Skip to main content

Posts

Showing posts from June, 2024

ಬೆಲೆ ಏರಿಕೆ ಖಂಡಿಸಿ ಬೃಹತ್ ಪ್ರತಿಭಟನೆ

ಬೆಲೆ ಏರಿಕೆ ಖಂಡಿಸಿ ಬೃಹತ್ ಪ್ರತಿಭಟನೆ   ಬಾಗಲಕೋಟೆ / ರಬಕವಿ - ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದ ಕುಡಚಿ - ಜಮಖಂಡಿ ರಾಜ್ಯ ಹೆದ್ದಾರಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಕೆಲವು ಕಾಲ ರಸ್ತೆಯನ್ನು ತಡೆದು ಭಾರತೀಯ ಜನತಾ ಪಕ್ಷವು ಬೃಹತ್ ಪ್ರತಿಭಟನೆ ಮಾಡಿದರು .  ಪೆಟ್ರೋಲ್ ಬೆಲೆ ಲೀಟರ್ ಗೆ 3 ರೂ, ಡೀಸೆಲ್ ಬೆಲೆ 3.5 ರೂ ಹೆಚ್ಚಳದ ಅವಿವೇಕದ ಮತ್ತು ಜನವಿರೋಧಿ ನಿರ್ಧಾರವನ್ನು ಕೈಗೊಂಡಿರುವ ಜನ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೇರದಾಳ್ ಮತ ಕ್ಷೇತ್ರದ ಶಾಸಕರಾದ ಸಿದ್ದು ಸವದಿ ರವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು .   ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿದ್ದು ಸೌದಿ  ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಇಂದಿನ ಕಾಂಗ್ರೆಸ್ ಸರ್ಕಾರದಷ್ಟು ಜನ ವಿರೋಧಿ ಸರ್ಕಾರವನ್ನು ರಾಜ್ಯದ ಜನತೆ ಎಂದೂ ಕಂಡಿಲ್ಲ. ಸುಳ್ಳು ಭರವಸೆಗಳು ಹಾಗೂ ಯೋಜನೆಗಳನ್ನು ಪೂರೈಸಲಾಗದೇ ರಾಜ್ಯದ ಖಜಾನೆಯನ್ನು ಬರಿದು ಮಾಡಿಕೊಂಡಿರುವ ಈ ಸರ್ಕಾರ ಜನಕಲ್ಯಾಣವನ್ನು ಮರೆತು ಭ್ರಷ್ಟಾಚಾರದಲ್ಲಿ ತೊಡಗಿ ರಾಜ್ಯದ ಜನತೆಯನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಹೇಳಿದರು .  ಪೆಟ್ರೋಲ್-ಡೀಸೆಲ್ ದರ ಆರಂಭವಷ್ಟೇ ಇನ್ನು ಈ ರಾಜ್ಯದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆಗಳೂ ಗಗನಕ್ಕೇರಲಿದ್ದು, ಜನಸಾಮಾನ್ಯರು, ಕಾರ್ಮಿಕರು, ಬಡವರು, ರೈತರು ಮುಖ್ಯವಾಗಿ ನ...

