Skip to main content

Posts

Showing posts from July, 2025

500 ಕೋಟಿ ಬಾರಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣದ ಸಂಭ್ರಮ :

500 ಕೋಟಿ ಬಾರಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣದ ಸಂಭ್ರಮ  :   ಬಾಗಲಕೋಟೆ  /   ರಬಕವಿ - ಬನಹಟ್ಟಿ :  ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪೈಕಿ  ಮಹತ್ವದ ಯೋಜನೆಯದ ಶಕ್ತಿ ಯೋಜನೆಯು 11.06.2023 ಜಾರಿಗೊಳಿಸುವ ಮೂಲಕ ಎರಡು ವರ್ಷ ಪೂರೈಸಿ,  ರಾಜ್ಯದ ಎಲ್ಲಾ ಮಹಿಳೆಯರು ವಿದ್ಯಾರ್ಥಿನಿಯರು ಸೇರಿದಂತೆ ಸರಿಸುಮಾರು 500 ಕೋಟಿ ಫಲಾನುಭವಿಗಳು  ಪ್ರಯಾಣ ಮಾಡುವ ಮೂಲಕ ಶಕ್ತಿ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡಿರುತ್ತಾರೆ.   ಸದರಿ ಶಕ್ತಿ ಯೋಜನೆಯ ಸಂಭ್ರಮಾಚರಣೆಯನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಾಗಲಕೋಟೆ ವಿಭಾಗ ಬನಹಟ್ಟಿ ಬಸ್ ನಿಲ್ದಾಣದಲ್ಲಿ  ಬಸ್ ಒಂದನ್ನು  ಪೂಜೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಡಿ 500 ಕೋಟಿ ಬಾರಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿರುವ ಸಂಭ್ರಮದ ಅಂಗವಾಗಿ ಮಾತನಾಡಿದ , ತೇರದಾಳ್ ಮತಕ್ಷೇತ್ರದ ಶಾಸಕ  ಸಿದ್ದು ಸವದಿ  ಯೋಜನೆಯಿಂದ ಜನರಿಗೆ ಒಳ್ಳೆದಾಗಿದೆ . ಅದೇ ಪ್ರಕಾರ ಊರು ಕೂಡ ಡೆವಲಪ್ಮೆಂಟ್ ಆಗಬೇಕು ಅನ್ನೋದು ನನ್ನ ಭಾವನೆಯಾಗಿದೆ . ಏಕೆಂದರೆ ಎಲ್ಲ ತರಹದ ನಿತ್ಯ ಬಳಕೆಯ ವಸ್ತುಗಳ ಬೆಲೆಗಳು  ಏರಿಕೆ ಗಳಾಗಿವೆ ಇದರಿಂದ ಈ ಯೋಜನೆ ಸುಧಾರಣೆ ಆಗಿದೆ.   ರೆಗುಲರ್ ಆಗ...

ರಬಕವಿ - ಬನಹಟ್ಟಿ ನಗರಸಭೆ ವಾರ್ಡ್ ಚುನಾವಣೆ ಕಾವು :

ರಬಕವಿ - ಬನಹಟ್ಟಿ ನಗರಸಭೆ ವಾರ್ಡ್  ಚುನಾವಣೆ ಕಾವು  :       ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ನಗರ ಸಭೆಯ ಆಡಳಿತ ಮಂಡಳಿಯ  ಚುನಾವಣೆಗೆ ಇನ್ನೂ ಸಾಕಷ್ಟು ಸಮಯಾವಕಾಶವಿದ್ದರೂ,  ಈಗಲೇ ಚುನಾವಣೆ ಕಾವು ಬಲು ಜೋರಾಗಿಯೇ ಕಾಣ್ತಾ ಇದೆ.     ಒಂದಿಬ್ಬರು ಹಾಲಿ ಅಭ್ಯರ್ಥಿಗಳ ಹೊರತು ಪಡಿಸಿದರೆ, ಉಳಿದೆಲ್ಲ ಇವರ ವಿರುದ್ಧ ಸೆಡ್ಡು ಹೊಡೆಯಲು ತೆರೆ ಮರೆಯಲ್ಲಿ ಅಭ್ಯರ್ಥಿಗಳು ತಯಾರಾಗುತ್ತಿದ್ದಾರೆ. ನಗರ ಸಭೆ  ಚುನಾವಣೆ ಇದಾಗಿದ್ದರೂ ಪಕ್ಷ ಮತ್ತು ಜಾತಿ ರಾಜಕಾರಣದ ಗತ್ತು, ಗಮ್ಮತ್ತು ಇಲ್ಲಿ ಸಾಕಷ್ಟು ಕೆಲಸ ಮಾಡಲಿದೆ.       ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲೂ ಅಭ್ಯರ್ಥಿಗಳಾಗಲು ಮುಖಂಡರು ಸಜ್ಜಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಬಹುತೇಕ ಅಭ್ಯರ್ಥಿಗಳು ಬೇರೆ ಬೇರೆ ಪಕ್ಷದ ವಲಸೆ ಹೋಗುವ ಸಾಧ್ಯತೆ ಕೂಡ ತಳ್ಳಿ  ಹಾಕುವಂತಿಲ್ಲ . ವಾರ್ಡ್ ನಂಬರ್ 05 ರಲ್ಲಿ ಭಾರಿ  ತ್ರಿಕೋನ ಸ್ಪರ್ಧೆ ಮತ್ತೆ  ಆಗುವುದು  ನಿಚ್ಚಳ ಲಕ್ಷಣಗಳು ಗೋಚರಿಸುತ್ತಿವೆ. ಹಾಗಾಗಿ ಹಾಲಿ  ಗೆದ್ದ ಬಿಜೆಪಿ ಅಭ್ಯರ್ಥಿ ಸ್ಪರ್ಧೆಗೆ ಇಳಿತಾರೋ  ಇಲ್ಲವೋ , ಕಾದು ನೋಡಬೇಕಾಗಿದೆ. ಅದರಂತೆ ಸೋತ ಕಾಂಗ್ರೆಸ್ ಅಭ್ಯರ್ಥಿ ಯು ತನ್ನ  ಸ್ಥಾನ ಭದ್ರಪಡಿಸಿಕೊಳ್ಳಲು ಏನೆಲ್ಲ ತಂತ್ರಗಳ ಮೊರೆ ಹೋಗಿ...