Skip to main content

Posts

Showing posts from July, 2023

ಕಣ್ಣಿನ ಚಿಕಿತ್ಸೆಯಲ್ಲಿ ಲೇಸರ್ ನ ಉಪಯೋಗ

ಕಣ್ಣಿನ ಚಿಕಿತ್ಸೆಯಲ್ಲಿ ಲೇಸರ್ ನ ಉಪಯೋಗ :  ಕಣ್ಣಿನ ಚಿಕಿತ್ಸೆಯಲ್ಲಿ ಹಲವು ಬಗೆಯ ಲೇಸರ್ ಗಳು ಉಪಯೋಗವಾಗುತ್ತವೆ. LASER ಎಂದರೆ Light Amplification by Stimulated Emission of Radiation. ಅಂದರೆ ಭಾವಾರ್ಥ - ಪ್ರಚೋದಿತ ವಿಕಿರಣತೆಯ ಬಿಡುಗಡೆಯಿಂದ ಬೆಳಕಿನ ಹೆಚ್ಚಳ. ಸ್ಥೂಲವಾಗಿ ಹೇಳುವುದಾದರೆ ಅದು ಬಾರಿ ಪ್ರಮಾಣದ ಶಕ್ತಿಯನ್ನು ಒಳಗೊಂಡ ಬೆಳಕಿನ ಮೂಲ (ಆಕರ ). ಇದು ಕಣ್ಣಿನ ಚಿಕಿತ್ಸೆಯಲ್ಲಿ ಸುಮಾರು 50 ವರ್ಷಗಳಿಂದಲೂ ಹೆಚ್ಚು ಸಮಯದಿಂದ ಬಳಕೆಯಲ್ಲಿದೆ. ವೈದ್ಯಕೀಯವಾಗಿ ಮೊಟ್ಟ ಮೊದಲ ಲೇಸರ್ ಉಪಯೋಗವಾಗಿದ್ದು ಕಣ್ಣಿನ ಅಕ್ಷಿಪಟಲದ ಕಾಯಿಲೆಗಳ ಚಿಕಿತ್ಸೆಯಲ್ಲಿ. ಆದರೆ ಈಗ ಪ್ರಸ್ತುತ ಹಲವು ವಿಧದ ಲೇಸರ್ ಗಳು ಕಣ್ಣಿನ ಬೇರೆ ಬೇರೆ ರೀತಿಯ ಚಿಕಿತ್ಸೆಯಲ್ಲಿ ಉಪಯೋಗವಾಗುತ್ತಿವೆ.  ಬಹಳ ಹಿಂದಿನಿಂದಲೂ ಪ್ರಭಲವಾದ ಬೆಳಕಿನ ಕಿರಣಗಳು ಕಣ್ಣನ್ನು ಹಾನಿಗೊಳಿಸುತ್ತವೆ ಎಂಬ ಅಂಶ ತಿಳಿದಿತ್ತು. ಹಾಗಾಗಿಯೇ ಸೊಕ್ರೇಟ್ಸ್  ನಂತಹ ವಿಜ್ಞಾನಿ ನೇರವಾಗಿ ಬರೀ ಕಣ್ಣಿನಿಂದ ಸೂರ್ಯ ಗ್ರಹಣವನ್ನು ನೋಡಬಾರದು ಎಂದು ತಿಳಿಸಿದ್ದ. ಮೆಯರ್ - ಶ್ವಿಕೆರಾಥ್ ಎನ್ನುವವರು ಬೆಳಕನ್ನು ಮೊಟ್ಟ ಮೊದಲು ಕಣ್ಣಿನ ಚಿಕಿತ್ಸೆಗೆ ಬಳಸಿದರು. ಕಣ್ಣಿನ ಅಕ್ಷಿಪಟಲದಲ್ಲಿನ ಮೇಲನೋಮ ಚಿಕಿತ್ಸೆಗೆ ಇವರು ಅಕ್ಷಿಪಟಲದ ಮೇಲೆ ಬೆಳಕನ್ನು ಕ್ರೋಢೀಕರಿಸಿದರು. 1940 ರ ದಶಕದಲ್ಲಿ ಮಾರನ್  ಸಲಾಸ್ ಎನ್ನುವವರು ಕಣ್ಣಿನ ಅಕ್ಷಿಪಟಲದಲ್ಲಿ ಫೋಟೋಕೊಯಾಗ...

ಮೌಲಾನ ಆಜಾದ್ ಮಾದರಿ ಶಾಲೆಯ ನೂತನ ಕಟ್ಟಡದ ಉದ್ಘಾಟನ ಸಮಾರಂಭ

ಮೌಲಾನ ಆಜಾದ್ ಮಾದರಿ ಶಾಲೆಯ ನೂತನ ಕಟ್ಟಡದ ಉದ್ಘಾಟನ ಸಮಾರಂಭ ರಬಕವಿ ಬನಹಟ್ಟಿ :     ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ  ಲಕ್ಷ್ಮಿನಗರದ ಮೌಲಾನ ಆಜಾದ್ ಮಾದರಿ ಶಾಲೆಯ ನೂತನ ಕಟ್ಟಡದ ಉದ್ಘಾಟನ ಸಮಾರಂಭವನ್ನು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ  ಅವರ ಅಧ್ಯಕ್ಷತೆಯಲ್ಲಿ ನೆರವೇರಿತು .  ಈ ಕಾರ್ಯಕ್ರಮ ಸಂದರ್ಭದಲ್ಲಿ ಬಾಗಲಕೋಟ್ ಜಿಲ್ಲಾ ವಕಪ್ ಬೋರ್ಡ್ ಉಪಾಧ್ಯಕ್ಷ ಡಾಕ್ಟರ್ ಅಕ್ಬರ್ ತಾಂಬೋಳಿ   , ಬನಹಟ್ಟಿ ನಗರದ ಅಂಜಮನ್ ಸಂಸ್ಥೆಯ ಅಧ್ಯಕ್ಷ ಬುಡನ್ ಜಮಾದಾರ್ , ಭಾರತೀಯ ಜನತಾ ಪಕ್ಷದ ಅಲ್ಪಸಂಖ್ಯಾತರ   ನಗರ ಘಟಕದ ಅಧ್ಯಕ್ಷ ಮಲಿಕ್ ಜೆ ಬಾರಿಗಡ್ಡಿ , ಹಾಗೂ ನಗರಸಭೆಯ ಮಾಜಿ ಸದಸ್ಯ ನಸೀಮ್ ಮೊಕಾಸಿ ,ಆನಂದ್ ಕಂಪು ,ಅಂಜುಮನ್ ಸಂಸ್ಥೆಯ ಸದಸ್ಯ  ಅಜೀಜ್ ಶೇಕ್, ಫಿರೋಜ್ ಜಕಾತಿ ,ಚಿಸ್ತಿ ಜಕಾತಿ, ಚಿಸ್ತಿಮಿಯ ಮೋಮಿನ ,  ಯಾಸಿನ್ ತಾಂಬೋಳಿ, ಶಾಲಾ ಮುಖ್ಯ  ಗುರುಗಳಾದ ಕಲ್ಮಾಡಿ ಸರ್ .  ಹಾಗೂ ಇನ್ನಿತರರು ಶಿಕ್ಷಕ ಶಿಕ್ಷಕರು ಉಪಸ್ಥಿತರಿದ್ದರು . ವರದಿ :ಮಹಬೂಬ ಬಾರಿಗಡ್ಡಿ