ಶಾಂತಿಯುತವಾಗಿ ಬಕ್ರೀದ್ ಹಬ್ಬ ಆಚರಣೆ ಮಾಡಿದ ಮುಸ್ಲಿಂ ಬಾಂಧವರು*

*ಶಾಂತಿಯುತವಾಗಿ ಬಕ್ರೀದ್ ಹಬ್ಬ ಆಚರಣೆ ಮಾಡಿದ ಮುಸ್ಲಿಂ ಬಾಂಧವರು*  ಇದ್ಗಾ ಮೈದಾನದಲ್ಲಿ ನಮಾಜ್ ಮಾಡಲು ಸಾವಿರಾರು ಜನ ಮುಸ್ಲಿಂ ಬಾಂಧವರು ಬಾಗಿ.... ಎಲ್ಲ ಜೀವರಾಶಿಗಳಲ್ಲಿ ಶ್ರೇಷ್ಠವಾದದ್ದು ಮಾನವ ಜನ್ಮ ಯಾರಿಗೂ ಕೆಟ್ಟದ್ದನ್ನು ಬಯಸದೆ ಎಲ್ಲರಿಗೂ ನಮ್ಮವರು ತಮ್ಮವರು ಅನ್ನುವ ಮನೋಭಾವದಿಂದ ಕಾಣುತ್ತಾ ದೇವರ ಜ್ಞಾನ ಮಾಡೋಣ ಪ್ರತಿದಿನ ನಮಾಜ್ ಮಾಡುವ ಮೂಲಕ ನಮಗೆ ಬಂದ ಕಷ್ಟವನ್ನು ದೂರಮಾಡು ಎಂದು ಅಲ್ಲಾ ಹತ್ತಿರ ಕೇಳಿಕೊಳ್ಳೋಣ. ಎಲ್ಲರನ್ನೂ ಸಮಾನವಾಗಿ ನೋಡೋಣ ಭೂಮಿಯ ಮೇಲೆ ಇರುವ ಎಲ್ಲ ಜೀವ ರಾಶಿಗಳನ್ನು ಚೆನ್ನಾಗಿಟ್ಟು ಕಾಪಾಡು ಎಂದು ದೇವರ ಸ್ಮರಣೆ ಮಾಡೋಣ ಎಂದು ಮೋಸಿನ್ ಮೌಲಾನಾ ಗೋಕಾಕ್ ಎಲ್ಲರಿಗೂ ಹೇಳಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದಲ್ಲಿ ಮುಸ್ಲಿಂ ಬಾಂಧವರು ಬಹಳ ಸರಳ ಹಾಗೂ ಶಾಂತತೆಯಿಂದ  ಸಾವಿರಾರು ಸಂಖ್ಯೆಯಲ್ಲಿ ರಬಕವಿಯ ವಿದ್ಯಾ ನಗರ ಹತ್ತಿರ ಇರುವ ಇದ್ಗಾ ಮೈದಾನಕ್ಕೆ ಬಂದು ನಮಾಜ್ ಮಾಡುವ ಮೂಲಕ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಿದರು. ವರದಿ:- ಮೊಹಮ್ಮದ್ ಹುಸೇನ್ ಲೆಂಗ್ರೆ

ಶಾಂತಿಯಿಂದ ರಬಕವಿ ಬನಹಟ್ಟಿ ಅವಳಿ ನಗರಗಳಲ್ಲಿ ಸಡಗರದಿಂದ ಬಕ್ರೀದ್ ಹಬ್ಬ ಆಚರಣೆ

 ಬಾಗಲಕೋಟೆ /  ರಬಕವಿ - ಬನಹಟ್ಟಿ : ತ್ಯಾಗ ಬಲಿದಾನಗಳ ಸಾಂಕೇತಿಕ ಹಬ್ಬವಾದ ಬಕ್ರೀದ್ ಹಬ್ಬ ಇಸ್ಲಾಂ ಧರ್ಮದಲ್ಲಿ ಸಾವಿರಾರು ವರ್ಷಗಳಿಂದ ಪ್ರಾಣಿಗಳನ್ನು ಬಲಿ ಕೊಡುವಂತ ಪದ್ಧತಿ ಜಾರಿಯಲ್ಲಿದೆ . ಅಲ್ಲಾಹನು ತನ್ನ ಪ್ರೀತಿಯ ಪೈಗಂಬರರಾದ ಈಬ್ರಾಹಿಂ ಅಲೈ ಸಲಾಂ ಅವರ ಮನಸ್ಸು ನೋಡಲು ಬಹಳ ವರ್ಷಗಳ ನಂತರ ನಿನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವನ್ನೇ ನನ್ನ ಭಕ್ತಿಯ ಪ್ರೀತಿಗೆ ಬಲಿ ಕೊಡ್ತೀಯಾ ? ಎಂದು ಹೇಳಿದಾಗ ಆಗ  ಬಹಳ ವರ್ಷಗಳ ನಂತರ ಒಂದು ಗಂಡು ಮಗುವಾಗಿ ಪಡೆದ ಇಬ್ರಾಹಿಂ ಪೈಗಂಬರ ಅವರ ಮಗನಾದ ಇಸ್ಮಾಯಿಲ್ ಅಲೈ ಸಲಾಂ ನನ್ನು ಅಲ್ಲಾಹನ ಆಜ್ಞೆಯ ಪ್ರಕಾರ ಅವರನ್ನು ಬಲಿಯನ್ನಾಗಿ ಕೊಡಲು ತನ್ನ ಚೂಪಾದ ಚೂರಿಯಿಂದ ಮಗನ ಬಲಿ ಕೊಡಲು ಸಿದ್ಧವಾದಾಗ ಅಲ್ಲಾಹನು ಸ್ವರ್ಗದಿಂದ ಒಂದು ಕುರಿಯನ್ನು ಪ್ರತ್ಯಕ್ಷ ಮಾಡಿಸಿ   ಓ ನನ್ನ ಪೈಗಂಬರರೇ ನೀನು ನನ್ನ ಭಕ್ತಿಗೆ ಮೆಚ್ಚುಗೆವನ್ನಾಗಿಸಿದ್ದೀರಿ ಆದ್ದರಿಂದ ಇದರ ಬದಲಾಗಿ ಈ ಕುರಿಯನ್ನು ಬಲಿ ಕೊಟ್ಟು ನನ್ನ ಆಜ್ಞೆಯ ಪಾಲಿಸುವಂತೆ ಹೇಳಿದಾಗ   ಪೈಗಂಬರರು ತನ್ನ ಮಗನನ್ನು ತೆಗೆದು ಕುರಿಯನ್ನು ಬಲಿಯನ್ನಾಗಿ ಕೊಟ್ಟರು    ಆದ್ದರಿಂದ ಆಗಿನ ಕಾಲದಿಂದ ಇವತ್ತಿನವರೆಗೆ ಕುರಿ ಬಕ್ರ  ಮುಂತಾದ ಪ್ರಾಣಿಗಳನ್ನು ಬಲಿಯ  ಪದ್ಧತಿಯಾಗಿ ಜಾರಿಯಾಯಿತು .   ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಪೆ...

