Skip to main content

Posts

Showing posts from September, 2025

ಆರಾಧ್ಯ ದೈವ ಶ್ರೀ ಕಾಡಸಿದ್ದೇಶ್ವರ ಪ್ರಸಿದ್ಧ ಪಟಾಕಿ ಜಾತ್ರೆ : ಪಟ್ಟವರ್ಧನ್ ಸರ್ಕಾರ ಕಾಣಿಕೆ ಕೊಟ್ಟ ರಥಕ್ಕೆ ಮದ್ದಿನ ಸುರಿಮಳೆ :

ಬನಹಟ್ಟಿಯ ಪುಣ್ಯದ ತೇರ ಕಾಡಸಿದ್ದನ ಅವತಾರ, ಧನ್ಯ ಧನ್ಯ ಮಾನವ ಜನ್ಮ , ಧನ್ಯ ಧನ್ಯ ಮಾನವ ಜನ್ಮ , ಜಾತ್ರೆ ಬಂತು ಸಡಗರ .    ಹೌದು ಬಾಗಲಕೋಟೆ ಜಿಲ್ಲೆಯ ರಬಕವಿ - ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಆರಾಧ್ಯ ದೈವ ಶ್ರೀ ಕಾಡಸಿದ್ದೇಶ್ವರ ಜಾತ್ರೆಯು ಸಪ್ಟಂಬರ್ 16 ರಿಂದ ಸತತ ಮೂರು ದಿನಗಳ ಕಾಲ ನಡೆಯಲಿದ್ದು , ಮಂಗಳವಾರ ನಡೆಯುವ ರಥೋತ್ಸವದಲ್ಲಿ ಭಾರಿ ಪ್ರಮಾಣದಲ್ಲಿ ಮದ್ದು ಸುಡುವುದರ ಮುಖಾಂತರ ಕಾಡಸಿದ್ದನಿಗೆ ಭಕ್ತಿ ಅರ್ಪಣೆ ಮಾಡುತ್ತಾರೆ . ಈ ನಗರದ ಜನ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಹಳ್ಳಿಯ ಜನರು ಈ ತೇರಿನ ಮುಂದುಗಡೆ ಭಯ - ಭಕ್ತಿಯಿಂದ ಮದ್ದು ಸುಡುತ್ತಾರೆ . ಈ ಮದ್ದು ಸುಡುವಧನ್ನು ನೋಡಲಿಕ್ಕೆ ಸಾವಿರಾರು ಜನ ಜಂಗುಳಿ . ಇಷ್ಟು ಭಾರಿ ಪ್ರಮಾಣದಲ್ಲಿ ಮದ್ದು ಸುಡುವುದು ಜಿಲ್ಲೆಯಲ್ಲಿಯೇ ಪಟಾಕಿ ಮದ್ದಿನ ಜಾತ್ರೆ ಎಂದು ಪ್ರಸಿದ್ಧ ಹೆಸರುವಾಸಿಯಾಗಿದೆ. ಸುಟ್ಟ ಮದ್ದಿನ ಹೊಗೆ ದಟ್ಟವಾಗಿ ಇಡೀ ನಗರವೇ ಅವರಿಸಿರುತ್ತದೆ.   ಜಾತ್ರೆಯ ಮರುದಿನ ಅಂದ್ರೆ ಬುಧವಾರ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಇರುತ್ತದೆ. ಈ ಕುಸ್ತಿ ಪಂದ್ಯಾವಳಿ ನೋಡಲು ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಜನ ಸೇರುತ್ತಾರೆ. ಇದೇ ರಾತ್ರಿ ನಾಟಕ - ಬೈಲಾಟ ಅಲ್ಲದೆ ಖ್ಯಾತ ಕನ್ನಡ ಜಾನಪದ ಪ್ರಸಿದ್ಧ ಖ್ಯಾತ ಹಾಡುಗಾರರ ಮನರಂಜನೆ ಕಾರ್ಯಕ್ರಮ ಕೂಡ ವಿಶೇಷವಾಗಿರುತ್ತದೆ. ಮೂರನೇ ದಿನ ಗುರುವಾರ ಅ...

