*ವಿಜ್ರಂಭಣೆಯಿಂದ ಜರುಗಿದ ಪ್ರತಿಭಾ ಕಾರಂಜಿಹಾಗೂ ಕಲೋತ್ಸವ*
ರಬಕವಿ-ಬನಹಟ್ಟಿ :
ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂಬರ್ 2 ಆವರಣದಲ್ಲಿ ಪ್ರತಿಭಾ ಕಾರಂಜಿ ಬಹಳ ಅದ್ದೂರಿಯಾಗಿ ನಡೆಯಿತು .
ಈ ಪ್ರತಿಭಾಕಾರಂಜಿಯ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಬಾಗಲಕೋಟೆ , ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಜಮಖಂಡಿ ,ಹಾಗೂ ಉರ್ದು ಸಮೂಹ ಸಂಪನ್ಮೂಲ ಕೇಂದ್ರ ರಬಕವಿ , ಇವರ ಜಂಟಿ ಸಹಯೋಗದೊಂದಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 2 ಅವರಣದಲ್ಲಿ ವಲಯ ಮಟ್ಟದ ಪ್ರತಿಭಾಕಾರಂಜಿ ಹಾಗೂ ಕಲೋಸ್ತವ ಕಾರ್ಯಕ್ರಮವು ಬಹಳ ಅದ್ದೂರಿಯಾಗಿ ಜರುಗಿತು .
ಪ್ರತಿಭಾಕಾರಂಜಿಯ ಕಾರ್ಯಕ್ರಮವನ್ನು ಎಲ್ಲರೂ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆಯಾಯಿತು .
ಈ ಪ್ರತಿಭಾಕಾರಂಜಿಯ ಕಾರ್ಯಕ್ರಮದಲ್ಲಿ ತೇರದಾಳ ,ಹನಗಂಡಿ ,ರಬಕವಿ ಬನಹಟ್ಟಿ ,ಹಿಪ್ಪರಗಿ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು .
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು , ಹಾಸ್ಯ ಚುಟುಕು ,ಕ್ವಿಸ್ ಕಾಂಪಿಟೇಶನ್ , ಕವಾಲಿ ,ರಂಗೋಲಿ ಸ್ಪರ್ಧೆ ಕಲಾಕೃತಿ ಮಣ್ಣಿನಿಂದ ಮಾಡಿದ ವಸ್ತುಗಳು , ಇವೆಲ್ಲವೂ ಪ್ರತಿಭಾ ಕಾರಂಜಿಯ ವೇದಿಕೆಯ ಮೂಲಕ ,ತಮ್ಮ ಪ್ರತಿಭೆಯನ್ನು ತೋರಿಸಿದರು .
ಈ ಪ್ರತಿಭಾಕಾರಂಜಿಯ ವಲಯ ಮಟ್ಟ ಅಷ್ಟೇ ಆಗಿತ್ತು, ಆದರೆ ಇದು ಜಿಲ್ಲಾಮಟ್ಟದ ಅನ್ನುವಂಥ ರೀತಿಯಲ್ಲಿ ಈ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು .
ಈ ಸಂದರ್ಭದಲ್ಲಿ ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿ , ಶಾಲಾ ಎಸ್ಡಿಎಂಸಿ ಅಧ್ಯಕ್ಷ ಯುಸೂಪ ಮಹಾಲಿಂಗಪೂರ ,ಶಾಲಾ ಮುಖ್ಯಗುರುಗಳು ಇಂಡಿಕರ್ ಸರ್ ,ರಬಕವಿ ಬನಹಟ್ಟಿ ನಗರಸಭೆಯ ಅಧ್ಯಕ್ಷ ಸಂಜು ತೆಗ್ಗಿ , ಕೆ ಎ ಎಸ್ ಆಫೀಸರ್ ಎಂ ಎಸ್ ಮುಲ್ಲಾ ಸರ್ , ಕೃಷ್ಣ ಮೇಲ್ದಂಡೆ ಯೋಜನೆ ಯೋಜನೆಯ ಭೂಸ್ವಾಧೀನ ಅಧಿಕಾರಿ ಅಬಿದ್ ಗದ್ಯಾಳ , ಮುರಾದ್ ಮೋಮಿನ್ , ದರಪ್ಪ ಉಳಾಗಡ್ಡಿ ,ಬನಹಟ್ಟಿ ನಗರದ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಬುಡನ್ ಸಾಬ್ ಜಮಾದಾರ್ ಮಾಜಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಹಾರುನರಸಿದ ಸಾಂಗ್ಲಿಕರ , ಶೌಕತ್ ಅತ್ತಾರ್ , ಡಾಕ್ಟರ್ ಅಕ್ಬರ್ ತಾಂಬೋಳಿ ,ಬಂದೇನವಾಜ್ ಡಾಂಗೆ ,ಫಯಾಜ್ ಅಹ್ಮದ್ ಕೊಯಿಮುತ್ತೂರು ,ಕ್ಷೇತ್ರಶಿಕ್ಷಣಾಧಿಕಾರಿ ಸಿ ಎಂ ನ್ಯಾಮಗೌಡ , ಸಮನ್ವಯಾಧಿಕಾರಿ ವಿಜಯ್ ಕುಮಾರ್ ವಂದಾಲ , ನರ ಬನಹಟ್ಟಿ ನಗರ ಘಟಕದ ಕಾಂಗ್ರೆಸ್ ಮುಖಂಡ ರಾಜೇಂದ್ರ ಭದ್ರನ್ನವರ್ ರಾಹುಲ್ ಕಲಾಲ್ ,ಬಸವರಾಜ್ ಹನಗಂಡಿ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಮಲಿಕ್ ಜಾಕೀರ್ ಬಾರಿಗಡ್ಡಿ ,ಇಸಿಓ ಎಸ್ ಬಿ ಬುರ್ಲಿ ಹಾಗೂ ಬಿ ಎಂ ಹಳೆಮನಿ ,ಉರ್ದು ಸಿಆರ್ಪಿ
A I ಬಾಗೇವಾಡಿ ಹಾಗೂ ಇನ್ನುಳಿದವರು ಉಪಸ್ಥಿತರಿದ್ದರು
No comments:
Post a Comment