Skip to main content

Posts

Showing posts from August, 2023

ನೇಕಾರರಿಗೆ 10 ಹೆಚ್ ಪಿ ಉಚಿತ ವಿದ್ಯುತ್ ಜಾರಿ ಮಾಡಿ , ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದಿಂದ ಪತ್ರ ಅಭಿಯಾನ ಚಳುವಳಿ:

 *ರಬಕವಿ ಬನಹಟ್ಟಿ*:  ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ  ಶ್ರೀ ಕಾಡಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ , ಕರ್ನಾಟಕ ನೇಕಾರ ಸೇವಾ ಸಂಘ ಇವರ ಆಶ್ರಯದಲ್ಲಿ ಸಭೆಯನ್ನು ನಿಯೋಜನೆ ಮಾಡಲಾಗಿತ್ತು .  ಕರ್ನಾಟಕ ಸರ್ಕಾರ  07-07-2024 ರಂದು ರಾಜ್ಯ ನೇಕಾರ ಒತ್ತಾಯದ  ಮೇರೆಗೆ  10 ಹೆಚ್ ಪಿ ಉಚಿತ ವಿದ್ಯುತ್ ಘೋಷಣೆ ಮಾಡಿದ್ದರು ಘೋಷಣೆ ಮಾಡಿಯು ಸರ್ಕಾರ ಅನುಷ್ಠಾನ ತರುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ  , ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘವು  ಸರ್ಕಾರಕ್ಕೆ ಮನವರಿಕೆ ಮಾಡುವುದು ಗೋಸ್ಕರ ,  ಪತ್ರ ಅಭಿಯಾನ ಚಳುವಳಿ ಮಾಡಲಾಗುವುದು   ಎಂದು ಕರ್ನಾಟಕ ರಾಜ್ಯ ನೇಕಾರರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ತಿರ್ಕಿ ಹೇಳಿದರು .   ಪ್ರತಿಯೊಬ್ಬರೂ ಪತ್ರ ಅಭಿಯಾನ ಪ್ರಾರಂಭಿಸೋಣ  ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನೇಕಾರರನ್ನು ಹೋರಾಟಕ್ಕೆ ಜಾಗೃತಿ ಮೂಡಿಸುವ ಕೆಲಸವನ್ನು ಪ್ರಾರಂಭ ಮಾಡಿ  , ಜಿಲ್ಲಾ ಮಟ್ಟದ ಸಭೆಯನ್ನು ಮಾಡಲಾಗುವುದು  ಹಾಗೂ ದಿನಾಂಕ 18-08-2023 ರಂದು  ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ನೇಕಾರರು ಮಾನಕಾಪೂರದಲ್ಲಿ ಸಭೆ ಸೇರಿ ಚರ್ಚಲಾಗುವುದು ನಾವುಗಳು ಕೂಡಾ ಸಭೆಗೆ ಭಾಗವಹಿಸಲಿದ್ದೆವೆ ಎಂದು ಹೇಳಿದರು .  ದಿ 27-08-2023 ರಂದು ರಬಕವಿ ಬನಹಟ್ಟಿಯಲ್ಲಿ ಬಾಗಲಕೋಟ ಜಿಲ್...

ಮುಸ್ಲಿಂ ವ್ಯಕ್ತಿ ಖಲೀಲ್ ಅವರ ಜೀವ ಬಚಾವ ಮಾಡಿದ ಹಿಂದೂ ಯುವಕ ವಿಠಲ್ ಒಡೆಯರ್ :

