ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ "ರೋಜಾ" ಮಹತ್ವವಾದ ಸ್ತಂಭ, ರಮಜಾನ್ ಯಾಕೆ ಆಚರಿಸಲ್ಪಡುತ್ತದೆ ? ಲೇಖನ : ಮಹಿಬೂಬ್ ಮ ಬಾರಿಗಡ್ಡಿ
ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ "ರೋಜಾ" ಮಹತ್ವವಾದ ಸ್ತಂಭ,ರಮಜಾನ್ ಯಾಕೆ ಆಚರಿಸಲ್ಪಡುತ್ತದೆ ? 1) ಕಲ್ಮಾ ಏ ತೋಯ್ಯಬ , 2 )ರೋಜಾ , 3 ) ಜಕಾತ್ , 4 )ನಮಾಜ್ , 5 ) ಹಜ್ ಇವೆಲ್ಲ ಇಸ್ಲಾಂ ಧರ್ಮದ ಭದ್ರಬುನಾದಿಗಳು ಅಂದರೆ 5 ಫೌಂಡೇಶನ್ ಗಳು, ಉದಾಹರಣೆಗೆ , ಒಂದು ಮನೆಗೆ ಅದರ ಅಡಿಪಾಯ ಫೌಂಡೇಶನ್ ಹೇಗೆ ಮುಖ್ಯವಾಗಿರುತ್ತದೆಯೋ, ಹಾಗೆ ಅದರ ಸ್ತಂಭಗಳು ಕೂಡ ಅಷ್ಟೇ ಮುಖ್ಯ , ಅದೇ ರೀತಿ ಕೂಡ ಇಸ್ಲಾಂ ಧರ್ಮದಲ್ಲಿ 5 ಸ್ತಂಭಗಳಲ್ಲಿ ಒಂದು ರಮಜಾನ್ ತಿಂಗಳಿನಲ್ಲಿ " ರೋಜಾ " ( ಉಪವಾಸ ) ಆಚರಣೆ ಮಾಡುವಂತ ಒಂದು ಸ್ತಂಭ , ಈ ರೋಜಾ ಉಪವಾಸ ಆಚರಣೆ ಶ್ರೀಮಂತ, ಬಡವ,ಮೇಲು, ಕೀಳು ಅನ್ನುವಂತ ಭಾವನೆ ಇಲ್ಲದೆ ಪ್ರತಿಯೊಬ್ಬರೂ ಕಂಪಲ್ಸರಿ ಮಾಡಲೇಬೇಕಾದಂತಹ ಉಪವಾಸ "ರೋಜಾ" ಆಗಿದೆ . ಇಸ್ಲಾಂ ಧರ್ಮದಲ್ಲಿ ಕೇವಲ ರೋಜಾ ಉಪವಾಸ ಇರುವುದು ಅಷ್ಟೇ ಅಲ್ಲದೆ, ತನ್ನ ಇಡೀ ದೇಹ ವೆ "ರೋಜಾ " ಉಪವಾಸ ಮಾಡಿದರೆ ಮಾತ್ರ ಪೂರ್ಣ ಪ್ರಮಾಣದಲ್ಲಿ ಉಪವಾಸ ಆಚರಣೆ ಆಗುವುದು ಸತ್ಯ. ಇಡೀ ದೇಹವೇ ರೋಜಾ ಉಪವಾಸ ಅಂದರೆ ಏನು ಅಂತೀರಾ ? ಬನ್ನಿ ತಿಳಿಯೋಣ , ತನ್ನ ಬುದ್ಧಿ ಈ ಉಪವಾಸ ಆಚರಣೆಯ ಸಂದರ್ಭದಲ್ಲಿ ಕೆಟ್ಟ ದುರಾಲೋಚನೆ ಮಾಡತಕ್ಕದ್ದು , ಕಣ್ಣುಗಳಿಂದ ಕೆಟ್ಟದ್ದನ್ನು ನೋಡ ಬಾರದು , ನಾವು ಮಾತಾಡುವಂತ ಬಾಯಿಂದ ಕೆಟ್ಟ ಪದಗಳ ಬಳಸ ಬಾರದು...