*ರಬಕವಿ ಬನಹಟ್ಟಿ* :
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಎಸ್ ಆರ್ ಎ ಹೈಸ್ಕೂಲ್ ಮೈದಾನದಲ್ಲಿ ಮುಸ್ಲಿಂ ಸಮಾಜದ ಶೈಕ್ಷಣಿಕ ಆರ್ಥಿಕ ಹಾಗೂ ಸಾಮಾಜಿಕ ಏಕತೆ , ಮುಸ್ಲಿಮರ ಪ್ರಸ್ತುತ ಸನ್ನಿವೇಶದ ಕುರಿತು ನಮ್ಮ ಜವಾಬ್ದಾರಿ ಅರಿತುಕೊಳ್ಳುವುದಕ್ಕಾಗಿ 11.03 -2023 ಶನಿವಾರರಂದು ಬೃಹತ್ ಮುಸ್ಲಿಂ ಸಮುದಾಯದ ಸ್ವಾಭಿಮಾನಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು .
ಸ್ವಾಭಿಮಾನಿ ಬೃಹತ್ ಸಮಾವೇಶದಲ್ಲಿ ರಾಷ್ಟ್ರಗೀತೆಯನ್ನು ಹಾಡುವುದರ ಹಾಗೂ ಗೌರವಿಸುವುದರ ಜೊತೆಗೆ ವಿಜಯಪುರದ ಮೌಲಾನ ತನ್ವೀರ್ ಹಾಸಿಮ್ ಪೀರ್ , ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಚಾಲನೆಯನ್ನು ನೀಡಿದರು
ಈ ಸಂದರ್ಭದಲ್ಲಿ ಮಾತನಾಡಿದ ವಿಜಯಪುರದ ಮೌಲಾನಾ ತನ್ವೀರ್ ಹಶಿಮ್ ಪೀರ್ , ಮುಸಲ್ಮಾನರು ದೇಶಕ್ಕೆ ತನ್ನ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ದರಿದ್ದೇವೆ ಆದರೆ ದೇಶಕ್ಕೆ ಎಂದಿಗೂ ದ್ರೋಹ ಬಗೆಯುವುದಿಲ್ಲ , ಜೊತೆಗೆ ನಮ್ಮ ಇಸ್ಲಾಂ ಧರ್ಮ ನಮಗೆ ಹೇಳಿದ ಪಾಠ
ನೀವು ಜನ್ಮ ತಾಳಿದ ಯಾವುದೇ ದೇಶ ಇದ್ದರೂ ಆ ದೇಶದ ಗೌರವವಿಸುವುದರ ,ಜೊತೆಗೆ ಜನ್ಮ ತಾಳಿದ ಭೂಮಿಯನ್ನು ಪ್ರೀತಿಸಬೇಕು ಹಾಗೂ ದೇಶಕ್ಕೋಸ್ಕರ ಪ್ರಾಣ ತ್ಯಾಗಕ್ಕೂ ಸಿದ್ಧ ಇರಬೇಕು . ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರೆದಂತ ಸಂವಿಧಾನವನ್ನು ಕೆಲವೇ ಕೆಲವು ದುಷ್ಟ ಶಕ್ತಿಗಳು ಅದನ್ನೇ ತೆಗೆದುಹಾಕಲು ಪ್ರಯತ್ನ ಮಾಡುತ್ತಿವೆ , ಆದರೆ ದೇಶದ ಸಂವಿಧಾನವನ್ನು ನಮ್ಮ ಪ್ರಾಣ ಪನಕ್ಕಿಟ್ಟು ರಕ್ಷಣೆ ಮಾಡ್ತೀವಿ , ವಿಧಾನಸಭೆ ಚುನಾವಣೆ 2023 ಚುನಾವಣೆ ಗಂಭೀರವಾಗಿ ಪರಿಗಣಿಸಿ , ಮತದಾನ ಗುರುತಿನ ಚೀಟಿ ಇಲ್ಲ ಅಂಥವರು ಗುರುತಿನ ಚೀಟಿ ಕಡ್ಡಾಯವಾಗಿ ಮಾಡಿಸಿ , ನೂರಕ್ಕೆ ನೂರು ರಷ್ಟು ಮತದಾನವನ್ನು ಕಡ್ಡಾಯವಾಗಿ ಮಾಡಬೇಕು ಎಂದು ಕಿವಿಮಾತು ಹೇಳಿದರು .