  ರಬಕವಿ ಬನಹಟ್ಟಿ  :   ಶೃದ್ಧಾಂಜಲಿ ಮದುವೆಯ ಕಾರ್ಯಕ್ರಮಗಳಿಗೆ  ಔತನಕೂಟ ಏರ್ಪಾಟ ಮಾಡಿಕೊಳ್ಳುವುದು ಸಹಜ , ಆದರೆ ಇತ್ತೀಚಿಗೆ ಸಾವಿನ ದವಡೆಯಿಂದ ಪಾರಾದ ವ್ಯಕ್ತಿ   ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ನಗರಸಭೆ ವ್ಯಾಪ್ತಿಯ ರಾಂಪುರ  ನಗರದ , ಖಲೀಲ್ ರಾಜನ್ನವರ್ ತನ್ನ ಸಂತಸ ಮುಗಿಲು ಮುಟ್ಟಿದ್ದಲ್ಲದೆ, ಜೀವ ಉಳಿದ ಹಾಗೂ ಉಳಿಸಿದಕ್ಕಾಗಿ , ಸಾವಿರಾರು ಜನತೆಗೆ ಔತನಕೂಟ ಏರ್ಪಡಿಸುವುದರ ಮೂಲಕ  ,    ಸೃಷ್ಟಿಕರ್ತನಿಗೆ  ಹೃದಯಪೂರ್ವಕವಾಗಿಅಭಿನಂದನೆ ಮಾಡುವುದರ ಮೂಲಕ , ನೆಮ್ಮದಿ ಕಾಣುವಲ್ಲಿ ವಿಶೇಷವಾಗಿತ್ತು. ನಡೆದಿದ್ದೇನು ?  ಈಚೆಗೆ ಬೆಳಗಾವಿ ಜಿಲ್ಲೆಯ ಮಲ್ಲಾಪುರ ಗ್ರಾಮದ ಬಳಿ ಘಟಪ್ರಭಾ ನದಿಯಲ್ಲಿ ಮುಳುಗುತ್ತಿದ್ದ ರಬಕವಿ-ಬನಹಟ್ಟಿ ನಗರಸಭೆಯ ವ್ಯಾಪ್ತಿಯ ರಾಮಪುರ ನಗರದ ವ್ಯಕ್ತಿ  ಖಲೀಲ ರಾಜನ್ನವರನನ್ನು ಹಿಂದೂ ಯುವಕ  ಮಲ್ಲಾಪುರ ಗ್ರಾಮದ ವಿಠ್ಠಲ ಒಡೆಯರ್ ಜೀವವನ್ನು ಕಾಪಾಡುವಲ್ಲಿ ಪೂರ್ಣ ಯಶಸ್ವಿಯಾಗಿದ್ದಾನೆ. ನದಿ ದಡದ ಬಳಿ ಸೈಕಲ್‌ನಲ್ಲಿ ಹೋಗುತ್ತಿದ್ದ ವಿಠ್ಠಲ ಘಟಪ್ರಭಾ ನದಿಯಲ್ಲಿ ಕಾರೊಂದು ಕೊಚ್ಚಿ ಹೋಗುತ್ತಿರುವದನ್ನು ಗಮನಿಸಿದ್ದಾನೆ. ಇಬ್ಬರು ಪ್ರಯಾಣಿಕರಿದ್ದ ಕಾರಿನಿಂದ ಓರ್ವ ಮಾತ್ರ ಹೊರ ಬಂದು ಈಜಿ ದಡ ಸೇರಿದ್ದಾನೆ. ಮತ್ತೊರ್ವ ಪ್ರಯಾಣಿಕ ವಾಹನದಲ್ಲಿ ಸಿಲುಕಿಕೊಂಡಿರುವದನ್ನು ಗಮನಿಸಿ ಈಜು ಬರುವದಿಲ್ಲವೆಂದು ಅರಿತ ವಿಠ್ಠಲ...

