Skip to main content

Posts

Showing posts from October, 2023

ಕಳೆದ 75 ವರ್ಷಗಳಲ್ಲಿ ಇಸ್ರೇಲ್ ನಡೆಸುತ್ತಾ ಬಂದಿರುವುದು ಏನನ್ನು?

ಭಯೋತ್ಪಾದನೆ ಎಲ್ಲಿ ನಡೆದರೂ ಅದರ ಕಾರಣ ಏನೇ ಇದ್ದರೂ ಅದು ಅಮಾನವೀಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ  ಹೇಳಿದ್ದಾರೆ. ಇಸ್ರೇಲ್-ಫೆಲಸ್ತೀನ್ ಯುದ್ಧದ ಹಿನ್ನೆಲೆಯಲ್ಲಿ  ಪ್ರಧಾನಿ ಆಡಿದ ಮಾತಿದು. ಅಮೆರಿಕ, ಇಂಗ್ಲೆಂಡ್ ಸಹಿತ ಪಾಶ್ಚಾತ್ಯ ಶಕ್ತಿಗಳು ಹಮಾಸ್ ಅನ್ನು ಟೆರರಿಸ್ಟ್ ಎಂದು ಕರೆಯುತ್ತವೆ. ಆದರೆ ವಿಶ್ವಸಂಸ್ಥೆ, ಭಾರತ ಮತ್ತು ನೆರೆಯ ಅರಬರಾಗಲಿ ಚೀನ, ರಷ್ಯವಾಗಲಿ ಹಮಾಸನ್ನು ಇನ್ನೂ ಟೆರರಿಸ್ಟ್ ಸಂಘಟನೆ ಎಂದು ಘೋಷಿಸಿಲ್ಲ. ಯಾವುದೇ ಒಂದು ಸಂಘಟನೆ ಇನ್ನೊಂದು ದೇಶದ ಗಡಿ ದಾಟಿ  ನಾಗರಿಕರ ಹತ್ಯೆ ಮಾಡಿದರೆ ಅದನ್ನು ಟೆರರಿಸಂ ಎಂದು  ಹೇಳಲಾಗುತ್ತದೆ. ಹೀಗಾಗಿ ಹಮಾಸ್‌ನ ಕೃತ್ಯವನ್ನು ಸಮರ್ಥಿಸುವಂತಿಲ್ಲ. ಈಗ ಹಮಾಸ್ ಇಸ್ರೇಲಿನೊಳಗೆ ನುಗ್ಗಿ ಯುದ್ಧ ಆರಂಭಿಸಿದೆ. 1300ಕ್ಕೂ ಹೆಚ್ಚು ಮಂದಿ ಕೊಲ್ಲಲ್ಪಟ್ಟಿದ್ದಾರೆ. ಹಮಾಸ್‌ನ ಆ ಕೃತ್ಯದಂತೆ ಇಸ್ರೇಲ್ ನಡೆಸಿದ ಬಾಂಬಿಂಗನ್ನು ಕೂಡ ಸಮರ್ಥಿಸುವಂತಿಲ್ಲ. ಅದು ನಾಗರಿಕರ ಮೇಲೆ, ವಿಶ್ವಸಂಸ್ಥೆಯ ಆಶ್ರಯ ಕೇಂದ್ರಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ವಿಶ್ವಸಂಸ್ಥೆಯ ಫೆಲಸ್ತೀನ್ ನಿರಾಶ್ರಿತರ ವಿಭಾಗ ತಿಳಿಸಿದೆ. ಹಾಗಾಗಿ ಇದೂ ಟೆರರಿಸ್ಟ್ ಕೃತ್ಯವೇ ಆಗಿಬಿಡುತ್ತದೆ. ಹೀಗಾಗಿಯೇ ವಿಶ್ವಸಂಸ್ಥೆಗೆ ಈ ವರೆಗೆ ಹಮಾಸ್ ಅನ್ನು ಟೆರರಿಸ್ಟ್  ಪಟ್ಟಿಗೆ ಸೇರಿಸಲು ಸಾಧ್ಯವಾಗದೇ ಹೋಗಿದೆ. ಗಾಝವನ್ನು ನಿರ್ಜನ ಮಾಡುತ್ತೇವೆ ಎಂದು ನೆತನ್ಯಾಹು ಹೇಳಿದ್ದಾರೆ. ಗಾಝವನ್ನ...