ಈ ದೇಶದಲ್ಲಿ ಕೇವಲ ಮುಸ್ಲಿಮರ ಮೇಲೆ ಹಲ್ಲೆ ನಡೆಯುತ್ತಾ ಇವೆ .ಇದು ವಿಷಾದನೀಕರ ,ಈ ದೇಶದಲ್ಲಿ ಕೆಲವೇ ಕೆಲವು ದುಷ್ಟ ಶಕ್ತಿಗಳು ಹಿಂದೂ ಮುಸ್ಲಿಮರನ್ನು ಬೇರ್ಪಡಿಸುವುದು ಚಾಳಿಯನ್ನು ಮುಂದುವರಿಸುತ್ತಾ ಇವೆ , ಜಾತ್ಯಾತೀತ ಮನೋಭಾವ ಇರುವಂತಹ ಹಿಂದೂ ಬಾಂಧವರನ್ನು ಒಟ್ಟಿಗೆ ಕರೆದುಕೊಂಡು ನಾವು ದೇಶದ ಸಂವಿಧಾನವನ್ನು ಕಾಪಾಡಬೇಕಿದೆ . ಆದ್ದರಿಂದ ಒಂದು ಕಾಲದಲ್ಲಿ ಹಿಂದು ಮುಸಲ್ಮಾನರು ಪ್ರೀತಿ ವಿಶ್ವಾಸದಿಂದ ಹೇಗೆ ಇರುತ್ತಿದ್ದರೋ ,ಹಾಗೆ ಬರುವ ರಂಜಾನ್ ಹಬ್ಬದ ದಿನ ಹಿಂದೂ ಬಾಂಧವರನ್ನು ಮನೆಗೆ ಕರೆಸಿ ಸಿಹಿಯನ್ನು ನೀಡುವುದರ ಮೂಲಕ ಈ ದೇಶದಲ್ಲಿ ಶಾಂತಿ ಹಾಗೂ ಸೌಹಾರ್ದತೆ ನೆಲೆಸಲಿಕ್ಕೆ ಈ ಮಹತ್ವವಾದಂತ ಕಾರ್ಯ ರಬಕವಿ ಬನಹಟ್ಟಿ ನಗರದಿಂದಲೇ ಪ್ರಾರಂಭವಾಗಬೇಕು ಎಂದು ವತ್ತಿ ಹೇಳಿದರು .