ದಿಕ್ಕೆ ಇಲ್ಲದ ಅನಾಥವಾದ ರಾಮಪುರ ಮುಖ್ಯರಸ್ತೆ

 *ರಬಕವಿ ಬನಹಟ್ಟಿ* :  ಅವಳಿ ನಗರಗಳು ತಾಲೂಕ ರಚನೆಯಾಗಿ  ಹಲವು ವರ್ಷಗಳು ಕಳೆದರೂ ಕೂಡ   ರಬಕವಿ ಬನಹಟ್ಟಿ ನಗರದ  ಸೌಂದರ್ಯ ಹಾಗೂ ಅಭಿವೃದ್ಧಿ ಬಗ್ಗೆ ಯಾರುತಲೆಕೆಡಿಸಿಕೊಳ್ಳುತ್ತಿಲ್ಲ , ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ನಗರ ಸಭೆಯ ಹೃದಯ ಭಾಗದಲ್ಲಿರುವಂತಹ  ರಾಮಪುರದ ಮುಖ್ಯ  ರಸ್ತೆಯ   ಒಳಚರಂಡಿಯ ಕಾಮಗಾರಿ ಮುಗಿದು ಕೆಲವು ವರ್ಷ ಕಳೆದರೂ ಕೂಡ ರಸ್ತೆ ಅಭಿವೃದ್ಧಿ  ಆಗದೆ , ಹಾಗೆ ಉಳಿದುಕೊಂಡಿರುವುದು  ಸಾರ್ವಜನಿಕರಲ್ಲಿ ಆಕ್ರೋಶ ಉಂಟು ಮಾಡಿದೆ . ರಬಕವಿ ಬನಹಟ್ಟಿ ನಗರಸಭೆ ಒಟ್ಟು ಜನಸಂಖ್ಯೆ ಒಂದು ಲಕ್ಷಕ್ಕಿಂತ ಅಧಿಕ ಹೆಚ್ಚು ಇರುವಂತ ಪ್ರದೇಶದಲ್ಲಿ ತೆಗ್ಗು  ದಿಣ್ಣೆಗಳಿಂದ ಕೂಡಿದ ರಸ್ತೆಯಲ್ಲಿ ,ಆಟೋ ಚಾಲಕರು ದ್ವಿಚಕ್ರನ ವಾಹನದ ಸವಾರರು  ಓಡಾಡಲು ಹರಸಹಾಸ  ಪಡುತ್ತಿದ್ದಾರೆ . ರಾಂಪುರ್ ನಗರದ ಮುಖ್ಯ ರಸ್ತೆ  ನಗರಸಭೆಯ ರಸ್ತೆಯೋ ? ಅಥವಾ ಪಿಡಬ್ಲ್ಯೂಡಿ ರಸ್ತೆಯೋ ? ಎನ್ನುವುದು  ಸಾರ್ವಜನಿಕರಲ್ಲಿ ಪ್ರಶ್ನೆಯಾಗಿ  ಕಾಡ್ತಾ ಇದೆ . ರಬಕವಿ ಬನಹಟ್ಟಿ ಅವಳಿ ನಗರಗಳ ಹೃದಯ ಭಾಗದಲ್ಲಿರುವಂತ ರಾಂಪುರ್ ಮುಖ್ಯ ರಸ್ತೆಯಲ್ಲಿ ಆಟೋ ಚಾಲಕರ ಹಾಗೂ ದ್ವಿಚಕ್ರ ವಾಹನಗಳ ಸವಾರರ ಓಡಾಟದ ಪರಿಸ್ಥಿತಿಯನ್ನು ನೋಡಿ  ಅಯ್ಯೋ ಪಾಪ  ಅನಿಸುತ್ತದೆ . ಕೆಲವು ತಿಂಗಳ ಹಿಂದೆ ಆಟೋ ಚಾಲಕರ ಸಂಘದ ವತಿಯಿಂದ ಪ್ರತಿಭಟನ...

ಸಾರ್ವಜನಿಕ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳದ , ರಬಕವಿ ಬನಹಟ್ಟಿ ನಗರಸಭೆಯ ಅಧಿಕಾರಿಗಳು*:

