Skip to main content

Posts

Showing posts from September, 2024

ರಬಕವಿ ಬನಹಟ್ಟಿ ಅವಳಿ ನಗರಗಳ ನೂತನ ಬಸ್ ನಿಲ್ದಾಣಗಳನ್ನು ಲೋಕಾರ್ಪನೆ ಮಾಡಿದ ಸಾರಿಗೆ ಸಚಿವ ಶ್ರೀ ರಾಮಲಿಂಗಾರೆಡ್ಡಿ* :

*ಅವಳಿ ನಗರಗಳ ನೂತನ ಬಸ್ ನಿಲ್ದಾಣಗಳನ್ನು ಲೋಕಾರ್ಪನೆ ಮಾಡಿದ ಸಾರಿಗೆ ಸಚಿವ ಶ್ರೀ ರಾಮಲಿಂಗಾರೆಡ್ಡಿ* :  ಬಾಗಲಕೋಟೆ / ರಬಕವಿ ಬನಹಟ್ಟಿ   : ಬಾಗಲಕೋಟೆ ಜಿಲ್ಲೆಯ ಅವಳಿ ನಗರಗಳು ಎಂದು ಖ್ಯಾತಿ ಪಡೆದ ರಬಕವಿ ಬನಹಟ್ಟಿ ನಗರಗಳಲ್ಲಿ ನೂತನವಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣಗಳನ್ನು ಸಾರಿಗೆ ಸಚಿವ ಶ್ರೀ ರಾಮಲಿಂಗಾರೆಡ್ಡಿ ಅವರು ರಿಬ್ಬನ್ ಕಟ್ ಮಾಡುವುದರ ಮೂಲಕ ಲೋಕಾರ್ಪಣೆ ಮಾಡಿದರು.   ಈ ಅವಳಿ ನಗರಗಳ ಬಸ್ ನಿಲ್ದಾಣಗಳು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಾಗಲಕೋಟೆ ಭಾಗದ ರಬಕವಿ ಹಾಗೂ ಬನಹಟ್ಟಿ ಬಸ್ ನಿಲ್ದಾಣಗಳನ್ನು ತಲಾ 1 ಕೋಟಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ.  ಈ ಸಂದರ್ಭದಲ್ಲಿ ಮಾತನಾಡಿದ ತೆರೆದಾಳ್ ಮತ ಕ್ಷೇತ್ರದ ಶಾಸಕ ಸಿದ್ದು ಸವದಿ , ಈ ಅವಳಿ ನಗರಗಳನ ನೂತನವಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣಗಳಿಗೆ   ಕಂಪೌಂಡು ಗೋಡೆ , ಶುದ್ಧ ಕುಡಿಯುವ  ನೀರು, ಸುಸಜ್ಜಿತ ಶೌಚಾಲಯ ಗಳನ್ನು ನಿರ್ಮಾಣ ಮಾಡಲಿಕ್ಕೆ  ತಲಾ ನಿಲ್ದಾಣಕ್ಕೆ 75 ಲಕ್ಷ ದಂತೆ  ಎರಡು ನಿಲ್ದಾಣಗಳಿಗೆ ಒಂದೂವರೆ ಒಟ್ಟು  1 ಕೋಟಿ 50 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಬೇಕು ಹಾಗೂ ನಮ್ಮ ಕ್ಷೇತ್ರದಿಂದ ಎರಡು ಪಲ್ಲಕ್ಕಿ ಬಸ್ ಗಳು ಎರಡು ಎಸಿ ಬಸ್ ಗಳು ನೀಡಬೇಕು ಎಂದು ಸಾರಿಗೆ ಸಚಿವರಲ್ಲಿ ಮನವಿ ಮಾಡಿದರು. ...