ಶಾಸಕರಿಗೆ ಹಾಗೂ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಬನಹಟ್ಟಿ ಆಟೋ ಚಾಲಕರು*

ಬಾಗಲಕೋಟೆ/ ರಬಕವಿ ಬನಹಟ್ಟಿ : ತಾಲೂಕಿನ ಬನಹಟ್ಟಿ ನಗರದ ಬಸ್ ನಿಲ್ದಾಣದ ಪಕ್ಕದಲ್ಲಿ ಕಳೆದ 40 ರಿಂದ 50 ವರ್ಷಗಳಿಂದ ಆಟೋ ನಿಲ್ದಾಣ ಇದೆ   ಈ ಆಟೋ ನಿಲ್ದಾಣದ 400 ಕ್ಕಿಂತ ಅಧಿಕ ಆಟೋ ಚಾಲಕರು ತಮ್ಮ ತಮ್ಮ ಕುಟುಂಬದ ಉಪಜೀವನವನ್ನು ಮಾಡುತ್ತಿ ರೂವಾಗಲೇ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ತಮ್ಮ ಗ್ಯಾರಂಟಿ ಯೋಜನೆಗಳಲ್ಲಿ ಒಂದು ಶಕ್ತಿ ಯೋಜನೆ ಅಂದ್ರೆ ಮಹಿಳೆಯರಿಗಾಗಿ ಉಚಿತ ಬಸ್ ಮಾಡಿದ ಮೇಲೆ ಆಟೋ ಚಾಲಕರಿಗೆ ಭಾರಿ ವಾಡಿತ ಬಿದ್ದಿದೆ . ಹೀಗಿರುವಾಗ  ನಗರದ ಹೊಸ ಬಸ್ ನಿಲ್ದಾಣದ ಕಟ್ಟಡದ ಮುಕ್ತಾಯ ಹಂತ ತಲುಪಿರುವಾಗ  , ಕೆಎಸ್ಆರ್ಟಿಸಿ ಅಧಿಕಾರಿಗಳ ಆದೇಶ ಅನುಸಾರ ಬಸ್ ನಿಲ್ದಾಣದ ಜಾಗದಲ್ಲಿ ಖಾಸಗಿ ವಾಹನ ತಡೆ ಕಂಬಗಳನ್ನು ಹಾಕಲಿಕ್ಕೆ ಮುಂದಾದಾಗ ಆಟೋ ನಿಲ್ದಾಣದ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ .  ದಿಡೀರನೆ ನಗರದ 400 ಕಿಂತ ಹೆಚ್ಚು ಆಟೋಗಳನ್ನು ಬಂದು ಮಾಡಿ ಚಾಲಕರು ಹಾಗೂ ಮಾಲಕರು ಸೇರಿ ರಬಕವಿ ಬನಹಟ್ಟಿ ನಗರ ಸಭೆ ಅಧಿಕಾರಿಗಳಿಗೆ ಹಾಗೂ ತೇರದಾಳ ಮತಕ್ಷೇತ್ರದ ಶಾಸಕರಿಗೆ ಮನವಿ ಸಲ್ಲಿಸಿದರು .  ಈ ಸಂದರ್ಭದಲ್ಲಿ ಮಾತನಾಡಿದ ಬಸ್ಸಿರ ಜಮಾದಾರ್ , ಕಳೆದ ಸುಮಾರು 40 ವರ್ಷಗಳಿಂದ ಆಟೋ ಚಾಲಕರು ಬಸ್ ನಿಲ್ದಾಣದ ಹತ್ತಿರ ನಾವು  ನಮ್ಮ ಉಪಜೀವನವನ್ನು ನಡೆಸುತ್ತಿದ್ದೇವೆ . ಬಸ್ ನಿಲ್ದಾಣದ ಹಳೆ ಕಟ್ಟಡವನ್ನು ತೆರೆವುಗೊಳಿಸಿದ್ದಾರೆ  . ಇದರಿಂದ ನಮ್ಮ ಅಟೋಗಳನ್ನು ನಿ...

