Skip to main content

Posts

Showing posts from January, 2024

ಅಂಜುಮನ್ ಆಡಳಿತ ಅವಧಿ ಮುಗಿದರು ಕೂಡ ಕ್ಯಾರೆ ಅನ್ನದ ಸಂಬಂಧಪಟ್ಟ ಅಧಿಕಾರಿಗಳು

 ಬಾಗಲಕೋಟೆ / ರಬಕವಿ - ಬನಹಟ್ಟಿ :  ಬಾಗಲಕೋಟ್ ಜಿಲ್ಲೆಯ ರಬಕವಿ - ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಅಂಜುಮನ ಎ ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿಯ ಮೂರು ವರ್ಷದ ಅವಧಿ ಕಳೆದ ಕೆಲವು ತಿಂಗಳ ಹಿಂದೆ ಮುಗಿದರೂ ಕೂಡ ಇದರ ಸಂಬಂಧಪಟ್ಟ ವಕ್ಪ್ಹ್ ಅಧಿಕಾರಿಗಳು ಕೂಡ ಕ್ಯಾರೆ ಅನ್ನುತ್ತಿಲ್ಲ. ಇದರ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷವೋ ಅಥವಾ ನಗರದ ಅಂಜುಮನ್ ಸಂಸ್ಥೆಯ ಆಡಳಿತ ಮಂಡಳಿಯ ನಿರ್ಲಕ್ಷವೋ   ಎಂದು ಕಾದು ನೋಡಬೇಕಾಗಿದೆ.  ಮುಸ್ಲಿಂ ಸಮುದಾಯದ ಸಾರ್ವಜನಿಕ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರ ಚುನಾಯಿತರಾಗಲಿ ಅಥವಾ ಅವಿರೋಧವಾಗಿ ಕಳಿಸಿರುವ ಅಂತಹ ಸದಸ್ಯರು ಅವಧಿ ಮುಗಿದ ತಕ್ಷಣವೇ ಸಾರ್ವಜನಿಕರ ಸಭೆ ಕರೆದು ಇತ್ಯರ್ಥ ಪಡಿಸಬೇಕೆಂದು ಸಾರ್ವಜನಿಕ ಅಭಿಪ್ರಾಯವಾಗಿದೆ .  ಯಾವುದೇ ಸಂಘ ಸಂಸ್ಥೆಗಳ ಚುನಾವಣೆ ಅವಧಿ ಮುಗಿಯುವುದರ ಎರಡು ತಿಂಗಳ ಮುಂಚೆಯೇ ಇದರ ಪ್ರಕ್ರಿಯೆ ಶುರುವಾಗುತ್ತದೆ. ಆದರೆ ಈ ಸಂಸ್ಥೆಯ ಅವಧಿ ಕೆಲವು ತಿಂಗಳ ಹಿಂದೆ ಮುಗಿದರು ಕೂಡ ಯಾವುದೇ ಸಂಬಂಧ ಪಟ್ಟ ಅಧಿಕಾರಿಗಳಾಗಲಿ, ಸಂಸ್ಥೆಯ ಆಡಳಿತ ಮಂಡಳಿ ಆಗಲಿ, ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರ ಆರೋಪವಾಗಿದೆ.  ಅಂಜುಮನ ಸಂಸ್ಥೆಯ ಆಡಳಿತ ಮಂಡಳಿ ಅವಧಿ ಮುಗಿದರು ಕೂಡ ಇದು ಯಾರ ಆಡಳಿತ ಒಳಪಟ್ಟಿದೆ ಎಂದು ಪ್ರಶ್ನಾರ್ಥಕ ಚಿನ್ನವಾಗಿದೆ .  ವರದಿ : ಮೆಹಬೂಬ್ ಎಂ ಬಾರಿಗಡ್ಡಿ

