ಸಚಿವ ಜಮೀರ ಅಹ್ಮದ ಖಾನ್ ಜನ್ಮ ದಿನಾಚರಣೆ ನಿಮಿತ್ಯ ಆಸ್ಪತ್ರೆ ರೋಗಿಗಳಿಗೆ ಹಾಲು ಹಣ್ಣು ವಿತರಣೆ :
ಮುಧೋಳ : ಬಡವರಪರ ಕಾಳಜಿ ಹೊಂದಿರುವ ಜನಪ್ರಿಯ ನಾಯಕ ಜಮೀರ್ ಅಹ್ಮದ ಅವರಿಗೆ ದೇವರು ಹೆಚ್ಚಿನ ಆಯಸ್ಸು ಆರೋಗ್ಯ ಕರುಣಿಸಲಿ ಎಂದು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಫಿಕ್ ಬೇಪಾರಿ ಹಾರೈಸಿದರು.
ವಸತಿ ಸಚಿವ ಜಮೀರ್ ಅಹ್ಮದ್ ಅವರ ಜನ್ಮದಿನದ ಹಿನ್ನೆಲೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು-ಹಣ್ಣು ವಿತರಿಸಿ ಮಾತನಾಡಿದ ಅವರು, ಜಮೀರ್ ಅಹ್ಮದ ಅವರು ಬಡವರ ಪರ ನಿರಂತರ ಕಾಳಜಿ ವಹಿಸಿ ಕೆಲಸ ಮಾಡುತ್ತಾರೆ. ನೂರಾರು ಬಡವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಹೆಚ್ಚಿನ ನೆರವು ನೀಡುವ ಮೂಲಕ ಸರ್ವರನ್ನು ಸಮಾನವಾಗಿ ಕಾಣು ಮನೋಭಾವ ಹೊಂದಿದ್ದಾರೆ. ಅಂತಹ ಮಹಾನ್ ನಾಯಕನಿಗೆ ಜೀವನದಲ್ಲಿ ಮತ್ತಷ್ಟು ಯಶಸ್ಸು ದೊರೆತು ಬಡವರಪರ ಕೆಲಸ ಮಾಡಲು ದೇವರು ಶಕ್ತಿ ನೀಡಬೇಕು ಎಂದು ಶುಭ ಕೋರಿದರು.
, ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಜಮಾದಾರ, ಸೈಯದ್ ಬಾಬಾವಲಿ, ದಾವಲ ನದಾಫ, ಶಾಕಿರ್ ಬುಡ್ಡ, ಶೇಕ್ ಮುಜಮಿಲ್ ಬೇಪಾರಿ ಕೂತುಬು ನದಾಫ್, ರಫೀಕ್ ನದಾಫ್, ಫಯಾಜ್ ಮುಲ್ಲಾ
ನಜಿರ್ ನದಾಫ್ ಸೇರಿದಂತೆ ಇತರರು ಇದ್ದರು.
Comments
Post a Comment