 *ರಬಕವಿ ಬನಹಟ್ಟಿ:*  ಬಾಗಲಕೋಟೆ ಜಿಲ್ಲೆಯ        ರಬಕವಿ ಬನಹಟ್ಟಿ  ನಗರಸಭೆ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆ ಆಗುವಂಥ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರ  ಆರೋಪವಾಗಿದೆ . ಬನಹಟ್ಟಿ ನಗರದಲ್ಲಿ ಕಳೆದ ಎರಡು ತಿಂಗಳಿನಿಂದ ಬಸ್ ನಿಲ್ದಾಣ ಹಾಗೂ ಪಶು ವೈದ್ಯಕೀಯ ಆಸ್ಪತ್ರೆಯ ಮಧ್ಯ ಮುಖ್ಯರಸ್ತೆಯಲ್ಲಿ ಹಾಗೂ  ಜನಬೀಡ ಪ್ರದೇಶದಲ್ಲಿ ,ಒಳಚರಂಡಿ ಕುಸಿದು  ಹೋಗಿ ಗುಂಡಿಯು ನಿರ್ಮಾಣವಾಗಿದ್ದರಿಂದ , ಸಾರ್ವಜನಿಕರಿಗೆ ಆತಂಕ ಸೃಷ್ಟಿಯಾಗಿದೆ . ಈಗಾಗಲೇ ಕೆಲವು ಜನ ಈ ಗುಂಡಿಯಲ್ಲಿ ಬಿದ್ದು ತಲೆ ಒಡೆದುಕೊಂಡಿದ್ದಾರೆ ಎಂದು ಪ್ರತ್ಯಕ್ಷ ಧರಿಸಿಗಳು ಅಳಲು ತೋಡಿಕೊಂಡಿದ್ದಾರೆ .   ನಗರದ ಬಸ್ ನಿಲ್ದಾಣ ಹತ್ತಿರ ಪಶುವೈದ್ಯಕೀಯ ಆಸ್ಪತ್ರೆ ಮುಂದೇನೆ ಗುಂಡಿಯು ಇರುವುದರಿಂದ ಪಶು ವೈದ್ಯಕೀಯ ಆಸ್ಪತ್ರೆಯವರು ನಗರಸಭೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕೂಡ  ಏನು ಪ್ರಯೋಜನವಾಗಲಿಲ್ಲ  ಸಾರ್ವಜನಿಕರಿಗೆ ತೊಂದರೆ ಆಗುವಂತ ಸಮಸ್ಯೆಗಳನ್ನು ನಗರಸಭೆ ಅಧಿಕಾರಿಗಳು ಸ್ಪಂದಿಸಿದಿದ್ದರೆ ,ಗಣನೆಗೆ ತೆಗೆದುಕೊಳ್ಳದಿದ್ದರೆ , ಈ ಒಳ ಚರಂಡಿಯ ಗುಂಡಿಯಲ್ಲಿ ಸಾರ್ವಜನಿಕರು ಬಿದ್ದು ಅನಾಹುತ ಗೊಂಡರೆ , ಸ್ಥಳೀಯ ನಗರಸಭೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಯಾಗಬ...

ಕರ್ನಾಟಕ ರಾಜ್ಯ ರೈಲ್ವೆ ಹೋರಾಟ ಸಮಿತಿ ನಿಯೋಗ ದೆಹಲಿಗೆ

   ಬಾಗಲಕೋಟೆ  :        ರೈಲ್ವೆ ಹೋರಾಟ ಸಮಿತಿಯ ನಿಯೂಗ ಬಾಗಲಕೋಟ್ ಲೋಕಸಭಾ ಮತಕ್ಷೇತ್ರದ ಸಂಸದ PC ಗದ್ದಿಗೌಡರ ,  ಸಂಸದ ಅಣ್ಣಾ ಸಾಬ ಜೊಲ್ಲೆ ಅವರನು    ಭೇಟಿ ಮಾಡಿ ,   ಕುಡಚಿ - ಬಾಗಲಕೋಟೆ   ರೈಲ್ವೆ ಮಾರ್ಗದ     ಕಾಮಗಾರಿಯನ್ನು , ಕುಡಚಿ ಕಡೆಯಿಂದ ಲೋಕಾಪುರ   ದವರೆಗೆ ಏಕಕಾಲ ಪ್ರಾರಂಭಿಸಲು ರೈಲ್ವೆ ಮಂತ್ರಿಗಳ ಮೇಲೆ ಒತ್ತಡ   ತರಬೇಕು  ಎಂದು  ರಾಜ್ಯ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ   ಕೂತುಬುದ್ದಿನ ಖಾಜಿ  ,    ರಾಜ್ಯ ಉಪಾಧ್ಯಕ್ಷ    ಶ್ರೀನಿವಾಸ ಬಳ್ಳಾರಿ  ,   ಖ್ಯಾತ ಬಾಗಲಕೋಟೆ ಜಿಲ್ಲೆಯ ಜವಳಿ ಉದ್ಯಮಿ   ಗಣಪತ್ತ ರಾವ ಹಜಾರೆ ,  ಜಿಲ್ಲೆಯ ಖ್ಯಾತ ವೈದ್ಯರಾದ ಡಾಕ್ಟರ್ ರವಿ ಜಮಖಂಡಿ  ,     ಇನ್ನೂ ಕೆಲವು ಹಲವು ವ್ಯಕ್ತಿಗಳ ಒಳಗೊಂಡ     ನಿಯೋಗ   ಇಂದು   ದೆಹಲಿಯಲ್ಲಿ ಒತ್ತಾಯಸಿತು.      ಇದೇ ಸಂದರ್ಭದಲ್ಲಿ ಇಬ್ಬರು ಸಂಸದರು ಅವರನ್ನು  ಸ್ಪಂದಿಸಿ ,  ಕರ್ನಾಟಕ ರಾಜ್ಯ ರೈಲ್ವೆ ಹೋರಾಟ  ಸಮಿತಿಯ ಪದಾಧಿಕಾರಿಗಳನ್ನು ಕೇಂದ್ರ ಸಚಿವರಾದ , ಶ್ರೀ ಪ್ರಲ್ಲಾದ ಜೋಶಿ ಅವರನ್ನು ಭೆಟ್ಟಿ ಮಾಡಿಸಿ , ಕ...