ಪೊಲೀಸ್ ಬಿಟ್ ಗಳಲ್ಲಿ ಸುಧಾರಿಣೆ ತಂದ ಜಿಲ್ಲಾ ಪೊಲೀಸ್ ಹಾಗೂ ಬನಹಟ್ಟಿ ಪೊಲೀಸ್ ಠಾಣೆ :

ಪೊಲೀಸ್ ಬಿಟ್ ಗಳಲ್ಲಿ  ಸುಧಾರಿಣೆ ತಂದ ಜಿಲ್ಲಾ ಪೊಲೀಸ್ ಹಾಗೂ ಬನಹಟ್ಟಿ ಪೊಲೀಸ್ ಠಾಣೆ : ಬಾಗಲಕೋಟೆ / ರಬಕವಿ ಬನಹಟ್ಟಿ : ಬಾಗಲಕೋಟ ಜಿಲ್ಲೆ ರಬಕವಿ- ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಪೊಲೀಸ್ ಠಾಣಾ ವ್ಯಾಪ್ತಿಯ  ನಮ್ಮ ಊರು, ನಮ್ಮ ಪೊಲೀಸ್ , ನಮ್ಮ ಬೀಟ್ ಮೊಬೈಲ್ ನಂಬರ್, ಅನ್ನುವಂತಹ ಪೋಸ್ಟರ್ ಗಳನ್ನು  ಜನಭೀಢವಾದ  ಸ್ಥಳಗಳಲ್ಲಿ ಅಂಟಿಸಿ ಸಣ್ಣಪುಟ್ಟ ಅಹಿತಕರವಾದ  ಘಟನೆಗೆ ಸಂಬಂಧಿಸಿದಂತೆ, ಜಿಲ್ಲಾ ಪೊಲೀಸ್ ಹಾಗೂ ನಗರದ ಪೊಲೀಸ್ ಠಾಣಾ ಪೊಲೀಸರು ಸಾರ್ವಜನಿಕರಿಗೆ  ಜಾಗರೂಕತೆಯನ್ನು ಮೂಡಿಸುತ್ತಿದ್ದಾರೆ.  ಬಾಗಲಕೋಟ ಜಿಲ್ಲಾ ಪೊಲೀಸ್ ಹಾಗೂ ಬನಹಟ್ಟಿ ಪೊಲೀಸ್ ಠಾಣೆಯ ಪೊಲೀಸರು  ನಗರದ ಬಸ್ ನಿಲ್ದಾಣದ ಬಸ್ ಕಂಟ್ರೋಲರ್ ಆಫೀಸ್ ಮುಂಬಾಗ ಪೋಸ್ಟರ್ ಗಳನ್ನು ಅಂಟಿಸಿ ಜನರಲ್ಲಿ ಜಾಗೃತಿಯನ್ನು ಮೂಡಿಸಿದರು .  ಸುಧಾರಿತ ಬೀಟ್ ವ್ಯವಸ್ಥೆಯಲ್ಲಿ ಪ್ರತಿಯೊಂದು ಬಿಟ್ ಗಳನ್ನು ಹಂಚಿಕೆ ಮಾಡಿ, ಅದರೊಳಗೆ ಪೊಲೀಸರನ್ನು ಹಂಚಿಕೆ ಮಾಡಿ , ಪೊಲೀಸರಿಗೆ ಸರ್ಕಾರಿ ಸಂಚಾರಿ ನಂಬರ್ ಗಳನ್ನು ಹಂಚಿಕೆ ಮಾಡಿರುತ್ತಾರೆ . ಈ ಬೀಟ್ ಸಂಬಂಧ ಪಟ್ಟಂತೆ ಏನೇ ಅಹಿತ ಘಟನೆಗಳ ಸಂಬಂಧಿಸಿದಂತೆ ಗೋಡೆ ಗಳ ಮೇಲೆ ಅಂಟಿಸಿರುವ  ಪೋಸ್ಟರ್ ಗಳಲ್ಲಿ   ನಮ್ಮ ಪೊಲೀಸ, ನಮ್ಮ ಬೀಟ್ ಮೊಬೈಲ್ ನಂಬರ್ ಅನ್ನುವಂತ ಸರ್ಕಾರಿ ನಂಬರುಗಳು ಇರುತ್ತವೆ. ಈ ನಂಬರ್ ಗಳಿಗೆ ನೀವು ಕರೆ ಮಾಡಿದರೆ ...