ಇದೇ ಸಂದರ್ಭದಲ್ಲಿ ಮಾತನಾಡಿದ ,ಹುಬ್ಬಳ್ಳಿಯ ಮೌಲಾನಾ ಸಿರಾಜ ಸಾಹೇಬ್ ಕಾಶ್ಮೀ ,ಧರ್ಮ ಹಾಗೂ ರಾಜಕೀಯ ಎಂದಿಗೂ ಬೇರ್ಪಡಿಸಬಾರದು . ಏಕೆಂದರೆ ಪ್ರತಿಯೊಂದು ಧರ್ಮದ ಬಡವ ದೀನ ದಲಿತರ ಜನಸಾಮಾನ್ಯರಿಗಾಗಿ , ದೇಶ ಸೇವೆಯೇ ಈಶ ಸೇವೆ ಎಂದು ತಿಳಿದು ಸೇವೆ ಮಾಡಿದರೆ , ಧರ್ಮವನ್ನು ಯಾವತ್ತೂ ರಾಜಕೀಯವನ್ನು ವಿರೋಧಿಸುವುದಿಲ್ಲ , ಆದರೆ ಸ್ವಾರ್ಥಕ್ಕಾಗಿ ಯಾವುದೇ ರಾಜಕೀಯ ಧರ್ಮವನ್ನು ಬಳಸಿಕೊಂಡರೆ ಮಾತ್ರ ಧರ್ಮವು , ಕೆಟ್ಟ ರಾಜಕೀಯ ವನ್ನು ಮಾತ್ರ ವಿರೋಧಿಸುತ್ತದೆ .ರಾಜಕೀಯ ಒಂದು ಕೆಸರು ಇದ್ದಹಾಗೆ , ಅದ್ರಲ್ಲಿ ಜಾರಿ ಬಿದ್ದ ವ್ಯಕ್ತಿಯನ್ನು ಉಳಿಸಬೇಕಾದರೆ , ನಾವು ಕೂಡ ಕೆಸರಿನಲ್ಲಿ ಹೋಗಬೇಕಾಗುತ್ತದೆ . ಇಲ್ಲದಿದ್ದರೆ ಕೆಸರಿನಲ್ಲಿ ಜಾರಿ ಬಿದ್ದ ವ್ಯಕ್ತಿ ಮೇಲಕ್ಕೆ ತರಲು ಸಾಧ್ಯವಿಲ್ಲವೋ ,ಹಾಗೇನೆ ರಾಜಕೀಯದಲ್ಲಿ ಸ್ವಾರ್ಥ ರಾಜಕಾರಣ ಯಾರು ಮಾಡುತ್ತಾರೋ ,ಕೆಟ್ಟ ರಾಜಕೀಯದಿಂದ ಅವರನ್ನು ತೆಗೆಯಲಿಕ್ಕೆ ನಾವು ಕೂಡ ರಾಜಕೀಯದಲ್ಲಿ ಧುಮುಕಬೇಕು ಎಂದು ಹೇಳಿದರು .
ತೇರದಾಳ ಮತ ಕ್ಷೇತ್ರದ ಇತಿಹಾಸದಲ್ಲಿ ಪ್ರಪ್ರಥಮವಾಗಿ ಮುಸ್ಲಿಂ ಸಮುದಾಯದ ಸ್ವಾಭಿಮಾನಿ ಸಮಾವೇಶ ನಡೆದಿದ್ದು , ಮಹಾಲಿಂಗಪುರ್ , ತೇರದಾಳ್ , ರಬಕವಿ, ರಾಂಪುರ್ ,ಹೊಸೂರು , ಬನಹಟ್ಟಿ , ಇನ್ನು ಅನೇಕ ಹಳ್ಳಿಗಳಿಂದ ಈ ಸಮಾವೇಶದಲ್ಲಿ 10 ರಿಂದ 15 ಸಾವಿರ ಜನ ಸೇರುವುದರ ಮೂಲಕ ಈ ಸಮಾವೇಶವನ್ನು ಯಶಸ್ವಿಗೊಳಿಸಿದರು .
ಈ ಸಮಾವೇಶದ ವೇದಿಕೆಯಲ್ಲಿ ಮುಫ್ತಿ ಜುಬೇರ್ ಸಾಬ್ ಮಿರಜ್ ಹಾಗೂ ಜಮಿಯತ್ ಉಲ್ಮಾ ಹಿಂದ್ ಸಂಘಟನೆಯ ಎಲ್ಲಾ ಉಲೆಮಾ ಸದಸ್ಯರು , ಹಾಗೂ ತೇರದಾಳ ಮತಕ್ಷೇತ್ರಾದ್ಯಂತ ಸ್ಥಳೀಯ ಪ್ರಭಾವಿ ಮುಖಂಡರುಗಳು ಉಪಸ್ಥಿತರಿದ್ದರು .
ವರದಿ :
ಮಹಬೂಬ್ ಎಂ ಬಾರಿಗಡ್ಡಿ
No comments:
Post a Comment