ಬನಹಟ್ಟಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂಬರ್ 2 ಶಾಲಾ ಆವರಣದಲ್ಲಿ ವಿಜ್ರಂಭಣೆಯಿಂದ ಜರುಗಿದ ಪ್ರತಿಭಾ ಕಾರಂಜಿಹಾಗೂ ಕಲೋತ್ಸವ*
*ವಿಜ್ರಂಭಣೆಯಿಂದ ಜರುಗಿದ ಪ್ರತಿಭಾ ಕಾರಂಜಿಹಾಗೂ ಕಲೋತ್ಸವ* ರಬಕವಿ-ಬನಹಟ್ಟಿ : ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂಬರ್ 2 ಆವರಣದಲ್ಲಿ ಪ್ರತಿಭಾ ಕಾರಂಜಿ ಬಹಳ ಅದ್ದೂರಿಯಾಗಿ ನಡೆಯಿತು . ಈ ಪ್ರತಿಭಾಕಾರಂಜಿಯ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಬಾಗಲಕೋಟೆ , ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಜಮಖಂಡಿ ,ಹಾಗೂ ಉರ್ದು ಸಮೂಹ ಸಂಪನ್ಮೂಲ ಕೇಂದ್ರ ರಬಕವಿ , ಇವರ ಜಂಟಿ ಸಹಯೋಗದೊಂದಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 2 ಅವರಣದಲ್ಲಿ ವಲಯ ಮಟ್ಟದ ಪ್ರತಿಭಾಕಾರಂಜಿ ಹಾಗೂ ಕಲೋಸ್ತವ ಕಾರ್ಯಕ್ರಮವು ಬಹಳ ಅದ್ದೂರಿಯಾಗಿ ಜರುಗಿತು . ಪ್ರತಿಭಾಕಾರಂಜಿಯ ಕಾರ್ಯಕ್ರಮವನ್ನು ಎಲ್ಲರೂ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆಯಾಯಿತು . ಈ ಪ್ರತಿಭಾಕಾರಂಜಿಯ ಕಾರ್ಯಕ್ರಮದಲ್ಲಿ ತೇರದಾಳ ,ಹನಗಂಡಿ ,ರಬಕವಿ ಬನಹಟ್ಟಿ ,ಹಿಪ್ಪರಗಿ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು . ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು , ಹಾಸ್ಯ ಚುಟುಕು ,ಕ್ವಿಸ್ ಕಾಂಪಿಟೇಶನ್ , ಕವಾಲಿ ,ರಂಗೋಲಿ ಸ್ಪರ್ಧೆ ಕಲಾಕೃತಿ ಮಣ್ಣಿನಿಂದ ಮಾಡಿದ ವಸ್ತುಗಳು , ಇವೆಲ್ಲವೂ ಪ್ರತಿಭಾ ಕಾರಂಜಿಯ ವೇದಿಕೆಯ ಮೂಲಕ ,ತಮ್ಮ ಪ್ರತಿಭೆಯನ್ನು ತೋರಿಸಿದರು...