ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ವತಿಯಿಂದ ತಾಲೂಕು ಆರೋಗ್ಯ ಕೇಂದ್ರ ಸ್ಥಾಪನೆ ಹಾಗೂ ಬಸ್ಸುನಿಲ್ದಾಣ ಕುರಿತು ಸುದ್ದಿಗೋಷ್ಠಿ :*
*ರಬಕವಿ ಬನಹಟ್ಟಿ :* ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ, ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ , ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಶ್ರೀ ಬಸವರಾಜ ಧರ್ಮ0ತಿ ನೇತೃತ್ವದಲ್ಲಿ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ , ಹಾಗೂ ಸಾರ್ವಜನಿಕ ಮೂಲಭೂತ ಸೌಕರ್ಯಗಳಾದ ತಾಲೂಕಾಸ್ಪತ್ರೆ ಮತ್ತು ನಗರದ ಬಸ್ ನಿಲ್ದಾಣ ಮೇಲ್ದರ್ಜೆಗೇರಿಸಲು ಹೋರಾಟದ ರೂಪುರೇಷೆಗಳ ಬಗ್ಗೆ ,ಸುದ್ದಿಗೋಷ್ಠಿಯನ್ನು ಕರೆಯಲಾಗಿತ್ತು . ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ,ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಶ್ರೀ ಬಸವರಾಜ ಧರ್ಮ0ತಿ ,ಅವಳಿ ನಗರಗಳಾದ ರಬಕವಿ-ಬನಹಟ್ಟಿ ತಾಲೂಕು ನಂತರವೂ ಕೂಡ ನಗರದ ಆಸ್ಪತ್ರೆಯು ಅದೇ ರೀತಿ ಇದೆ , ಈ ಆಸ್ಪತ್ರೆಗೆ , ಕನಿಷ್ಠ 100 ಹಾಸಿಗೆಯುಳ್ಳ ಅತ್ಯಾಧುನಿಕ ಆಸ್ಪತ್ರೆ ಆಗಬೇಕಾಗಿತ್ತು , .ಆದರೆ ಇನ್ನೂ ಕೂಡ ಆಗಿಲ್ಲ ,ಹಿಂದೆ ಸಿದ್ದರಾಮಯ್ಯ ಸರಕಾರದಲ್ಲಿ ರಬಕವಿ-ಬನಹಟ್ಟಿ ತಾಲೂಕಾ ಘೋಷಣೆಯಾಗಿತ್ತು , ಇದೇ ಸರ್ಕಾರದಲ್ಲಿ ಶ್ರೀಮತಿ ಉಮಾಶ್ರೀ ಕೂಡ ಸಂಪುಟ ಸಚಿವೆಯಾಗಿದ್ದರು ಕೂಡ ಹೆಚ್ಚಿನ ಅನುದಾನ ತರುವಂತಹ ಕೆಲಸ ಮಾಡಲಿಲ್ಲ. ಈಗಿನ ಸರ್ಕಾರದ ಶಾಸಕರು ಶ್ರೀ ಸಿದ್ದು ಸವದಿ ಕೂಡ , ತಾಲೂಕ ಆಸ್ಪತ್ರೆ ಹಾಗೂ ನಗರದ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಸಮರ್ಪಕವಾದ ಅನುದ...