ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೇರ್ದಾಳ್ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾಗಿ ಪರಶುರಾಮ ಮೇತ್ರಿ ಆಯ್ಕೆ
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೇರ್ದಾಳ್ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾಗಿ ಪರಶುರಾಮ ಮೇತ್ರಿ ಆಯ್ಕೆ ಎಸ್‍ಡಿಪಿಐ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಇಂದು ನಡೆದ ಪಕ್ಷದ ತೇರ್ದಾಳ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಸಭೆಯಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ನೂತನ ವಿಧಾನಸಭಾ ಕ್ಷೇತ್ರ ಸಮಿತಿಯ ಘೋಷಣೆ ಮಾಡಿದರು. ಅಧ್ಯಕ್ಷರು : ಪರಶುರಾಮ್ ಮೇತ್ರಿ ಉಪಾಧ್ಯಕ್ಷರು: ಮುಬಾರಕ್ ಎಕ್ಸಾಂಬಿ ಕಾರ್ಯದರ್ಶಿ : ಉಮರ್ ಫಾರೂಕ್ ಖಾಲೆಖಾನ್ ಜೂತೆ ಕಾರ್ಯದರ್ಶಿ : ಯಾಸೀನ್ ಬೆಲೆಗೆರೆ ಖಜಾಂಚಿ : ಸಿರಾಜುದ್ದೀನ್ ಸದಸ್ಯರುಗಳಾಗಿ : ಜಯರಾಮ್ ಘಶ್ತಿ, ಮಹಾಲಿಂಗಪ್ಪ ಭಜಂತ್ರಿ, ಬೀಮ್ ಶಿ ಮಾವಿನಹಿಂಡಿ, ಹುಸೇನ್ ಉಕ್ಲಿ, ರಿಯಾಝ್ ನದಾಫ್, ಭಾಷಾ ಬಿಸ್ತಿ ಆಯ್ಕೆಯಾಗಿದ್ದಾರೆ. ಸಮಿತಿ ಘೋಷಣೆ ಮಾಡಿ ಮಾತನಾಡಿದ ಅಪ್ಸರ್ ಕೊಡ್ಲಿಪೇಟೆ ಪಕ್ಷವು ಕಳೆದ ಹನ್ನೆರಡು ವರ್ಷಗಳಿಂದ ತಳ ಸಮುದಾಯಗಳಲ್ಲಿ ರಾಜಕೀಯ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದ್ದು ಸುಮಾರು 300 ರಷ್ಟು ಜನ ಪ್ರತಿನಿಧಿಗಳು ಚುನಾಯಿತರಾಗಿ ಜನರ ಪ್ರತಿನಿಧಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಸಂವಿಧಾನದ ಆಶಯಗಳನ್ನು ಅನುಷ್ಠಾನ ಮಾಡಲು ಯುವ ಜನಾಂಗ ಹೋರಾಟ ಮಾಡಬೇಕು. ರಾಜಕೀಯ ಲಾಭಕ್ಕಾಗಿ ಜನರನ್ನು ಧರ್ಮ , ಜಾತಿ ಮತ್ತು ಭಾಷೆಯ ಹೆಸ...