ಬೆಳಗಾವಿ ಬಸ್ ನಿರ್ವಾಹಕನ ಮೇಲೆ ಹಲ್ಲೆಯನ್ನು ಖಂಡಿಸಿ ಕರವೇ ಗಜಸೇನೆ ಬೃಹತ್ ಪ್ರತಿಭಟನೆ ರಬಕವಿ ಬನಹಟ್ಟಿ : 28.ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ಹಲ್ಲೆ ಮಾಡೋದಾದ್ರೆ ನೀವ್ಯಾರು(ಎಂಇಎಸ್) ಕರ್ನಾಟಕದಲ್ಲಿ ಇರಬಾರದು. ಇವತ್ತೆ ಗಂಟು-ಮೂಟೆ ಕಟ್ಟಿಕೊಂಡು ಮಹಾರಾಷ್ಟ್ರಕ್ಕೆ ಹೋಗಿ. ಎಂಇಎಸ್ ಮರಾಠಿ ಗುಂಡಾಗಳಿಗೆ ಇದು ನೇರವಾದ ಎಚ್ಚರಿಕೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಮಾಳು ದುರ್ಗನ್ನವರ ಯುವ ಘಟಕ ಅಧ್ಯಕ್ಷರು ಉತ್ತರ ಕರ್ನಾಟಕ ರವರು ಆಕ್ರೋಶ ವ್ಯಕ್ತಪಡಿಸಿದರು. ಮರಾಠಿ ಮತನಾಡಲು ಬರುವುದಿಲ್ಲ ಎಂದು ಹೇಳಿದ್ದಕ್ಕೆ ಬಸ್ ನಿರ್ವಾಹಕ ಮತ್ತು ಚಾಲಕರ ಮೇಲೆ ಮರಾಠಿ ಯುವಕರು ಹಲ್ಲೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಗಜ ಸೇನೆ ಇಂದು ಬನಹಟ್ಟಿಯಲ್ಲಿ ಮುಖ್ಯ ರಸ್ತೆ ಮೇಲೆ ರ ಬಂದ್ ಮಾಡಿ ಎಂ ಎಂ ಭದ್ರಣ್ಣವರ ಬಂಗಲೆ ಬೆಳಗ್ಗೆ 11 ಗಂಟೆಗೆ ಬೃಹತ್ ಪ್ರತಿಭಟನೆ ಮಾಡಿ ತಾಲೂಕಾ ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ಹಲ್ಲೆ ಮಾಡುವುದು, ಮಸಿ ಬಳಿಯುವುದು ನಾನು ಹಲವಾರು ವರ್ಷಗಳಿಂದ ನೋಡಿದ್ದೆನೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಅದನ್ನು ಬಿಟ್ಟು ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡಿದರೆ ಕರವೇ ಗಜಸೇನೆ ಸಹಿಸೊದಿಲ್ಲ ಎಂದರು. ಮರಾಠಿಗರು ಕರ್ನಾಟಕದ ಅತಿಥಿಗಳು ಎಂಬ ಅರಿವಿನಿಂದ ಬೆಳಗಾವಿಯಲ್ಲಿ ಇರಬೇಕು....