Friday, January 2, 2026

ಬದುಕುಗಾಗಿ ಸಂಕಲ್ಪ ತಾಳುವುದೇ ವರ್ಷಾಚರಣೆಯ ಮೂಲ ಆಶಯ : ಶೀತಲ ನಂದೆಪ್ಪನವರ ಅಭಿಮತ :

ಬದುಕುಗಾಗಿ ಸಂಕಲ್ಪ ತಾಳುವುದೇ ವರ್ಷಾಚರಣೆಯ ಮೂಲ ಆಶಯ : ಶೀತಲ ನಂದೆಪ್ಪನವರ ಅಭಿಮತ

ತೇರದಾಳ : ದೇವರು ಸೃಷ್ಠಿಸಿದ ಬದುಕು ಹರಿಯುವ ನೀರಿನಂತಿದ್ದು, ಪ್ರತಿ ಕ್ಷಣ ನಮ್ಮ ಬದುಕಿನಲ್ಲಿ ಯಶಸ್ಸು ಸಂಕಲನವಾದರೆ ವಯಸ್ಸು ವ್ಯವಕಲನವಾಗಿ,ಗೆದ್ದವರಿಗೆ ಖುಷಿ ಸೋತವರಿಗೆ ದು:ಖ ಹೀಗೆ ನೋವು ನಲಿವುಗಳ ಸಮ್ಮಿಲನವೇ ಬದುಕಾಗಿದ್ದು,ಕೆಟ್ಟದನ್ನು ದೂರವಿಟ್ಟು ಒಳ್ಳೆಯದನ್ನು ಸನಿಹಕ್ಕೆ ಬರಮಾಡಿಕೊಂಡು ಸುಂದರ ಬದುಕಿಗಾಗಿ ಸಂಕಲ್ಪ ತಾಳುವುದೇ ಹೊಸ ವರ್ಷಾಚರಣೆಯ ಮೂಲ ಆಶಯವಾಗಿದೆಯಂದು ಶಿಕ್ಷಕ ಶೀತಲ ನಂದೆಪ್ಪನವರ ಅಭಿಮತವನ್ನು ವ್ಯಕ್ತಪಡಿಸಿದರು. ಸಮೀಪದ ಹಳಿಂಗಳಿ ಗ್ರಾಮದ ವಿದ್ಯಾಕಾಶಿ ಶ್ರೀ ಸದ್ಗುರು ಶರಣಬಸವೇಶ್ವರ ಸಿಬಿಎಸ್‌ಇ ಶಾಲೆಯಲ್ಲಿ ಆಯೋಜಿಸಿದ ಹೊಸವರ್ಷಾಚರಣೆಯ ಸಂಭ್ರಮವನ್ನು ಸಸಿಗೆ ನಿರೂಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಗತಿಸಿ ಹೋದ ವರುಷದ ಕಹಿ ನೆನಪುಗಳನ್ನು ಕಟ್ಟೆಯ ಮೇಲೆ ಬಿಟ್ಟು ಸಿಹಿ ನೆನಪುಗಳನ್ನು ರಟ್ಟೆಯಲ್ಲಿ ತೆಗೆದುಕೊಂಡು ಹೊಸ ವರುಷದಲ್ಲಿ ಉತ್ತಮ ಕಾಯಕವನ್ನು ನಿರ್ವಹಿಸಿ ಏಕಾಗ್ರತೆಯಿಂದ ಅಧ್ಯಯನವನ್ನು ಕೈಗೊಂಡು ಕಲಿಸಿದ ಶಾಲೆ,ಗುರುಗಳು ಹಾಗೂ ಹೆತ್ತವರಿಗೆ ಉತ್ತಮ ಕೀರ್ತಿ ತರುವುದರೊಂದಿಗೆ ಸ್ವಾವಲಂಬಿ ಬದುಕಿಗೆ ಉತ್ತಮ ವೇದಿಕೆಯನ್ನು ನಿರ್ಮಿಸಿಕೊಂಡು ಪ್ರತಿಯೊಬ್ಬರು ಆದರ್ಶ ವಿದ್ಯಾರ್ಥಿಗಳಾಗಬೇಕೆಂದು ತಿಳಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಶ್ರೀಮತಿ ಅಂಜನಾ.ಯು ಅಬಕಾರ ಮಾತನಾಡಿ ನಿತ್ಯ ಸುರ್ಯೋದಯ ನಮ್ಮ ಬದುಕಿನ ಸುಂದರ ಕ್ಷಣವಾಗಿದ್ದು, ವಿದ್ಯಾರ್ಥಿಗಳು ಪ್ರಯತ್ನಶೀಲರಾಗಿ,ಏಕಾಗ್ರತೆಯಿಂದ ಓದಿನೆಡೆಗೆ ಹೆಚ್ಚಿನ ಗಮನ ಹರಿಸಿ,ಜಾಗತಿಕ ಜಗತ್ತಿನ ನಾಗಾಲೋಟದ ವೇಗಕ್ಕೆ ಪೂರಕವಾಗಿ ಓಡುವ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯ ವಾಯ್.ಎಚ್ ಅಲಾಸ ವಹಿಸಿದ್ದರು, ಅತಿಥಿಗಳಾಗಿ ಉಪಪ್ರಾಚಾರ್ಯೆ ಎಸ್.ಟಿ ಘಂಟಿ,ಹಿರಿಯ ಶಿಕ್ಷಕ ಎಸ್.ಟಿ ಕುಂಬಾರ,ಸುನಿತಾ ಪಾಟೀಲ,ವಿಲಯಲಕ್ಷಿö್ಮಪೂಜಾರಿ ಇದ್ದರು. ಶಿಕ್ಷಕರಾದ ಶ್ರೀಮತಿ ಗಿರಿಜಾ ಲಾಳಿ,ಸೋನಾಲಿ ಮಠಪತಿ ಹಾಗೂ ಶ್ರೀಶೈಲ ಬಸವನ್ನವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 ಸಂಪಾದಕರು   : 
ಮಹಿಬೂಬ್ ಎಂ ಬಾರಿಗಡ್ಡಿ 

 

No comments:

Post a Comment