ಉಚಿತ ವಿದ್ಯುತ್ತ ಆದೇಶ ಆದಷ್ಟು ಬೇಗನೆ ಹೊರಡಿಸಿ , ಅಧ್ಯಕ್ಷ ಶಿವಲಿಂಗ ಟಿರಕಿ ಅಗ್ರಹ .

*ಉಚಿತ ವಿದ್ಯುತ್ತ ಆದೇಶ ಆದಷ್ಟು ಬೇಗನೆ ಹೊರಡಿಸಿ , ಅಧ್ಯಕ್ಷ ಶಿವಲಿಂಗ ಟಿರಕಿ ಅಗ್ರಹ .*  ಬಾಗಲಕೋಟೆ /  *ರಬಕವಿ ಬನಹಟ್ಟಿ*  ರಾಜ್ಯ ಸರ್ಕಾರ ಈಗಾಗಲೇ ಘೋಷಣೆ ಮಾಡಿರುವ ಉಚಿತ ವಿದ್ಯುತ್ ಆದೇಶ ಹೊರಡಿಸಿ ಆದಷ್ಟು ಬೇಗನೆ ನೇಕಾರರಿಗೆ ತಲುಪಿಸುವಂತಹ ಯೋಜನೆಯಾಗಬೇಕು  ಅನೇಕ ದಿನಗಳಿಂದ ಹೋರಾಟ ಮಾಡುತ್ತಿರುವ ನೇಕಾರರು ಬಹುದಿನಗಳಿಂದ ಉಚಿತ ವಿದ್ಯುತ್ ಜಾರಿಗಾಗಿ ಕಾಯುತ್ತಿದ್ದು ,ಸರ್ಕಾರ ಇನ್ನೂ ಕೂಡ ಆದೇಶ ಹೊರಡಿಸದೆ ಇರುವುದು  ನೇಕಾರ ಸಮುದಾಯಕ್ಕೆ ನಿರಾಶೆಯಾಗಿದೆ  ಹಾಗೂ ಈಗಾಗಲೇ ಇರುವ ನಾಲ್ಕೈದು ತಿಂಗಳ ಬಾಕಿ ಬಿಲ್ಲನ್ನು ಪಾವತಿಸಲು ನೇಕಾರರಿಂದ ಆಗದ ಹಿನ್ನೆಲೆಯಲ್ಲಿ ಸರ್ಕಾರವೇ ಬರಿಸಿಕೊಳ್ಳಬೇಕು   ಮತ್ತು ದಿನಾಂಕ 24 -10 -2023 ರೊಳಗೆ ಆದೇಶ ಹೊರಡಿಸಿ ಉಚಿತ ವಿದ್ಯುತ್  ನೇಕಾರರಿಗೆ ತಲುಪದೇ ಹೋದಲ್ಲಿ ರಾಜ್ಯದ್ಯಂತ ನೇಕಾರರು ಸೇರಿ ಬೃಹತ್ ಪ್ರತಿಭಟನೆಗೆ ಮುಂದಾಗುತ್ತೇವೆ  ಎಂದು ರಾಜ್ಯ ನೇಕಾರರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ತಿರ್ಕಿ ಹೇಳಿದರು.  ಈ ಸಂದರ್ಭದಲ್ಲಿ ,  ರಬಕವಿ - ಬನಹಟ್ಟಿ ರಾಂಪುರ ತೇರದಾಳ ಹೊಸೂರ ,ಆಸಂಗಿ ಮಹಾಲಿಂಗಪುರ, ಮಾಲಾಪುರ ದಿಂದ ನೂರಾರು ನೇಕಾರರು  ಭಾಗವಹಿಸಿದ್ದರು . ಈ ಸಂದರ್ಭದಲ್ಲಿ ನೇಕಾರರ ಮುಖಂಡರಾದ , ರಾಜೇಂದ್ರ ಮಿರ್ಜಿ ಆನಂದ ಜಗದಾಳ ಸಂಗಪ್ಪ ಉದ್ಗಟ್ಟಿ ,ಲಕ್ಕಪ್ಪ ಪವಾರ್ ,ಎಸ್ಐ ಕಾಯಿಸಲಿಗಿ ,ರಾಮಣ್ಣ ...