ಅಕ್ರಮ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಯಾವಾಗ :*

*ಅಕ್ರಮ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದಲ್ಲಿ  ಕಡಿವಾಣ ಯಾವಾಗ :*    ಮಾವಾ , ಜೂಜಾಟ , ಮಟ್ಕಾ , ಅಕ್ರಮ ಸರಾಯಿ ಬಿಂದಾಸ್  ರಬಕವಿ ಬನಹಟ್ಟಿ :  ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ  ಅವಳಿ ನಗರಗಳಲ್ಲಿ ಭಾರಿ ಪ್ರಮಾಣದಲ್ಲಿ ಮಾವಾ ತಯಾರಿಕೆ , ಹಾಗೂ ಮಟ್ಕಾ ತಾನವಾಗಿ ಮಾರ್ಪಟ್ಟಿದೆ . ಕೆಲವು ತಿಂಗಳ ಹಿಂದೆ ಆರೋಗ್ಯ ಇಲಾಖೆ ಅಧಿಕಾರಿಗಳು ಮಾವಾ ತಯಾರು ಮಾಡುವಂತಹ ಅಡ್ಡೆ ಗಳಲ್ಲಿ ರೇಡ್ ಮಾಡಿದರು ಕೂಡ , ಪೊಲೀಸ್ ಇಲಾಖೆಗೆ ಗಮನಕ್ಕೆ ಇದ್ದರೂ ಕೂಡ , ನಗರದಲ್ಲಿ ಮಾವಾ ತಯಾರಕರು , ಜೂಜಟ್ ಕೋರರು, ಅಕ್ರಮ ಸರಾಯಿ ಕೋರರು ತಮ್ಮ ತಮ್ಮ  ದಂದೇ ಗಳಲ್ಲಿ ನಿರಂತರವಾಗಿ ಮುಂದುವರಿಯುತ್ತಿದ್ದಾರೆ . ಮಾವಾ ಒಂದು ನಿಷೇಧಿತ ಪದಾರ್ಥ, ಇದನ್ನು ಅಡಿಕೆ , ಸುನ್ನ  ಆರೋಗ್ಯಕ್ಕೆ ಹಾನಿಕಾರಿಯಾಗುವಂತಹ ರಾಸಾಯನಿಕ ಪದಾರ್ಥಗಳನ್ನು ಮಿಶ್ರಣ ಮಾಡಿ ಮಾವಾ ಅನ್ನುವಂತ ಪ್ರದಾರ್ಥವನ್ನು ತಯಾರು ಮಾಡುತ್ತಾರೆ. ಇದನ್ನು ಮನುಷ್ಯ ಸದಾ ಅಗೆಯವುದರಿಂದ ಇದರಿಂದ ಕ್ಯಾನ್ಸರ್ ಗೆ ತುತ್ತಾಗಬಹುದು.  ಮಾವ ಅನ್ನುವಂತಹ ನಿಷೇಧಿತ ಪ್ರಧಾರ್ಥ, ನಗರ ಪ್ರದೇಶಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಪ್ರತಿಯೊಂದು ಪಾನ್ ಶಾಪ್ಗಳಲ್ಲಿ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅವರ ಭಯವಿಲ್ಲದೆ ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದಾರೆ. ಮಾವಾ ಪದಾರ್ಥವನ್ನು ಯುವ ಪೀಳಿಗೆ ಅಷ್ಟೇ ಅಲ್ಲದೆ ಮಧ್ಯಮ ವಯಸ್ಕರ ಕೂಡ ಚಟಕ್ಕೆ ಬಲಿಯಾಗುತ್ತ...

ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ವಿಶೇಷ ವಸ್ತು ಪ್ರದರ್ಶನ

 ಬಾಗಲಕೋಟೆ / ರಬಕವಿ- ಬನಹಟ್ಟಿ  ಬಾಗಲಕೋಟ್ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದ ಎಕ್ಸಪರ್ಟ್ ಆಂಗ್ಲ ಮಾಧ್ಯಮ ಶಾಲೆ ರಬಕವಿ  ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ವಿಶೇಷ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. ಈ ಕಾರ್ಯಕ್ರಮವನ್ನು ಶಾಲೆಯ ಅಧ್ಯಕ್ಷರಾದ ಶಿವು ಗಿರಿಸಾಗರ್ ಹಾಗೂ ಕಾರ್ಯದರ್ಶಿ ಯಾದ ಬಾಬು ಪಾಲಬಾವಿ ಹಾಗೂ ಶಾಲೆಯ ಮುಖ್ಯ ಗುರುಗಳಾದ . ಮೊಹಮ್ಮದ್ ರಫೀಕ್ ನದಾಫ್ ಅವರು ಉದ್ಘಾಟಿಸಿದರು... ಈ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ವಿದ್ಯಾರ್ಥಿಗಳು ಉತ್ಸಹದಿಂದ ವಿಜ್ಞಾನ ಮಾದರಿ, ಐತಿಹಾಸಿಕ ಸ್ಮಾರಕಗಳು ,ಹಾಗೂ ಇನ್ನೂ ಅನೇಕ ರೀತಿಯ ಮಾದರಿಯ ವಸ್ತುಗಳನ್ನು ಪ್ರದರ್ಶನ ಮಾಡುವುದರ ಮೂಲಕ ಗಮನ ಸೆಳೆದರು .. ಜ್ಞಾನ ವಸ್ತು ಪ್ರದರ್ಶನದಲ್ಲಿ ಒಟ್ಟು 240 ಕ್ಕೂ ಅಧಿಕ ವಸ್ತುಗಳನ್ನು ಪ್ರದರ್ಶನ ಮಾಡಿದರು.. ಮಕ್ಕಳು ತಮ್ಮ ತಮ್ಮ ಮಾದರಿಗಳ ವಿವರಣೆಗಳನ್ನು ಅತ್ಯಂತ ಸುಂದರವಾಗಿ ವಿವರಿಸಿದರು ... ಈ ಸಂದರ್ಭದಲ್ಲಿ  ಶಾಲೆಯ  ನಜೀರ್  ಬಳಗಾರ , ಬಸಪ್ಪಾ ಕುರಿ,  ಜ್ಯೋತಿ  ಸಿಂಧೆ, ಶೃತಿ ಕವಾಸಿ,  ಬಸಮ್ಮ ಗಿರಿಸಾಗರ್, ಪ್ರಿಯಾಂಕ ಪರಿಟ್ , ಕಾವೇರಿ ಅಥಣಿ , ಸೋನಾಲಿ ಮಾಳಿ, ಹಾಗೂ ಇನ್ನಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು.... ವರದಿ ಸಂತೋಷ್ ಹೊಸಮನಿ