ್ಯ ಆಸ್ಪತ್ರೆ ರೋಗಿಗಳಿಗೆ ಹಾಲು ಹಣ್ಣು ವಿತರಣೆ :

ಸಚಿವ ಜಮೀರ ಅಹ್ಮದ ಖಾನ್ ಜನ್ಮ ದಿನಾಚರಣೆ ನಿಮಿತ್ಯ ಆಸ್ಪತ್ರೆ ರೋಗಿಗಳಿಗೆ ಹಾಲು ಹಣ್ಣು ವಿತರಣೆ :  ಮುಧೋಳ   :  ಬಡವರಪರ‌ ಕಾಳಜಿ ಹೊಂದಿರುವ ಜನಪ್ರಿಯ ನಾಯಕ‌ ಜಮೀರ್ ಅಹ್ಮದ ಅವರಿಗೆ ದೇವರು ಹೆಚ್ಚಿನ ಆಯಸ್ಸು ಆರೋಗ್ಯ ಕರುಣಿಸಲಿ ಎಂದು ಕೆಪಿಸಿಸಿ‌ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಫಿಕ್ ಬೇಪಾರಿ  ಹಾರೈಸಿದರು. ವಸತಿ ಸಚಿವ ಜಮೀರ್ ಅಹ್ಮದ್ ಅವರ ಜನ್ಮದಿನದ ಹಿನ್ನೆಲೆ‌ ನಗರದ ಸರ್ಕಾರಿ‌ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು-ಹಣ್ಣು ವಿತರಿಸಿ ಮಾತನಾಡಿದ ಅವರು, ಜಮೀರ್ ಅಹ್ಮದ ಅವರು ಬಡವರ ಪರ ನಿರಂತರ ಕಾಳಜಿ ವಹಿಸಿ ಕೆಲಸ ಮಾಡುತ್ತಾರೆ. ನೂರಾರು ಬಡವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಹೆಚ್ಚಿನ ನೆರವು ನೀಡುವ ಮೂಲಕ ಸರ್ವರನ್ನು ಸಮಾನವಾಗಿ ಕಾಣು ಮನೋಭಾವ ಹೊಂದಿದ್ದಾರೆ. ಅಂತಹ ಮಹಾನ್ ನಾಯಕನಿಗೆ ಜೀವನದಲ್ಲಿ ಮತ್ತಷ್ಟು‌ ಯಶಸ್ಸು ದೊರೆತು ಬಡವರಪರ‌ ಕೆಲಸ‌ ಮಾಡಲು ದೇವರು ಶಕ್ತಿ ನೀಡಬೇಕು ಎಂದು‌ ಶುಭ ಕೋರಿದರು.  , ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಜಮಾದಾರ, ಸೈಯದ್ ಬಾಬಾವಲಿ, ದಾವಲ  ನದಾಫ, ಶಾಕಿರ್ ಬುಡ್ಡ, ಶೇಕ್  ಮುಜಮಿಲ್ ಬೇಪಾರಿ ಕೂತುಬು ನದಾಫ್, ರಫೀಕ್  ನದಾಫ್, ಫಯಾಜ್ ಮುಲ್ಲಾ  ನಜಿರ್ ನದಾಫ್ ಸೇರಿದಂತೆ ಇತರರು ಇದ್ದರು.