ಬನಹಟ್ಟಿ ನಗರದ ಪಟಾಕಿ ಜಾತ್ರೆಯ ಸರ್ವರಿಗೂ ಹಾರ್ದಿಕ ಶುಭಾಶಯಗಳು

ಸರ್ವರಿಗೂ ಜಾತ್ರೆಯ ಹಾರ್ದಿಕ ಶುಭಾಶಯಗಳು ನಮ್ಮೂರ ಜಾತ್ರೆ ಜಾತ್ರೆಯ ಹರುಷ ಪ್ರತಿ ವರುಷ ಮರಳಿ ಮರಳಿ ಬರುವುದು ನಮ್ಮಯ ತನುಮನ ಪುಳಿಕಿತ ಗೊಳಿಸುತ ನವ ಚೈತನ್ಯವ ತುಂಬುವುದು ಪಟಾಕಿ ಮದ್ದಿನ ಬಿರುಸಿನ ಸದ್ದು ಭಕ್ತರು ಕೇಳಿ ನಲಿಯುವರು ಬಾನಿಗೆ ಹಾರುವ ಬಣ್ಣಿನನ ಬಾಣವ ನೋಡಿ ಎಲ್ಲರೂ ಕುಣಿಯವರು ಸುತ್ತುವ ಜೇಕಲಿ ಮಕ್ಕಳು ಕುಳಿತು ಕೇಕೇ ಹಾಕಿ ಹಾಡುವರು ಬಾನಲಿ ತೇಲುವ ತೊಟ್ಟಿಲಲ್ಲಿ ಕುಳಿತು ಕೊಂಡು ನಲಿಯುವರು ಹಲವು ಬಗೆಯ ಆಟಿಕೆ ವಸ್ತು ರಂಗು ರಂಗಿನ ಬಳೆಗಳ ಸಂತೆ ನೋಡಲು ಕೊಳ್ಳಲು ಬರುವರು ಜನರು ಮರೆತು ತಮ್ಮಯ ನಿತ್ಯದ ಚಿಂತೆ ಕಂಠಮಾಲೆಯು ರಥಕ್ಕೆ ಕಟ್ಟುತ ಹಾಲಾಗಿ ಜೇನಾಗಿ ಎಲ್ಲರೂ ಬೆರೆತು ಪೂಜೆಗೆ ತರುವರು ಕರ್ಪೂರ ಕಾಯಿ ಹಿಂದು ಮುಸ್ಲಿಮ್ ಭೇದವ ಮರೆತು ರಥದಲ್ಲಿ ಕಾಡ ಸಿದ್ಧನ ಮೂರ್ತಿ ಅದೆಷ್ಟು ಸುಂದರ ಕಾಣುವುದು ಮನದಲ್ಲಿ ಪೂಜ್ಯ ಭಾವನೆ ಬೆಳೆಸಿ ಆತ್ಮಾನಂದವ ನೀಡುವುದು ರುಚಿಕರ ನಮ್ಮ ಅವಲಕ್ಕಿ ಚೂಡಾ ಬೆಲ್ಲಶ್ ಬರ್ಫಿ ಪೇಡೆ ಕುಂದಾ ಬನಹಟ್ಟಿ ಜಾತ್ರೆಯ ಸೊಬಗನು ಸಾರುತ "" ಈ ಶಮ್ಸ್  ನು ರಚಿಸಿದ ಈ ಕವನಂದಾ ರಚನೆ: ಶಮಶೋದ್ದಿನ್ ಶಮ್‌ನಿಯಾಜಿ (ಝಾರೆ ಸರ್) ಶಾಂತಿ ನಗರ ಬನಹಟ್ಟಿ-587 311 ಮೊ: 7259863787