ಪೆಟ್ರೋಲ್ ಸುರಿದು ಮುಸ್ಲಿಂ ಕುಟುಂಬದ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು : ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಮುಧೋಳ್ ತಾಲೂಕಿನ ಬೆಳಗಲಿಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನೂರಾಣಿ ಮಸಿದೆ ಹಿಂಭಾಗದ ಇರುವ ದಸಗಿರ್ ಪೆಂಡಾರಿ ಇವರ ಮನೆಯ ಮೇಲೆ ಸಿನಿಮಯ ರೀತಿಯಲ್ಲಿ ದುಷ್ಕರ್ಮಿಗಳು ಅಂದಾಜು 250 ಲೀ ಸಿಂಟೆಕ್ಸ್ ನಲ್ಲಿ ಪೆಟ್ರೋಲ್ ತುಂಬಿಕೊಂಡು. 2 hp ನೀರು ಎತ್ತುವ ಮೋಟಾರ್ ಮೂಲಕ ಮನೆಯ ಮೇಲೆ ಸಿಂಪಡಿಸಿ ಬೆಂಕಿ ಹಚ್ಚಿ ದುಷ್ಕರ್ಮಿಗಳು ಅತಿ ಕ್ರೂರ ಕೃತ್ಯವನ್ನು ಎಸೆಗಿದ್ದಾರೆ. ಈ ಮನೆಯಲ್ಲಿ ಐದು ಜನ ಇದ್ದರು. ಮಧ್ಯರಾತ್ರಿ 2 ಅಥವಾ 3 ಗಂಟೆಯ ಮಧ್ಯದಲ್ಲಿ ಈ ಕೃತ್ಯವು ನಡೆದಿರಬಹುದು ಎಂದು ಜಿಲ್ಲಾ ವರಿಷ್ಠಾಧಿಕಾರಿ ಹೇಳಿದರು. ಮುಸ್ಲಿಂ ಕುಟುಂಬದ ಜೈಬಾನ್ ದಸಗಿರ್ ಪೆಂಡಾರಿ ವಯಸು 55, ಶಬಾನಾ ದಸಗಿರ್ ಪೆಂಡಾರಿ ವಯಸು 26, ಈ ಇಬ್ಬರು ಘಟನೆಯಲ್ಲೇ ಸುಟ್ಟು ಸಾವನ್ನಪ್ಪಿದ್ದಾರೆ . ದಸಗಿರ ಪೆಂಡಾರಿ ಹಾಗೂ ಸುಭಾನ್ ದಸಗಿರ್ ಪೇಂಡಾರಿ ತಂದೆ ಮಗ ಇವರಿಬ್ಬರೂ ನಿದ್ದೆಯಲ್ಲಿದ್ದ ಎಚ್ಚರಗೊಂಡು, ನಡೆಯುತ್ತಿರುವಂತಹ ಘಟನೆಯನ್ನು ಕಂಡು ಕೂಡಲೇ ಘಟನೆಯ ಸ್ಥಳದಲ್ಲಿದ್ದ ಮನೆಯ ಹೊರಗಡೆ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಸಿದ್ದಿಕ್ ಶೌಕತ್ ಪೆಂಡಾರಿ ಈತ ಕ್ಷಣದಲ್ಲಿ ಪಾರಾಗಿದ್ದಾನೆ. ಈ ವಿಷಯ ತಿಳಿದ ತಕ್ಷಣ ...