ಬನಹಟ್ಟಿ ನಗರದಲ್ಲಿ ಎಸ್‌ಡಿಪಿಐ ವತಿಯಿಂದ ಎಸ್‌ಐಆರ್ ಜಾಗೃತಿ ಕಾರ್ಯಕ್ರಮ
ರಬಕವಿ - ಬನಹಟ್ಟಿ: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ (ಎಸ್‌ಡಿಪಿಐ) ಬನಹಟ್ಟಿ ನಗರ ಘಟಕದ ವತಿಯಿಂದ ನಗರದ ಬಿಲಾಲ್ ಮಸೀದಿ ಸಮೀಪ ಎಸ್‌ಐಆರ್ (SIR) ಮ್ಯಾಪಿಂಗ್ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಎಸ್‌ಐಆರ್ ಮ್ಯಾಪಿಂಗ್ ಹಾಗೂ ಫಾರಂ ಭರ್ತಿ ಮಾಡುವ ವಿಧಾನ, ಅಗತ್ಯ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಅಲ್ಲದೆ, ಸಹಾಯವಾಣಿ (Help Desk) ಮೂಲಕ ಸ್ಥಳದಲ್ಲೇ ಸಾರ್ವಜನಿಕರಿಗೆ ಉಚಿತವಾಗಿ ಫಾರಂ ಭರ್ತಿ ಮಾಡಿಕೊಡುವ ಸೇವೆಯನ್ನು ಒದಗಿಸಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಈ ಸೇವೆಯನ್ನು ಪಡೆದುಕೊಂಡರು. ಮತದಾರರ ಮಾಹಿತಿಯನ್ನು ಸರಿಯಾಗಿ ದಾಖಲಿಸುವುದು ಮತ್ತು ಅಗತ್ಯ ಪ್ರಕ್ರಿಯೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಂತೆ, ಸಾರ್ವಜನಿಕರಲ್ಲಿ ಮನವಿ ಮಾಡಲಾಯಿತು.
ಈ ಜಾಗೃತಿ ಕಾರ್ಯಕ್ರಮವು ಸಾರ್ವಜನಿಕರಿಂದ ಉತ್ತಮ ಸ್ಪಂದನೆ
ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಎಸ್‌ಡಿಪಿಐ ನಗರ ಘಟಕ ತಿಳಿಸಿದೆ. ಈ ಸಂದರ್ಭದಲ್ಲಿ
ಸಲೀಮ ನದಾಫ್ – ಬನಹಟ್ಟಿ ನಗರ ಅಧ್ಯಕ್ಷ
ಅರ್ಬಾಜ್ ಆಸಂಗಿ – ಬನಹಟ್ಟಿ ನಗರ ಕಾರ್ಯದರ್ಶಿ
ಶೋಕತ್ ಜಾರೆ – ಬನಹಟ್ಟಿ ನಗರ ಉಪಾಧ್ಯಕ್ಷ
ಆಸಿಫ್ ಅತ್ತಾರ್
ಸಮೀರ್ ಮುಲ್ಲಾ ಹಾಗೂ ಸದಸ್ಯರುಗಳಾದ
ಸಾಜಿದ್ ಸಯ್ಯದ್
ಆರಿಫ್ ಜಮಖಂಡಿ
ಜುಬೇರ್ ಖಲೀಫಾ
ಅಲ್ತಾಫ್ ಮುಲ್ಲಾ ಇನ್ನಿತರರು ಇದ್ದರು.
Comments
Post a Comment