ಬಾಗಲಕೋಟೆ / ರಬಕವಿ ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ಅವಳಿ ನಗರಗಳು ಎಂದು ಖ್ಯಾತಿ ಪಡೆದ ರಬಕವಿ ಬನಹಟ್ಟಿ ನಗರಗಳಲ್ಲಿ ನೂತನವಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣಗಳನ್ನು ಸಾರಿಗೆ ಸಚಿವ ಶ್ರೀ ರಾಮಲಿಂಗಾರೆಡ್ಡಿ ಅವರು ರಿಬ್ಬನ್ ಕಟ್ ಮಾಡುವುದರ ಮೂಲಕ ಲೋಕಾರ್ಪಣೆ ಮಾಡಿದರು.
ಈ ಅವಳಿ ನಗರಗಳ ಬಸ್ ನಿಲ್ದಾಣಗಳು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಾಗಲಕೋಟೆ ಭಾಗದ ರಬಕವಿ ಹಾಗೂ ಬನಹಟ್ಟಿ ಬಸ್ ನಿಲ್ದಾಣಗಳನ್ನು ತಲಾ 1 ಕೋಟಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ತೆರೆದಾಳ್ ಮತ ಕ್ಷೇತ್ರದ ಶಾಸಕ ಸಿದ್ದು ಸವದಿ , ಈ ಅವಳಿ ನಗರಗಳನ ನೂತನವಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣಗಳಿಗೆ ಕಂಪೌಂಡು ಗೋಡೆ , ಶುದ್ಧ ಕುಡಿಯುವ ನೀರು, ಸುಸಜ್ಜಿತ ಶೌಚಾಲಯ ಗಳನ್ನು ನಿರ್ಮಾಣ ಮಾಡಲಿಕ್ಕೆ ತಲಾ ನಿಲ್ದಾಣಕ್ಕೆ 75 ಲಕ್ಷ ದಂತೆ ಎರಡು ನಿಲ್ದಾಣಗಳಿಗೆ ಒಂದೂವರೆ ಒಟ್ಟು 1 ಕೋಟಿ 50 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಬೇಕು ಹಾಗೂ ನಮ್ಮ ಕ್ಷೇತ್ರದಿಂದ ಎರಡು ಪಲ್ಲಕ್ಕಿ ಬಸ್ ಗಳು ಎರಡು ಎಸಿ ಬಸ್ ಗಳು ನೀಡಬೇಕು ಎಂದು ಸಾರಿಗೆ ಸಚಿವರಲ್ಲಿ ಮನವಿ ಮಾಡಿದರು.
ಒಳಿಕ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮಲಿಂಗ ರೆಡ್ಡಿ ಅವರು ಈ ಭಾಗದಿಂದ ಪಲ್ಲಕ್ಕಿ ಬಸ್ಸುಗಳಲ್ಲಾಗಲಿ ಎಸಿ ಬಸ್ಗಳಾಗಲಿ ವಾಯುವ್ಯ ರಸ್ತೆ ಸಾರಿಗೆ ಅಥವಾ ಕೆಎಸ್ಆರ್ಟಿಸಿ ಸಂಸ್ಥೆಯ ಮೂಲಕ ಈ ಬಸ್ ಗಳನ್ನು ಕ್ಷೇತ್ರದ ಸಾರ್ವಜನಿಕರಿಗೆ ಸೌಕರ್ಯ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಬಕಾರಿ ಸಚಿವ ಆರ್ ಬಿ ತಿಮ್ಮಪೂರ್, ಕೆಎಸ್ಆರ್ಟಿಸಿ ನಿಗಮ ಮಂಡಳಿ ಅಧ್ಯಕ್ಷ ಪರಂ ಗೌಡ್ ಕಾಗೆ , ಉಪಾಧ್ಯಕ್ಷ ಗದಗದ ಪೀರ್ ಸಾಬ್ , ನಗರಸಭೆ ಅಧ್ಯಕ್ಷ ವಿದ್ಯಾ ದವಾಡಿ, ನಾಡಗೋಡ್ ಪಾಟೀಲ್ , ಸಿದ್ದು ಕೊಣ್ಣುರ್, ಚಿದಾನಂದ್ ತೆಗ್ಗಿ, ಮಾಮುನ್ ರಶೀದ್ ಪಾರತನ ಹಳ್ಳಿ, ಅಬೂಬಕ್ಕರ್ ಜಮಖಂಡಿ , ಮಹಾಲಿಂಗಪುರ ಸಭೆ ಅಧ್ಯಕ್ಷ ಎಲ್ಲನಗೌಡ ಪಾಟೀಲ್ , ತೇರದಾಳ್ ಪುರಸಭೆ ಅಧ್ಯಕ್ಷರು,ಇನ್ನೂ ಅನೇಕ ನಗರಸಭೆ ಸದಸ್ಯರುಗಳು ,ಮುಖಂಡರುಗಳು ಉಪಸ್ಥಿತರಿದ್ದರು.
ವರದಿ ಮಹಿಬೂಬ್ ಎಂ ಬಾರಿಗಡ್ಡಿ
ರಬಕವಿ ಬನಹಟ್ಟಿ ತಾಲೂಕ ವರದಿಗಾರರು
No comments:
Post a Comment