Skip to main content

Posts

Showing posts from December, 2023

ಕಲಾಕೃತಿಯಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡುತ್ತಿರುವ ಶಿಕ್ಷಕ , ಸಲೀಂ ಎಂ ಡಾಂಗೆ

ರಬಕವಿ ಬನಹಟ್ಟಿ ಹೊಸ ವರ್ಷದ ಆಚರಣೆ  ಬಂತಂದ್ರೆ ಕುಡಿದು ಕುಪ್ಪಳಿಸವುದು ಎಲ್ಲೆಡೆ ಕಾಣಸಿಗುತ್ತದೆ .  ಇಲ್ಲೊಬ್ಬ  ವಿಶಿಷ್ಟವಾದ ಕಲಾ ಶಿಕ್ಷಕರು ಒಬ್ಬರಿದ್ದಾರೆ , ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಸಲೀಂ ಎಂ  ಡಾಂಗೆ ಇವರು ಕಲಾ ಕೃತಿಗಳನ್ನು ವಿಶಿಷ್ಟ ರೂಪದಲ್ಲಿ ರಚನೆ ಮಾಡುತ್ತಾರೆ . ಸೂಫಿ ಸಂತರು , ಬುದ್ಧ  , ಬಸವ ಪುರಂದರದಾಸರು ಇನ್ನು ಅನೇಕ ಮಹಾತ್ಮರು ಸಮಾಜಕ್ಕೆ ಶಾಂತಿ ಸಂದೇಶಗಳನ್ನು ಸಾರಿದ ವಚನಗಳ ಸಾರವನ್ನು ತಮ್ಮ ವಿಭಿನ್ನ ಚಿತ್ರಕಲೆಗಳ ಮೂಲಕ ಗ್ರೀಟಿಂಗ್ಸ್ ಗಳಲ್ಲಿ ಬಿಡಿಸಿ , ಅದಕ್ಕೊಂದು ಒಳ್ಳೆಯ ಹೆಸರುವನ್ನು ಕೊಟ್ಟು ಅದನ್ನು ವರ್ಣ ರಂಜಿತ  ಚಿತ್ರದಲ್ಲಿ ಮುದ್ರನ (ಪ್ರಿಂಟ್ ) ಹಾಕಿ ,ಇನ್ನೇನು ಹೊಸ ವರ್ಷ ಬರುವಷ್ಟರಲ್ಲಿಯೇ ,  ವಾರದ ಮುಂಚೆ ,  ಕೋಮುಸೌಹಾರ್ದತೆ ಯನ್ನು  ಎತ್ತಿ ಹಿಡಿಯಲಿಕ್ಕೆ ,ಎಲ್ಲ ಸಮಾಜಗಳಿಗೆ ,ಶಾಂತಿ ಸಂದೇಶಗಳನ್ನು ತಮ್ಮ ವಿಭಿನ್ನ ಚಿತ್ರಕಲಾಗಳ ಮೂಲಕ ಗ್ರೀಟಿಂಗ್ಸ್ ಗಳನ್ನು ರವಾನೆಯನ್ನು ಮಾಡುವುದರ ಮೂಲಕ ಅವರು  ಸತ್ - ಸಂಪ್ರದಾಯವನ್ನು ಈ ವಿಶಿಷ್ಟ ಚಿತ್ರಕಲಾ ಶಿಕ್ಷಕರು ರೂಡಿಸಿಕೊಂಡು ಬಂದಿದ್ದಾರೆ . ದಯವೇ ಧರ್ಮದ ಮೂಲವಯ್ಯ , ನಿಮ್ಮ ಏಕತೆ  , ನನ್ನ ಪೂಜೆ , ನನ್ನ ಉಳಿಸಿ ಜಗತ್ತು  ರಕ್ಷಿಸಿ  , ಜೈ ಭಾರತ ಜನನಿಯ...