ಮುಸ್ಲಿಂ ಮೀಸಲಾತಿ ರದ್ದು ಹಿಂಪಡೆಯಲು ಆಗ್ರಹಿಸಿ, ತಹಶೀಲ್ದಾರಗೆ ಮನವಿ,

ಬಾಗಲಕೋಟೆ : ಮುಧೋಳ : ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂದುಳಿದ ಆಯೋಗದ ಅನುಮತಿ ಇಲ್ಲದೆ ಮುಸ್ಲಿಂ ಸಮುದಾಯದವರಿಗೆ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಇದ್ದ ಶೇ.4ರ ಮೀಸಲಾತಿ ರದ್ದುಗೊಳಿಸಿರುವುದನ್ನು ವಾಪಸ್‌ ಪಡೆಯಬೇಕೆಂದು ಆಗ್ರಹಿಸಿ ರಾಜ್ಯ ಮುಸ್ಲಿಂ ಯೂನಿಟಿ ಮುಧೋಳ ತಾಲೂಕು ಘಟಕದಿಂದ ತಹಶೀಲ್ದಾರ ವಿನೂದ ಹತ್ತಳ್ಳಿ ಅವರಿಗೆ ಮನವಿ ಸಲ್ಲಿಸಲಾಯಿತು. ಡಿಜೆ ಹಳ್ಳಿ, ಕೆಜೆ ಹಳ್ಳಿ ಹಾಗೂ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಗಳಲ್ಲಿ ಅಮಾಯಕ ಮುಸ್ಲಿಂ ಯುವಕರನ್ನು ಪ್ರಕರಣದಿಂದ ಕೈ ಬಿಡುವುದು ಹಾಗೂ ಉಡುಪಿಯಲ್ಲಿ ನಡೆದ ವಿಡಿಯೋ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು. ಹಿರಿಯ ನ್ಯಾಯವಾದಿ ಐ.ಎಚ.ಅಂಬಿ, ಮುಸ್ಲಿಂ ಯೂನಿಟಿ ತಾಲೂಕು ಅಧ್ಯಕ್ಷ ಬಿಲಾಲ ಬಾನದಾರ, ಮಾತನಾಡಿ, ಮುಸ್ಲಿಂ ಸಮುದಾಯದ ಮೇಲೆ ಇಲ್ಲಸಲ್ಲದ ಆರೋಪ, ಹಲ್ಲೆಗಳು ನಿರಂತರವಾಗಿ ನಡೆಯುತ್ತಿವೆ. ಟಿಪ್ಪು ಸುಲ್ತಾನ ಮೆರವಣಿಗೆ, ಮುಸ್ಲಿಂ ಬಾಂಧವರ ಜನ ಜಾಗೃತಿ ಸಮಾವೇಶ ಸೇರಿದಂತೆ ಬಹುತೇಕ ಕಡೆಗಳಲ್ಲಿ ಮುಸ್ಲಿಂರ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕೆಎಂಯೂ ಬಲವಾಗಿ ಖಂಡಿಸುತ್ತೇದೆ ಎಂದರು. ರಾಜ್ಯ ಸರ್ಕಾರ ಸ್ವಯಂ ಪ್ರೇರಿತವಾಗಿ ಮೀಸಲಾತಿ ರದ್ದು  ಹಿಂಪಡೆಯಬೇಕು. ಅಮಾಯಕರಿಗೆ ಶಿಕ್ಷೆಯಿಂದ ಬಿಡುಗಡೆಗೊಳಿಸಬೇಕು ಹಾಗೂ ಮುಸ್ಲಿಂ ಸಮುದಾಯಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು. ಕರ್ನಾಟಕ ಮುಸ್ಲಿಂ ಯುನಿಟಿ ಮುಧೋಳ ತಾಲ್ಲೂಕು ಘಟಕದ ವತಿಯ...