ಆಕ್ರಮ ಲೈಂಗಿಕ ಚಟುವಟಿಕೆಗಳ ತಾನವಾಗುತ್ತಿರುವ ಬನಹಟ್ಟಿ ರೇವಣ್ಣ ಲಾಡ್ಜ್*

*ಆಕ್ರಮ  ಲೈಂಗಿಕ ಚಟುವಟಿಕೆಗಳ ತಾನವಾಗುತ್ತಿರುವ ಬನಹಟ್ಟಿ ರೇವಣ್ಣ ಲಾಡ್ಜ್*   *ಬಾಗಲಕೋಟೆ / ರಬಕವಿ ಬನಹಟ್ಟಿ :*  ತಾಲೂಕಿನ ಬನಹಟ್ಟಿ ನಗರದಲ್ಲಿ ದಿನೇ ದಿನೇ ಆಕ್ರಮ ಅನೈತಿಕ ಲೈಂಗಿಕ ಚಟುವಟಿಕೆಗಳು ನಡೆಯುವಲ್ಲಿ ಭಾರಿ  ಹೆಸರುವಾಸಿಯಾಗುತ್ತಿದೆ . ಹಾಸನದ ಪ್ರಜ್ವಲ್ ರೇವಣ್ಣ , ಎಚ್ ಡಿ ರೇವಣ್ಣ ಅಂತ ಸುದ್ದಿಗಳು ದಿನೇ ದಿನೇ ಕೇಳಿ ಸಾರ್ವಜನಿಕರು ದಂಗಾಗಿ ಹೋಗಿರುವಾಗ , ಇಲ್ಲೊಂದು  ಇದೇ ಹೆಸರಿನ ರೇವಣ್ಣ ಲಾಡ್ಜ್ ಒಂದರಲ್ಲಿ ಮೈ ಮಾರಾಟಗಳ ಕೇಂದ್ರ ಸ್ಥಾನ ವಾಗುತ್ತಿರುವಾಗ ಸ್ಥಳೀಯ ಸಾರ್ವಜನಿಕರು ದಂಗಾಗಿದ್ದಾರೆ . ಲಾಡ್ಜ್ ಗಳಿಗಾಗಿ ಸರ್ಕಾರದ ಸುತ್ತೋಲೆ , ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ , ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಫ್ಲೆಕ್ಸ ಬೋರ್ಡ್ ಗಳು ಇಟ್ಟುಕೊಂಡು ಆಕ್ರಮ ವಾಗಿ  ಲೈಂಗಿಕ ಕ್ರಿಯೆಗೆ ಅಡ್ಡೆ ,  ತಾಣವಾಗುತ್ತಿರುವ ವಿಷಾದಕರ ಸಂಗತಿಯಾಗಿದೆ.  ನಗರದ ಸೋಮವಾರ ಪೇಟದಲ್ಲಿ ರೇವಣ್ಣ ಲಾಡ್ಜ್ ಹೆಸರಿನ ಲಾಜ್ ಒಂದರಲ್ಲಿ ಅಕ್ರಮವಾಗಿ ಲೈಂಗಿಕ ಚಟುವಟಿಕೆಗಳ ಸಲುವಾಗಿ ಅನ್ಯ ಕೋಮಿಗಳ ಜೋಡಿ ಒಂದು ತೆರಳುತ್ತಿರುವಾಗ ಒಂದು ಸಮುದಾಯದ ಜನ ಹಿಡಿದು, ಅಕ್ರಮ ಲೈಂಗಿಕ ಕ್ರಿಯೆಗಳ  ತಾಣವಾಗುವುದನ್ನು ಸ್ಥಳೀಯ  ನಾಗರಿಕರ ಗಮನಕ್ಕೆ ಬಂದು  ಆಕ್ರೋಶಕ್ಕೆ ಕಾರಣವಾಗಿ ಕೆಲವೊಂದು ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು. ಜನರನ್ನು ಚದುರಿಸಲು ಪೊಲೀಸರು ತಮ್ಮ...

