*ರಮಜಾನ್ ಪ್ರಯುಕ್ತ ಕಿಟ್ ವಿತರಣೆ ಮಾಡಿದ ಜಮಿಯತೆ ಉಲ್ಲೇಮಾ ಹಿಂದ್* *ರಬಕವಿ - ಬನಹಟ್ಟಿ* : ಕಳೆದ ಹತ್ತು ವರ್ಷಗಳಿಂದ ಅನೇಕ ಸಾಮಾಜಿಕ ಸೇವೆ ಮಾಡುತ್ತಾ ಬರುತ್ತಿರುವ ಜಮೀಯತೆ ಉಲೆಮಾ ಹಿಂದ್ ಸಂಘಟನೆಯು ಪ್ರತಿ ವರ್ಷದಂತೆ , ಈ ವರ್ಷವೂ ಕೂಡ ಅತಿ ಬಡವ ಹಾಗೂ ವಿಧವೆ ಮಹಿಳೆಯರಿಗಾಗಿ ರಮಜಾನ್ ಹಬ್ಬದ ಪ್ರಯುಕ್ತ ಶುರೂಕೂರ್ಮ ಆಹಾರದ ಕಿಟ್ ಗಳನ್ನು ವಿತರಣೆ ಮಾಡಿದರು . ಈ ಆಹಾರದ ಕೀಟಗಳನ್ನು ನೆರೆಯ ಚಿಮ್ಮುಡ್ ,ನಾವಲಗಿ ,ಆಸಂಗಿ ಕುಳ್ಳೊಳ್ಳಿ, ಹಿಪ್ಪರಗಿ, ರಬಕವಿ ಬನಹಟ್ಟಿ ರಾಂಪುರ್ ಹೊಸೂರ್ ಸೇರಿದಂತೆ ಅತಿ ಬಡವ ಹಾಗೂ ವಿಧವೇ ಮಹಿಳೆಯರನ್ನು ಗುರುತಿಸಿ , ಒಟ್ಟು 600 ಕಿಟ್ಟುಗಳನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ರಬಕವಿ ಬನಹಟ್ಟಿ ನಗರಸಭೆಯ ಮಾಜಿ ಅಧ್ಯಕ್ಷ ಉಸ್ಮಾನ್ ಸಾಬ್ ಲೆಂಗ್ರೆ, ನಗರದ ಅಂಜುಮನ್ ಅಧ್ಯಕ್ಷ ಇಕ್ಬಾಲ್ ಲೆಂಗ್ರೆ, ನಗರಸಭೆಯ ಸದಸ್ಯ ಯುನುಸ್ ಚೌಗುಲೆ, ನಗರದ ಉದ್ಯಮಿ ಯುನುಸ್ ನಿಪ್ಪಾಣಿ , ಬನಹಟ್ಟಿ ಅಲ್ಪ ಸಂಖ್ಯಾತರ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಇರ್ಷಾದ್ ಮೋಮಿನ್ , ಯಾಸಿನ್ ಕಾರಬಾರಿ, ಇಮ್ತಿಯಾಸ್ ಗೋಕಾಕ್, ಹಾಜಿಲಾಲ್ ಅತ್ತಾರ್, ಹಾರುನ್ ರಶೀದ್ ರಸೀದ್ ಬೇವೂರ್, ರಾಜೇ ಸಾಬ್ ಕುಲ್ಲೋಳಿ, ಅಯ್ಯೋಬ ಹೊರಟ್ಟಿ, ಮೊಹಮ್ಮದ್ ಜಾರೆ, ಸೇರಿದಂತೆ ಜಮೀಯತೆ ಒಲೆಮಾ ಹಿಂದ್ ಅಧ್ಯಕ್ಷ ಮೌಲಾನಾ ಮೊಸಿನ್ ಗೋಕಾಕ್, ಸಂಘಟನೆಯ ಸದಸ್ಯರು , ಪದಾಧಿಕಾರಿಗಳು ಉಪಸ್ಥಿತರಿದ್ದರು. ...