ಕಾಲುವೆಗೆ ಉರುಳಿದ ರಾಂಪುರ್ ನಗರದ ಕಾರು ,ಸಾಹಸ ಮೆರೆದ ಯುವಕ ಚೇತನ್ ಒಡೆಯರ್ :

ಕಾಲುವೆಗೆ ಉರುಳಿದ ಕಾರು ಸಾಹಸ ಮೆರೆದ ಯುವಕ  ಘಟಪ್ರಭಾ: ನಗರಕ್ಕೆ ಅರಿಸಿಣ ಕೊಳ್ಳಲು ಬಂದಿದ್ದ ಬನಹಟ್ಟಿ'ಯ ರಾಮಪುರಿನ ವ್ಯಾಪಾರಿಗಳಾದ ಖಲೀಲ್ ರಾಜಣ್ಣವರ ಮತ್ತು ಮಲ್ಲಿಕ ಮುಲ್ಲಾ ಅವರು ತಮ್ಮ ಟಾಟಾ ಕಂಪೆನಿಯ ನೆಕ್ಸಾನ್ ಕಾರಿನಲ್ಲಿ ಘಟಪ್ರಭಾ ಹಾಗೂ ಮಲ್ಲಾಪೂರದ ವಾಹನ ದಟ್ಟಣೆ ತಪ್ಪಿಸಲು ಘಟಪ್ರಭಾ ಎಡದಂಡೆ ಕಾಲುವೆ ಮೇಲೆ ಹೊಸದಾಗಿ ನಿರ್ಮಿಸಿರುವ ಬೈಪಾಸ್ ರಸ್ತೆಯ ಮುಖಾಂತರ ಸಾಗುತ್ತಿರುವಾಗ ಮಲ್ಲಾಪೂರ ಪುಲ್ ಹತ್ತಿರ ದುರದುಂಡಿ-ಮಲ್ಲಾಪೂರದ ಹಾಗೂ ಬೈಪಾಸ್ ರಸ್ತೆ ಸಂದಿಸುವ (ಕ್ರಾಸ್ ಆಗುವ) ಸ್ಥಳದಲ್ಲಿ ರಸ್ತೆ ತಗ್ಗಾಗಿದ್ದು ಬೈಪಾಸ್ ರಸ್ತೆಯ ಎರಡು ಬದಿಗಳು ದಿಬ್ಬಾಗಿದ್ದು ಆ ಸ್ಥಳದಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರು ದಿಬ್ಬದ ಕಾರಣದಿಂದ ಚಾಲಕನ ನಿಯಂತ್ರಣ ಕಳೆದುಕೊಂಡು ಕಾಲುವೆಗೆ ಉರುಳಿದೆ.  ಆ ಸಮಯದಲ್ಲಿ ಧೈರ್ಯ ತೋರಿದ ವ್ಯಾಪಾರಿಗಳಿಬ್ಬರು ಕಾರಿನ ಬಾಗಿಲು ತೆರೆದು ಹೊರ ಬಂದಿದ್ದಾರೆ ಅದರಲ್ಲಿ ಈಜು ಕಲಿತಿದ್ದ ಮಲ್ಲಿಕ ಮುಲ್ಲಾ ಈಜಿ ದಡ ಸೇರಿದ್ದಾರೆ ಇನ್ನು ಕಾರಿನಿಂದ ಹೊರ ಬಂದರು ಈಜು ಬಾರದ ಖಲೀಲ್ ರಾಜಣ್ಣವರ ನೀರಿನಲ್ಲಿ ಮುಳುಗುತಿದ್ದಾಗ ಅದೆ ದಾರಿಯಲ್ಲಿ ಸಾಗುತ್ತಿದ್ದ ಪಾಮಲದಿನ್ನಿ ಗ್ರಾಮದ ಇನ್ನು ಮಿಸೆ ಚಿಗುರದ ಯುವಕ ಚೇತನ ವಿಠ್ಠಲ ಒಡೆಯರ ದೇವರಾಗಿ ಬಂದು ನೀರಿನಲ್ಲಿ ಮುಳುಗುತಿದ್ದ ಖಲೀಲ್ ರಾಜಣ್ಣವರ ಅವರನ್ನು ತನ್ನ ಪ್ರಾಣವನ್ನು ಲೆಕ್ಕಿಸದೆ ಕಾಪಾಡಿ ಸಾಹಸ ಮೆರೆದಿದ್ದಾನೆ....