ವಲಸೆ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದು ಕಾಂಗ್ರೆಸ್ ಪಕ್ಷಕ್ಕೆ ಮುಳುವಾಯಿತಾ ? ಕಾಂಗ್ರೆಸ್ ಪಕ್ಷದ ಶಾಸಕರ ಕ್ಷೇತ್ರದಲ್ಲಿ ಹಿನ್ನೆಡೆ :

ಬಾಗಲಕೋಟೆ   : ಲೋಕಸಭಾ  ಮತಕ್ಷೇತ್ರದಲ್ಲಿ 5 ಜನ ಕಾಂಗ್ರೆಸ್ ಶಾಸಕರಲ್ಲಿ   ಒಬ್ಬರು ಸಚಿವರು, 3 ನಿಗಮ-ಮಂಡಳಿ ಅಧ್ಯಕ್ಷರನ್ನು ಹೊಂದಿರುವ  ಲೋಕಸಭೆ ಕ್ಷೇತ್ರ , ಆದರೆ ಅಲ್ಪ ಪ್ರಮಾಣದಲ್ಲಿ ಮತಗಳನ್ನು ಮುನ್ನಡೆ ಸಾಧಿಸಿದ್ದು ನರಗುಂದ್ ಮಾತ್ರ  ಕಾಂಗ್ರೆಸ್ ಮುನ್ನಡೆ ಉಳಿದ ಕ್ಷೇತ್ರಗಳಲ್ಲಿ ಭಾರಿ ಹಿನ್ನಡೆ ಅನುಭವಿಸಿದೆ ಇದಕ್ಕೆ ಕಾರಣ ವಲಸೆ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದು  ಮುಳುವಾಯಿತಾ ? ಅನ್ನುದಕ್ಕೆ ಒಳ ಒಳಗೆ ಬುಸುಗುಸು   ಪ್ರಾರಂಭವಾಗಿದೆ. ಕೋಟೆ ನಾಡಿನ ಲೋಕಸಭ ಕ್ಷೇತ್ರದ ಕಾಂಗ್ರೆಸ್ ಪಾಳೆಯದಲ್ಲಿ ವೀಣಾ ಕಾಶಪ್ಪನವರು ಭಾವಿ ಸಂಸದರು ಎಂದೆ  ಪ್ರಚಾರ ಹೊಂದಿದ್ದರು. ಇದಲ್ಲದೆ ಕಾಂಗ್ರೆಸ್ ಹೈಕಮಾಂಡ್ ಕೂಡ ಇವರಿಗೆ ಬಿ ಫಾರಂ ಕೊಡೋದು ಪಕ್ಕಾ ಅಂತ ಕಾರ್ಯಕರ್ತರಲ್ಲಿ ನಂಬಿಕೆ ವಿಶ್ವಾಸ ಸಾಕಷ್ಟು  ಇಟ್ಟುಕೊಂಡಿದ್ದರು . ಹಾಗೂ  ಕೆಲವು ಮುಖಂಡರು ಪ್ರಬಲ ಟಿಕೆಟ್ ಆಕಾಂಕ್ಷಿಗಳಿದ್ದರೂ ಅವರನ್ನೆಲ್ಲ ಹಿಂದಿಕ್ಕಿ ,  ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರು  ನೆರೆಯ ವಿಜಯಪುರ ಜಿಲ್ಲೆಗೆ ಸೇರಿದ ಸಿದ್ದರಾಮಯ್ಯ ಸಂಪುಟದ ಸದಸ್ಯ ಶಿವಾನಂದ ಪಾಟೀಲರ ಪುತ್ರಿ ಸಂಯುಕ್ತ ಪಾಟೀಲ ಅವರನ್ನು ಕರೆತಂದು ಚುನಾವಣೆ ಅಖಾಡಕ್ಕೆ ಇಳಿಸಿದರು   .   ಹೊಸ ಮುಖವಾಗಿದ್ದ ನೆರೆಯ ಜಿಲ್ಲೆಯ ವಿಜಯಪುರದ ಸಂಯುಕ್ತ ಪಾಟೀಲ...