*ರಬಕವಿ ಬನಹಟ್ಟಿ* ಬಾಗಲಕೋಟ್ ಜಿಲ್ಲೆಯ ತೇರದಾಳ ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ ಪ್ರಚಾರದ LCD ಮಾದರಿಯ ವಾಹನವನ್ನು ಅಧಿಕೃತ ಚಾಲನೆ ನೀಡಿದರು . ಪಕ್ಷದ ಪ್ರಚಾರದ ವಾಹನವನ್ನು ತೆರೆದಾಳ್ ಮತಕ್ಷೇತ್ರದ ಆಕಾಂಕ್ಷೆ ಅಭ್ಯರ್ಥಿ ಅರ್ಜುನ್ ಹಲಗಿ ಗೌಡರ್ ಅವರ ಹುಟ್ಟುರಾದ ಮಧುಬಾವಿ ಗ್ರಾಮದಲ್ಲಿ , ಗುರು ಹಿರಿಯರ ಹಾಗೂ ಪಕ್ಷದ ಕಾರ್ಯಕರ್ತರ ಮತ್ತು ಮುಖಂಡರ ಸಮ್ಮುಖದಲ್ಲಿ ಪ್ರಚಾರದ ಎಲ್ಸಿಡಿ ಮಾದರಿಯ ವಾಹನವನ್ನು ಪೂಜೆ ಆರತಿ ಬೆಳಗುವುದರ ಮೂಲಕ ಹಾಗೂ ರಿಬ್ಬನ್ ಕಟ್ ಮಾಡುವುದರ ಮೂಲಕ ಅಧಿಕೃತವಾಗಿ ಚಾಲನೆಯನ್ನು ನೀಡಿದರು . ಈ ಸಂದರ್ಭದಲ್ಲಿ ಮಾತನಾಡಿದ ತೇರದಾಳ ಮತ ಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿ ಅರ್ಜುನ್ ಹಲ್ಗಿ ಗೌಡರ್ ಬರುವ 2023ರ ವಿಧಾನಸಭೆ ಚುನಾವಣೆಯ ಅಂಗವಾಗಿ , ಈ ಎಲ್ ಸಿ ಡಿ ಪರದೆಯ ವಾಹನವನ್ನು ಆರಂಭ ಮಾಡಿದ್ದೇವೆ . ಮತ್ತು ಬರುವ ದಿನಮಾನಗಳಲ್ಲಿ " *ನನ್ನ ಹಳ್ಳಿ ನನ್ನ* *ಕನಸು* " ಅನ್ನುವಂತಹ ಒಂದು ಕಾನ್ಸೆಪ್ಟ್ ಮೂಲಕ , ಪ್ರತಿಯೊಂದು ಗ್ರಾಮಕ್ಕೆ ಭೇಟಿ ಕೊಟ್ಟು ಅವರ ಸಮಸ್ಯೆಗಳನ್ನು ಸಂಗ್ರಹ ಮಾಡುತ್ತೇವೆ . ಇದರ ಜೊತೆಗೆ ನಾಳೆ ಮಹಾಲಿಂಗಪೂರ ನಗರದಲ್ಲಿ ತೇರದಾಳ ಮತ ಕ್ಷೇತ್ರ ಯಾವ ರೀತಿ ಬದಲಾಗಬೇಕು , ಹಾಗೂ ಯಾವ ರೀತಿ ಅಭಿವೃದ್ಧಿ ಹೊಂದಬೇಕು , ಅನುವಂತ ವಿಚಾರವನ್ನು ಸಾರ್ವಜನಿಕ ಸಮ್ಮುಖದಲ್ಲಿಯೇ ಪಕ್ಷದ ಮತಕ್ಷ...