ತೇರದಾಳದಲ್ಲಿ ಜನತಾ ದರ್ಶನ | ಜನರ‌ ಸಮಸ್ಯೆಗೆ ಸ್ಪಂದಿಸಿದ ಡಿಸಿ*ಜನತಾ ದರ್ಶನಕ್ಕೆ ಉತ್ತಮ‌ ಪ್ರತಿಕ್ರಿಯೆ*

ತೇರದಾಳದಲ್ಲಿ ಜನತಾ ದರ್ಶನ | ಜನರ‌ ಸಮಸ್ಯೆಗೆ ಸ್ಪಂದಿಸಿದ ಡಿಸಿ *ಜನತಾ ದರ್ಶನಕ್ಕೆ ಉತ್ತಮ‌ ಪ್ರತಿಕ್ರಿಯೆ* ---------------------------------------- ಬಾಗಲಕೋಟೆ/ರಬಕವಿ-ಬನಹಟ್ಟಿ:ಅ,೧೦- ಜನರ‌ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತೇರದಾಳದಲ್ಲಿ ಮಂಗಳವಾರ ನಡೆದ ಜನತಾ ದರ್ಶನ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.              ತೇರದಾಳ ಪುರಸಭೆ ಆವರಣದಲ್ಲಿ ನಡೆದ ಜನತಾ ದರ್ಶನದಲ್ಲಿ ಸಮಸ್ಯೆಗಳನ್ನು ಹೊತ್ತು ತಂದ ನೂರಾರು ಜನ ಸರತಿ ಸಾಲಿನಲ್ಲಿ ನಿಂತು ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದೆ ತೋಡಿಕೊಂಡರು. ಎಲ್ಲರ ಸಮಸ್ಯೆ ಆಲಿಸುವ ನಿಟ್ಟಿನಲ್ಲಿ ಎನ್.ಸಿ.ಸಿ ವಿದ್ಯಾರ್ಥಿಗಳು ಒಬ್ಬೊಬ್ಬರಂತೆ ಜಿಲ್ಲಾಧಿಕಾರಿಗಳ ಬಳಿ ಕಳುಹಿಸುವ ಕಾರ್ಯ ಮಾಡುತ್ತಿದ್ದರು.            ಜನರು ಹೊತ್ತು ತಂದ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳನ್ನು ಕರೆದು ಬಗೆಹರಿಸುವ ಕಾರ್ಯ ನಡೆಯಿತು. ಕೆಲವೊಂದು ಸಮಸ್ಯೆಗಳಿಗೆ ಕಾಲಮಿತಿಯೊಳಗೆ ಇತ್ಯರ್ತಕ್ಕೆ ಅಧಿಕಾರಿಗಳಿಗೆ ಸೂಚಿಸಲಾಯಿತು.               ಪ್ರಾರಂಭದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಕಾರ್ಯಕ್ರಮ‌ ಉದ್ಘಾಟಿಸಿ ಮಾತನಾಡಿದ ಅವರು ಗಡಿಭಾಗ ನಗರವಾಗಿರುವ ತೇರದಾಳ ಕ್ಷೇತ್ರದ ಜನತೆ ತಾಲ...