ಚಳಿಯಲ್ಲಿ ನಿರ್ಗಗತಿಗಳಿಗೆ ಆಸರೆಯಾದ, ಕರವೇ ಬಶೀರ್ ಜಮಾದಾರ್.*

*ಚಳಿಯಲ್ಲಿ ನಿರ್ಗಗತಿಗಳಿಗೆ ಆಸರೆಯಾದ, ಕರವೇ ಬಶೀರ್ ಜಮಾದಾರ್.*  *ರಬಕವಿ ಬನಹಟ್ಟಿ*  ತಂದೆ ತಾಯಿಗಳು ಇದ್ದರೂ ಈಗಿನ ಕಾಲದಲ್ಲಿ ಆಶ್ರಮಕ್ಕೆ ಬಿಟ್ಟು ಬರುವಂತ ಕಲಿಯುಗದಲ್ಲಿ , ಇಲ್ಲೊಬ್ಬ್ ಸಾಮಾಜಿಕ ಹೋರಾಟಗಾರ ಸತತವಾಗಿ 7 ವರ್ಷಗಳಿಂದ ತಂದೆ ಪುಣ್ಯ ಸ್ಮರಣೆಯ ಅಂಗವಾಗಿ ಕಾಯಕ ಮಾಡುತ್ತಾ ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಪ್ರಧಾನ ಕಾರ್ಯದರ್ಶಿಯಾದ ಬಶೀರ್ ಜಮಾದಾರ್ ಇವರು ವರ್ಷದ ಕಡೆಯ ಡಿಸೆಂಬರ್ ಬಂತಂದರೆ ವಿಶೇಷವಾಗಿ ತನ್ನ ತಂದೆ ಯ ಪುಣ್ಯಸ್ಮರಣೆ ನೆನಪಿನ ಗೋಸ್ಕರ ನೀರ್ಗತಿಯರನ್ನು ಗುರುತಿಸಿ ಬಸ್ ನಿಲ್ದಾಣ,  ಮಂದಿರ ಮಠಗಳು , ಮಸೀದಿ ಹತ್ತಿರ ಬೀದಿಯಲ್ಲಿ ಮಲಗಿರುವಂತ ಅನಾಥರನ್ನು ಗುರುತಿಸಿ, ಅವರಿಗೆ ಊಟ ನೀರು ಕೊಟ್ಟು , ಅವರ ಮಾತುಗಳ ಆಲಿಸಿ  ಚಳಿಯಲ್ಲಿ ದಿಕ್ಕು ಇಲ್ಲದವರ ಅನಾತ್ ನಿರ್ಗತಿಯರಿಗೆ ಮಲಗಲಿಕ್ಕೆ ರಗ್ಗು ಬೆಡ್ಸಿಟ್ಟುಗಳನ್ನು ಕೊಟ್ಟು, ತನ್ನ ತಂದೆ ಸಿಕಂದರ್ ಸಾಬ್ ಹೆಸರಿನಲ್ಲಿ ಪುಣ್ಯದ ಕೆಲಸ ಮಾಡುತ್ತಿದ್ದಾರೆ.  ಬಶೀರ್ ಜಮಾದಾರ್ ಇವರು ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಒಬ್ಬ ಆಟೋ ಚಾಲಕನಾಗಿ ವೃತ್ತಿಯನ್ನು ಮಾಡುತ್ತಿದ್ದು , ಇವರು ಮಾಡುವಂತಹ ತಂದೆಯ ಹೆಸರಿನಲ್ಲಿ ಕಾಯಕವನ್ನು ಹಲವರಿಗೆ ಪ್ರೀತಿ ಮೆಚ್ಚುಗೆ ಪಾತ್ರವಾಗಿದ್ದಾರೆ.  ಇದೇ ಸಂದರ್ಭದಲ್ಲಿ ಸುರೇಶ್ ಗೋಕಾವಿ , ರಮೇಶ್ ಶಿರೋಳ , ವಿಜಯ್  ಕಂಬಾರ್ ಹಾಗೂ ಚನ್ನಪ್ಪ ಪಾಟೀ...