ಎಸ್ ಡಿ ಪಿ ಐ ಪಕ್ಷ ಸುನಾಮಿ ಇದ್ದ ಹಾಗೆ ತಡೆಯೋಕೆ ಬಂದ್ರೆ ಕೊಚ್ಚಿಕೊಂಡು ಹೋಗ್ತೀರಾ ! ಕಾಂಗ್ರೆಸ್ ಪ್ರಭಾವಿ ನಾಯಕನಿಗೆ ಪರೋಕ್ಷ ಟಾಂಗ್ ನೀಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಆರ್ ಭಾಸ್ಕರ್ ಪ್ರಸಾದ್ :
ಬಾಗಲಕೋಟೆ / ತೇರದಾಳ್ : ಬಾಗಲಕೋಟೆ ಜಿಲ್ಲೆಯ ತೆರದಾಳ ಪಟ್ಟಣದಲ್ಲಿ ಎಸ್ ಡಿ ಪಿ ಐ ತೆರದಾಳ ಮತ ಕ್ಷೇತ್ರ ಘಟಕದ ಆಶ್ರಯದಲ್ಲಿ , ರಾಜ್ಯ ಸೋಶಿಯಲ್ ಡಿಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷಕ್ಕೆ ನೂತನವಾಗಿ ಆಯ್ಕೆಯಾಗಿರುವಂತಹ ರಾಜ್ಯ ನಾಯಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಬಸ್ ನಿಲ್ದಾಣದ ಹತ್ತಿರ ಮಹಾತ್ಮ ಗಾಂಧಿ ಮೈದಾನದಲ್ಲಿ ಆಯೋಜನೆಯನ್ನು ಮಾಡಿದರು . ಅಭಿನಂದನಾ ಸಮಾರಂಭದ ವೇದಿಕೆಯಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ರಾಜ್ಯ ಸೋಶಿಯಲ್ ಡಿಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೂತನವಾಗಿ ಆಯ್ಕೆಯಾಗಿರುವಂತ ಬಿ ಆರ್ ಭಾಸ್ಕರ್ ಪ್ರಸಾದ್ ಅವರು ಹೆಸರು ಹೇಳದೆ , ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಪ್ರಭಾವಿ ನಾಯಕ ಹೇಳಿದ ಮಾತು ನಮ್ಮ ಮತ ಕ್ಷೇತ್ರದಲ್ಲಿ ಎಸ್ ಡಿ ಪಿ ಐ ಪಕ್ಷ ಬೆಳೆಯೋಕೆ ಬಿಡಬಾರದು ಅನ್ನುವಂತ ಮಾತಿಗೆ, ನಿಮಗೆ ಸೂರ್ಯ ನ ಬಿಸಿಲು ತಡೆಯೋಕೆ ಆಗುತ್ತಾ ? ನಿಮಗೆ ಗಾಳಿ ತಡೆಯೋಕೆ ಆಗುತ್ತಾ ? ನಿಮಗೆ ಸುನಾಮಿ ತಡೆಯೋಕೆ ಆಗುತ್ತಾ ? ಅದೇ ತರ ಎಸ್ ಡಿ ಪಿ ಐ ಪಕ್ಷವು ನೀವುಗಳು ತಡೆಯೋಕೆ ಬಂದ್ರೆ ಹೆಸರು ಇಲ್ದಂಗೆ ಕೊಚ್ಚಿಕೊಂಡು ಹೋಗ್ತೀರಾ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು . ಮಾತನಾಡಿದ ರಾಜ್ಯ ನೂತನವಾಗಿ ಎಸ್ ಡಿ ಪಿ ಐ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರ...