ಬೆಂಗಳೂರಿನ ಫಕೀರ್ ಲೇಔಟ್ ನಿರಾಶ್ರಿತರ ಪರವಾಗಿ ತೇರದಾಳದಲ್ಲಿ SDPI ಬೃಹತ್ ಪ್ರತಿಭಟನೆ ಬುಲ್ಡೋಜರ್ ರಾಜಕಾರಣಕ್ಕೆ ತೀವ್ರ ಖಂಡನೆ ತೇರದಾಳ: ಬೆಂಗಳೂರಿನ ಫಕೀರ್ ಲೇಔಟ್‌ನಲ್ಲಿ ದಶಕಗಳಿಂದ ವಾಸವಿದ್ದ ಬಡವರ ಮನೆಗಳನ್ನು ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದೆ ಧ್ವಂಸಗೊಳಿಸಿ ಅವರನ್ನು ಬೀದಿಗೆ ತಳ್ಳುತ್ತಿರುವ ಸರ್ಕಾರದ ಅಮಾನವೀಯ **“ಬುಲ್ಡೋಜರ್ ರಾಜಕಾರಣ”**ವನ್ನು ಖಂಡಿಸಿ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ತೇರದಾಳ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಇಂದು ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಮಜದ್ ಖಾನ್ ಇನಾಮದಾರ ಅವರು, “ಬೆಂಗಳೂರಿನ ಫಕೀರ್ ಲೇಔಟ್‌ನಲ್ಲಿ ದಶಕಗಳಿಂದ ವಾಸಿಸುತ್ತಿರುವ ಬಡವರ ಹೊಟ್ಟೆಯ ಮೇಲೆ ಸರ್ಕಾರ ಹೊಡೆಯುತ್ತಿದೆ. ಯಾವುದೇ ಪುನರ್ವಸತಿ ವ್ಯವಸ್ಥೆ ಕಲ್ಪಿಸದೇ ಮನೆಗಳನ್ನು ನೆಲಸಮಗೊಳಿಸಿರುವುದು ಸಂವಿಧಾನ ವಿರೋಧಿ ನಡೆ. ನಿರಾಶ್ರಿತರಿಗೆ ತಕ್ಷಣ ಪುನರ್ವಸತಿ ಕಲ್ಪಿಸದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು,” ಎಂದು ಎಚ್ಚರಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ ಮುಬಾರಕ್ ಅಲ್ಲಾ ಖಾನ್ ಮಾತನಾಡಿ, ಸರ್ಕಾರ ಕೇವಲ ಬಡವರನ್ನೇ ಗುರಿಯಾಗಿಸಿಕೊಂಡು ಬುಲ್ಡೋಜರ್ ಪ್ರಯೋಗ ಮಾಡುತ್ತಿದೆ. ಅಧಿಕಾರವು ಬಡವರಿಗೆ ಆಸರೆಯಾಗಲು ಇರಬೇಕೇ ಹೊರತು, ಅವರನ್ನು ಅನಾಥರನ್ನಾಗಿ ಮಾಡಲು ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ...