Skip to main content

Posts

Showing posts from February, 2026

15 ಗ್ರಾಂ ಬಂಗಾರ ಕದ್ದ ಕಳ್ಳ, ಈಗ ಪೊಲೀಸರ ಅತಿಥಿ :

15 ಗ್ರಾಂ ಬಂಗಾರ ಕದ್ದ ಕಳ್ಳ, ಈಗ ಪೊಲೀಸರ ಅತಿಥಿ :   ರಬಕವಿ : ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಮಹಿಳೆಯೊಬ್ಬರ ತರಕಾರಿ ಚೀಲದಿಂದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ , ಕಳ್ಳ ಆರೋಪಿಯನ್ನು ಪೊಲೀಸರು ಕೇವಲ 24 ಗಂಟೆಗಳಲ್ಲಿ ಬಂಧಿಸಿ ಯಶಸ್ವಿಯಾಗಿದ್ದಾರೆ . ಪೊಲೀಸರ ಈ ಚುರುಕು ಕಾರ್ಯಾಚರಣೆಯಲ್ಲಿ, ಅಪರಾಧ ವಿಭಾಗದ ಪಿಎಸ್ಐ ಪಿ ಎಸ್ ಪೂಜಾರಿ, ಮತ್ತು ಪೊಲೀಸ್ ಸಿಬ್ಬಂದಿ ಡಿ ವಿ ಕುಂಬಾರ್ ಸಿ ಎಚ್ ಸಿ, ಪಿ ಹೆಚ್ ಗಣಿ ಸಿಪಿಸಿ, ಎಸ್ ಜಿ ಲಗಳಿ ಸಿಪಿಸಿ, ವಿ ಎಸ್ ಅಜ್ಜನಗೌಡರ್, ಎಸ್ ಎಸ್ ಬಾಡಗಿ ಸಿಪಿಸಿ, ರವರ ತಂಡ ಆರೋಪಿಗಾಗಿ ಬಲೆ ಬೀಸಿ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ. ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮಾಂಗಲ್ಯ ಸರ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಯಂಕವ್ವ ಮಾಂತೇಶ್ ಹೂಗಾರ ಎಂಬ ಮಹಿಳೆ ತಮ್ಮ ಹೊಲದ ಚೀಲದಲ್ಲಿ ಮಾಂಗಲ್ಯ ಸರ ಇಟ್ಟು ಸಂತೆಗೆ ಹೋಗಿದ್ದರು. ತರಕಾರಿ ತೆಗೆದುಕೊಂಡು ಬಂದು ನೋಡುವಷ್ಟರಲ್ಲಿ ಚೀಲದಲ್ಲಿದ್ದ ಮಾಂಗಲ್ಯ ಸರ ಕಳ್ಳತನವಾಗಿತ್ತು. ಈ ಸಂಬಂಧ ತನಿಖೆ ಕೈಗೊಂಡ ಬನಹಟ್ಟಿ ಪೊಲೀಸರು, ಪ್ರಕರಣ ದಾಖಲಾದ ಕೇವಲ 24 ಗಂಟೆಗಳಲ್ಲಿ ಆರೋಪಿ ಅಬೂಬ್ಕರ್ ರಂಜಾನ್ ಸಾಬ್ ಮುಲ್ಲಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ಸುಮಾರು 3 ಲಕ್ಷ ರೂ. ಮೌಲ್ಯದ 10 ಗ್ರಾಂ ಮಾಂಗಲ್ಯ ಸರ, 5 ಗ್ರಾಂ ಸರ ಮ...

ತನು-ಮನ-ಧನದಿಂದ ಜಿಲ್ಲಾ ಜಾನಪದ ಸಮ್ಮೇಳನವನ್ನು ಯಶಸ್ವಿಗೊಳಿಸಿ- ಮಾಜಿ ಪುರಸಭೆ ಅಧ್ಯಕ್ಷ ಬಸವರಾಜ ಬಾಳಿಕಾಯಿ

ತನು-ಮನ-ಧನದಿಂದ ಜಿಲ್ಲಾ ಜಾನಪದ ಸಮ್ಮೇಳನವನ್ನು ಯಶಸ್ವಿಗೊಳಿಸಿ- ಮಾಜಿ ಪುರಸಭೆ ಅಧ್ಯಕ್ಷ ಬಸವರಾಜ ಬಾಳಿಕಾಯಿ  ತೇರದಾಳ: ಪಟ್ಟಣದಲ್ಲಿ ಇದೇ ತಿಂಗಳು ಫೆಬ್ರವರಿ 15 ರಂದು  ಶ್ರೀ ಅಲ್ಲಮಪ್ರಭುವಿನ ದೇವಸ್ಥಾನದಲ್ಲಿ ಜರಗುಲಿರುವ  ದ್ವಿತೀಯ ಜಿಲ್ಲಾ ಕರ್ನಾಟಕ ಜಾನಪದ ಸಮ್ಮೇಳನ ಜರುಗಲಿದ್ದು ಎಲ್ಲ ಪದಾಧಿಕಾರಿಗಳು ಹಾಗೂ ಕಲಾವಿದರು ತನುಮನದಿಂದ ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮಾಜಿ ಪುರಸಭಾ ಅಧ್ಯಕ್ಷ ಬಸವರಾಜ ಬಾಳಿಕಾಯಿ ಪೂರ್ವಭಾವಿ ಸಭೆಯಲ್ಲಿ ಹೇಳಿದರು.ಸಮಿತಿಗಳ ರಚನೆ ಹಾಗೂ ಕಾರ್ಯ ಹಂಚಿಕೆ ಕೆಲಸ ಸಮಾನ ಜೀವಿಗಳು ಒಗ್ಗೂಡಿಕೊಂಡು ಯಶಸ್ವಿಗೊಳಿಸಬೇಕೆಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ರಾಯಪ್ಪ ಕುಂಬಾರ್ ಅಭಿಮತವನ್ನು ವ್ಯಕ್ತಪಡಿಸಿದರು. ನನಗೆ ಈಗ 81 ವರ್ಷದ ಪ್ರಾಯ ನಾನು ಕೂಡ ತಾವು ವಹಿಸಿದ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳುವೆ ಯಾವುದೇ ಕಾರ್ಯ ಕೆಲಸಗಳ ಮಾಡುವಾಗ ಹಿಂಜರಿಕೆ ಪ್ರಶ್ನೆ ಇಲ್ಲ ಎಂದು ಹೇಳಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಗಂಗಾಧರ್ ಮೋಪಗಾರ ಮಾತನಾಡಿ ಕಾರ್ಯ ಹಂಚಿಕೆ ಹಾಗೂ ಸಮಿತಿಗಳ ಜವಾಬ್ದಾರಿ ವಹಿಸಿಕೊಂಡವರು ತನುಮನದಿಂದ  ತೊಡಗಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು. ಕಡಿಮೆ  ಸಮಯದ ಅಭಾವ ಇರೋದ್ರಿಂದ ಜಿಲ್ಲಾ ಸಮೇಳನಕ್ಕೆ ಕೆಲವೇ  ದಿನಗಳು ಉಳಿದಿದ್ದು  ಪದಾಧಿಕಾರಿಗಳು ತಮಗೆ ವಹಿಸಿದ ಕೆಲ...

ಇತಿಹಾಸ ಬರೆದ ಪಂಚ ಗ್ಯಾರಂಟಿ ಯೋಜನೆಗಳು - ಕಾಂಗ್ರೇಸ್ ಮುಖಂಡ ಸಿದ್ದು ಕೊಣ್ಣೂರ

     ಪಂಚಗ್ಯಾರoಟಿ ಯೋಜನೆಗಳು ದೇಶದಲ್ಲಿಯೇ ಹೊಸ ಚರಿತ್ರೆ ಬರೆದಿದೆ . - ಕಾಂಗ್ರೇಸ್ ಮುಖಂಡ ಸಿದ್ದು ಕೊಣ್ಣೂರ ತೇರದಾಳ: ನಮ್ಮ ಘಣ ಸರಕಾರವು ಬಡವರ ಉದ್ಧಾರಕ್ಕಾಗಿ ಪಂಚಗ್ಯಾರo ಟಿ ಯೋಜನೆಗಳನ್ನು ಜಾರಿಗೆ ತಂದು ಬಡವರ ಬದುಕಿಗೆ ಆಸರೆಯಾಗಿದೆ. ಯಾವುದೇ ಧರ್ಮ ಜಾತಿ ಮತ ಎನ್ನದೆ ಪ್ರತಿ ಕುಟುಂಬದ ಹೆಣ್ಣುಮಗಳಿಗೆ ಅವರು ಶ್ರೀಮಂತರಿರಲಿ. ಬಡವರಿರಲಿ ಎಲ್ಲಾ ಮಹೀಳೆಯರಿಗೂ ಈ ಯೋಜನೆ ನೀಡಿ ಇಡೀ ದೇಶದಲ್ಲಿಯೇ ಹೊಸ ಚರಿತ್ರೆ ಬರೆದಿದೆ ಎಂದು ಕಾಂಗ್ರೆಸ್ ಯುವ ಧುರಿಣರಾದ ಸಿದ್ದು ಕೊಣ್ಣೂರ ಹೇಳಿದರು.         ತೇರದಾಳ ಪಟ್ಟಣದ ಶ್ರೀ ಬ್ರಹ್ಮಾನಂದ ದೇವಸ್ಥಾನದಲ್ಲಿ ಜಿಲ್ಲಾ ಪಂಚಾಯತ ಬಾಗಲಕೋಟೆ, ತಾಲೂಕು ಪಂಚಾಯತ ರಬಕವಿ-ಬನಹಟ್ಟಿ ಹಾಗೂ ಪುರಸಬೆ ತೇರದಾಳ ಇವರ ನೇತೃದಲ್ಲಿ ತೇರದಾಳ ತಾಲೂಕಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು ಕೊರತೆಗಳ ಸಭೆಯಲ್ಲಿ ಮಾತನಾಡಿದ, ಅವರು ಅಧಿಕಾರಿಗಳಾದವರು ದಯವಿಟ್ಟು ನಿಮ್ಮ ಹತ್ತಿರ ಬರುವ ಯಾರನ್ನೂ ಕಚೇರಿಗೆ ಅಲೆಯುವಂತೆ ಮಾಡಬೇಡಿ. ಅವರ ನೋವಿಗೆ ಸ್ಪಂದಿಸಿ ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಗ್ಯಾರಂಟಿ ಅನುಷ್ಠಾಣ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷೆ ಜಯಶ್ರೀ ತಿಮ್ಮಾಪೂರವರು ಪೂರ್ವಕಾಲದಿಂದಲೂ ಮಹಿಳೆಯು ಒಂದು ಸಂಕೋಲೆಯಲ್ಲಿ ಜೀವನ ನಡೆಸುತ್ತಾ ಬಂ...

ಹಣಗಂಡಿ ಪಂಚಾಯತಿಯ ನಿಷ್ಕಾಳಜಿ . ಸೊರಗುತ್ತಿರುವ ಸ್ವಚ್ಛತಾ ವ್ಯವಸ್ಥೆ. ವಿಲೇವಾರಿಯಾಗದ ಕಸ: ಬೇಸತ್ತ ಜನ ವರದಿ; ಮಹಿಬುಬ ಮ ಬಾರಿಗಡ್ಡಿ

ಹಣಗಂಡಿ ಪಂಚಾಯತಿಯ ನಿಷ್ಕಾಳಜಿ . ಸೊರಗುತ್ತಿರುವ ಸ್ವಚ್ಛತಾ ವ್ಯವಸ್ಥೆ. ವಿಲೇವಾರಿಯಾಗದ ಕಸ:  ಬೇಸತ್ತ ಜನ  ಮಹಿಬುಬ ಮ ಬಾರಿಗಡ್ಡಿ ಹಣಗಂಡಿ ;  ಗ್ರಾಮ ಪಂಚಾಯಿತಿಯ ಟಿಪ್ಪು ಸುಲ್ತಾನ್ ಸರ್ಕಲ್ ಹತ್ತಿರ ಜನಬೀಡ ಪ್ರದೇಶದಲ್ಲಿ  ಕಾಣುವ ಕಸದ ರಾಶಿ ಬೀದಿನಾಯಿ-ಹಂದಿಗಳಿAದ ರಸ್ತೆಯಲ್ಲಿ  ಪಕ್ಕದಲ್ಲಿ ಬೀಳುವ ತ್ಯಾಜ್ಯದಿಂದ  ಗಲೀಜ ಗ್ರಾಮವಾಗಿ ಬದಲಾಗುತ್ತಿದೆ, ಗ್ರಾಮದಲ್ಲಿ  ನಿತ್ಯವೂ ಕಂಡುಬರುವ ದೃಶ್ಯವಿದು. ಕಸ ವಿಲೇವಾರಿಗೂ ಗ್ರಾಮ ಪಂಚಾಯತಿಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದು, ಇದರಿಂದಾಗಿ ಕಸದ ರಾಶಿಗಳು ತಿಂಗಳುಗಟ್ಟಲೇ ಸ್ಥಳದಲ್ಲಿ  ಬಿದ್ದುಕೊಂಡಿರಬೇಕಾಗಿದೆ . ಕುಡಚಿ - ಜಮಖಂಡಿ ಪ್ರಮುಖ ರಸ್ತೆಯ, ಚಾ ಅಂಗಡಿ, ಎಗ್ ರೈಸ್ ಅಂಗಡಿ  ಸೇರಿದಂತೆ , ವಿವಿಧ ವ್ಯಾಪಾರಸ್ಥರ ಕಸವನ್ನು ಒಂದೇ ಕಡೆ ಹಾಕುವುದರಿಂದ ಕಸದ ರಾಶಿಗಳು ಹೋಗುವ  ಪ್ರಯಾಣಿಕರ ಕಣ್ಣಿಗೆ ಕಂಡು ಮುಜಗರವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ . ಕಸದ ತಾಜ್ಯ ವಿಲೇವಾರಿಗೆ ಗ್ರಾಮ ಪಂಚಾಯಿತಿಯ  ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಜನರ ಬೇಸರಕ್ಕೆ  ಕಾರಣವಾಗಿದೆ.  ಹಣಗಂಡಿಯ ಪ್ರಸಿದ್ದ ವಾಡೆ ;  ಪಂಚಾಯತಿ ಯ್ಯಾಪ್ತಿಯಲ್ಲಿ ರಾಜ ವಾಡೆಗೆ  ಖ್ಯಾತಿ ಪಡೆದಿರುವ ಗ್ರಾಮ , ಈ ಗ್ರಾಮ ಇತ್ತೀಚಿನ ದಿನಗಳಲ್ಲಿ ಕಸದ ಸಮಸ್ಯೆಯಿಂದ ಹಾಗೂ ಚರಂಡಿಯ ಕೊಳಚೆ ನೀರಿ ನಿಂದ ಅಪಖ್ಯ...