ರಬಕವಿ ಬನಹಟ್ಟಿ ತಾಲೂಕ ತಹಶೀಲ್ದಾರ್ ಕಚೇರಿಯಲ್ಲಿ ಮೊದಲ ಬಾರಿಗೆ ವ್ಯಸನ ಮುಕ್ತ ಕಾರ್ಯಕ್ರಮ :

 *ರಬಕವಿ ಬನಹಟ್ಟಿ :*  ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ನಗರಗಳಲ್ಲಿ ಮೊದಲ ಬಾರಿಗೆ ವ್ಯಸನ ಮುಕ್ತ    ಕಾರ್ಯಕ್ರಮವನ್ನು ನಗರದ ತಹಸಿಲ್ದಾರ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು .  ನಂತರ ನಗರದ ಬೀದಿಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿ ,   ಜಾಥಾ    ಮಾಡುವ ಮೂಲಕ , ನಮ್ಮ ದೇಶ ನಮ್ಮ ಗ್ರಾಮ ವ್ಯಸನ ಮುಕ್ತವಾಗಬೇಕೆಂದು ಜನರಲ್ಲಿ ಜಾಗೃತಿ ಮೂಡಿಸಿದರು.       ಹಿಂದಿನ    ಕಾಲದಲ್ಲಿ ಜನರು      ಹೋಟೆಲ್ ಗಳಿಗೆ    ಹೋಗಿ ಚಹಾ ಸೇವಿಸೋಕೆ ಹಿಂದೇಟು ಹಾಕುತ್ತಿದ್ದರು.    ಆದರೆ ಈಗಿನ ಜನ ನಿರ್ಭಯವಾಗಿ ಬಾರ.ಗೆ ತೆರಳಿ ರಾಜಾರೋಷವಾಗಿ ಸಾರಾಯಿ ಕುಡಿಯುವುದು ಹಾಗೂ ಧೂಮಪಾನ ಮಾಡುವ ಮೂಲಕ ದುಷ್ಟ ಚಟಗಳಿಗೆ ಬಲಿಯಾಗಿ , ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮುಂದೆ ನೀವು ಹಾಗೆ ಆಗಬೇಡಿ ಒಳ್ಳೆ ವಿದ್ಯಾರ್ಥಿಗಳಾಗಿ ದೇಶಕ್ಕೆ ಒಳ್ಳೆ ಪ್ರಜೆಗಳಾಗಿ ದುಷ್ಟ ಚಟಗಳಿಗೆ ದಾಸರಾಗದೆ ಒಳ್ಳೆಯತನದಿಂದ ಬಾಳಿ ಬದುಕಿ ಎಂದು ಗುರು ಸಿದ್ದೇಶ್ವರ ಮಹಾಸ್ವಾಮಿಜಿಗಳು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ತಿಳಿಹೇಳಿದರು.  ಇದೇ ಸಂದರ್ಭದಲ್ಲಿ ¹ ಪರಮಪೂಜ್ಯ ಗುರುಸಿದ್ದೇಶ್ವರ ಮಹಾಸ್ವಾಮೀಜಿಗಳು ಬ್ರಹ್ಮಾನಂದ ಮಠ ರಬಕವಿ. ಎಸ್ ಎಲ್ ಕಾಗಿ ಗ್ರೇಡ್2 ತಹಶೀಲ್ದಾರ್ ಶ್ರೀಕಾಂತ್ ಮಾಯಣ್ಣವರ್...