*ಬಾಗಲಕೋಟೆ* / *ರಬಕವಿ - ಬನಹಟ್ಟಿ :* ಬಾಗಲಕೋಟೆ ಜಿಲ್ಲೆಯ ರಬಕವಿ ಬನಟ್ಟಿ ತಾಲೂಕಿನ ಬನಹಟ್ಟಿ ನಗರದಲ್ಲಿ ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ್ ಅವಳ ಹತ್ಯೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಗಜ ಸೇನೆ ತಾಲೂಕ ಘಟಕ ವತಿಯಿಂದ ಭಾರಿ ಪ್ರತಿಭಟನೆ ನಡೆಸಿದರು. ನಗರದ ಮಹಾತ್ಮ ಗಾಂಧಿ ವೃತ ಹತ್ತಿರ ಕರವೇ ಗಜ ಸೇನೆಯ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದಲ್ಲದೆ , ಕೆಲವು ಕಾಲ ರಸ್ತೆ ತಡೆದು ವಾಹನ ಸಂಚಾರವನ್ನು ಬಂದು ಮಾಡಿದ್ದರು. ಈ ಪ್ರತಿಭಟನೆಯ ಸಂದರ್ಭದಲ್ಲಿ ಮೌಲಾನಾ ಮೋಹಸಿನ್ಅಹಮದ್ ಗೋಕಾಕ್ ಮಾತನಾಡಿ , ಹುಬ್ಬಳ್ಳಿಯಲ್ಲಿ ನಡೆದಂತಹ ನೇಹಾ ಹಿರೇಮಠ ಅವರ ಭೀಕರ ಹತ್ಯವನ್ನು ಖಂಡಿಸುತ್ತೇವೆ . ಇಂತಹ ಘಟನೆ ನಿಜಕ್ಕೂ ದುರಂತ , ಇಂತಹ ಪರಿಸ್ಥಿತಿಯಲ್ಲಿ ನೆಹ ಹಿರೇಮಠ ಅವರ ತಂದೆ ರಂಜನ್ ಹಿರೇಮಠ ಅವರ ದುಃಖದಲ್ಲಿ ನಾವು ಸಹ ಭಾಗಿಯಾಗುತ್ತೇವೆ . ಹಾಗೂ ಎಂದೆಂದಿಗೂ ನಿಮ್ಮ ಜೊತೆ ನಾವು ಇರಲು ಬಯಸುತ್ತೇವೆ ಎಂದು ಹೇಳಿದರು . ಸರ್ಕಾರದ ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಪೃವೃತ್ತರಾಗಬೇಕು. ಈ ಘಟನೆ ಒಂದು ಎರಡು ಅಲ್ಲ ರುಕ್ಸಾನಾ ಎಂಬ ಯುವತಿಯನ್ನು ಕೂಡ ಸುಟ್ಟು ಹಾಕಿದ ಆರೋಪಿ ಪ್ರದೀಪ್, ಇದೇ...