ನಾಡಿಗಾಗಿ ತ್ಯಾಗ ಮಾಡಿದವರನ್ನು ಸ್ಮರಿಸೋಣ | ಶಾಸಕ ಸಿದ್ದು ಸವದಿ ತೇರದಾಳ: ಒಂದು ರಾಜ್ಯ ಅಥವಾ ದೇಶವಾಗಲಿ ಸುರಕ್ಷಿತವಾಗಿರಬೇಕಾದರೆ ಅಲ್ಲಿ ಒಂದು ಒಳ್ಳೆಯ ಆಢಳಿತವಿರಬೇಕು. ಒಳ್ಳೆಯ ಆಢಳಿತ ನಡೆಸಬೇಕಾದರೆ ಅಲ್ಲಿ ಒಂದು ಸರ್ವಶ್ರೇಷ್ಠವಾದ ಆಢಳಿತ ಗ್ರಂಥವೆ ಬೇಕಾಗುತ್ತದೆ. ಅಂತಹ ಶ್ರೇಷ್ಠವಾದ ಗ್ರಂಥವೆAದರೆ ಅದುವೇ ನಮ್ಮ ಸಂವಿಧಾನ ಎಂದು ಶಾಸಕ ಸಿದ್ದು ಸವದಿ ಹೇಳಿದರು. ಪಟ್ಟಣದಲ್ಲಿ ನಿನ್ನೆ ಜನೇವರಿ ೨೬ ಗಣರಾಜ್ಯೋತ್ಸವದ ನಿಮಿತ್ಯ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ೭೭ ನೇ ಗಣರಾಜ್ಯೋತ್ಸದಲ್ಲಿ ಗೌರವವಂದನೆ ಸ್ವಿಕರಿಸಿ ಮಾತನಾಡಿದ ಅವರು ನಮ್ಮ ದೇಶದಲ್ಲಿ ಸಾವಿರಾರು ಜಾತಿಗಳಿವೆ ಹಲವಾರು ದರ್ಮಗಳಿವೆ. ವಿವಿಧ ಭಾಷೆಗಳಿವೆ, ವಿವಿಧ ಧಾರ್ಮಿಕ ಆಚರಣೆಗಳಿವೆ, ಸಂಪ್ರದಾಯಗಳು ಹೀಗೇ ಎಷ್ಟೇ ವಿವಿಧತೆಯಿದ್ದರೂ ಯಾವುದೇ ಧರ್ಮಕ್ಕಾಗಲಿ, ಜಾತಿಗಾಗಲಿ, ಆಚರಣೆಗಾಗಲಿ ಒಂದಿಷ್ಟೂ ಧಕ್ಕೆಯಾಗದ ರೀತಿಯಲ್ಲಿ ಸಂವಿಧಾನ ರಚಿಸಿ ಡಾ.ಬಾಬಾಸಾಹೇಬರು ಜಗತ್ತಿನಲ್ಲಿಯೇ ಸರ್ವಶ್ರೇಷ್ಠ ವ್ಯಕ್ತಿಯಾಗಿ ಹೊರಹೊಮ್ಮಿದರು. ನಮ್ಮ ದೇಶದಲ್ಲಿ ಸಾಕಷ್ಟು ಹಬ್ಬಗಳಿವೆ ಆದರೆ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರö್ಯದಿನೋತ್ಸವ ಮಾತ್ರ ಅತ್ಯಂತ ಪರಮಪವಿತ್ರ ಹಬ್ಬಗಳಾಗಿವೆ. ಇಲ್ಲಿ ಯಾವುದೇ ಧರ್ಮವಿಲ್ಲ ಜಾತಿ ಇಲ್ಲ, ಮೇಲಿಲ್ಲ ಕೀಳಿಲ್ಲ, ನಾವೆಲ್ಲರೂ ಭಾರತೀಯ...