Tuesday, December 17, 2024

ಬೆಳಗಾವಿಯ ಅಧಿವೇಶನದಲ್ಲಿ ಮುಸ್ಲಿಮರಿಗಾದ ಅನ್ಯಾಯವನ್ನು ಖಂಡಿಸಿದ , ಕೆ ಎಂ ಯು ರಾಜ್ಯ ಯುವ ಘಟಕದ ಅಧ್ಯಕ್ಷ N M ನೂರ್ ಅಹ್ಮದ್,



ಬೆಂಗಳೂರು : ರಾಜ್ಯದಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ 2ಬಿ ಅಡಿಯ ಶೇ.4  ಮೀಸಲಾತಿಯನ್ನು ಯಥಾಸ್ಥಿತಿ ನೀಡುವುದಾಗಿ ಭರವಸೆ ನೀಡಿದ್ದ ಕಾಂಗ್ರೇಸ್ ಪಕ್ಷ ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಮಾತನಾಡದೆ ಅನ್ಯಾಯ ಮಾಡಿದೆ.  ಅಷ್ಟೇ ಅಲ್ಲದೆ ರಾಜ್ಯದ ಮುಸ್ಲಿಮರ ವಿಷಯಗಳ ಪ್ರಸ್ತಾಪಕ್ಕೂ ಭಯ ಪಡುತ್ತಿದೆ.  ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಮುಸ್ಲಿಮ್ ಕೋಟಾದಡಿ ಮಂತ್ರಿಗಳಾಗಿರುವ ಜಮೀರ್ ಅಹ್ಮದ ಖಾನ್, ರಹೀಂ ಖಾನ್ ಸೇರಿ ಸರ್ಕಾರದ ಅತ್ಯುನ್ನತ ಸ್ಥಾನಗಳಲ್ಲಿರುವ ನಸೀರಅಹ್ಮದ್ , ಸಲೀಂ ಅಹ್ಮದ್, ಕೆ. ಅಬ್ದುಲ್‌ಜಬ್ಬಾರ್ ರಂಥವರೂ ಕೂಡ 2 ಬಿ ಮಿಸಲಾತಿಯ ವಿಷಯ ಸದನದಲ್ಲಿ ಪ್ರಸ್ತಾಪಿಸಲು ಭಯಪಡುತ್ತಿದ್ದಾರೆ, ಒಟ್ಟಾರೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬಿಜೆಪಿಯ ಭಯದಲ್ಲಿದೆ. ಮುಸ್ಲಿಮ್ ಮೀಸಲಾತಿ ಮರು ಜಾರಿಗೊಳಿಸಲು ರಾಜ್ಯ ಸರಕಾರವು ಬಿಜೆಪಿಯ ಆದೇಶಕ್ಕಾಗಿ ಕಾಯುತ್ತಿದೆಯೇ..? ಎಂಬ ವಾತಾವರಣ ರಾಜ್ಯದಲ್ಲಿ ಸೃಷ್ಟಿಯಾಗಿದೆ.


               ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಮುಸ್ಲಿಮ್ ಸಮುದಾಯ ಶೇ.99 ಪ್ರತಿಶತ ಮತಹಾಕಿದ್ದಾರೆ. ಈ ಸಮಾಜದ ವಿಷಯಗಳು ಬಂದಾಗ ಕಾಂಗ್ರೇಸ್ ಪಕ್ಷ ನಮ್ಮದಲ್ಲದ ವಿಷಯ ಎಂಬಂತೆ ಕಡೆಗಣಿಸುತ್ತಿದೆ. ಸಾಮಾಜಿಕ ನ್ಯಾಯ ವಿರೋಧಿ ಯಾಗಿರುವ ಇಂಥಹ ದೊರಣೆಗಳಿಂದ ಮುಸ್ಲಿಮರು ಬೇಸತ್ತಿದ್ದಾರೆ.  ಅಲ್ಲದೆ, ಕಾಂಗ್ರೆಸ್ ಪಕ್ಷ ಹಾಗು ಸರ್ಕಾರದ ಮೇಲೆ ಆಕ್ರೋಶ ಗೊಂಡಿದ್ದಾರೆ.

ಅಲ್ಲದೆ, ಕಾಂಗ್ರೇಸ ಪಕ್ಷಕ್ಕೆ ಮುಸ್ಲಿಮರಿಗೆ ನ್ಯಾಯಸಮ್ಮತ ಪ್ರಾತಿನಿಧ್ಯ ನೀಡಲು ಮನಸ್ಸಿಲ್ಲ.  ಬಿಜೆಪಿ ಪಕ್ಷದ ಆದಾರರಹಿತ ಆರೋಪಗಳಿಗೆ ಕಾಂಗ್ರೇಸ್ ನಿಂದ ಸಮಂಜಸ ಉತ್ತರ ನೀಡುವ ಧೈರ್ಯವನ್ನು ಸಹ ಮಾಡುತ್ತಿಲ್ಲ.  ಕಾಂಗ್ರೇಸ ಪಕ್ಷ ಈಗ ಅಲ್ಪಸಂಖ್ಯಾತ ಮುಸ್ಲಿಮರ ಜ್ವಲಂತ ಸಮಸ್ಯಗೆ ಸರಿಯಾದ ಸ್ಪಂದನೆ ನೀಡುತ್ತಿಲ್ಲದಿರುವುದು ಈ ಅಧಿವೇಶನದಲ್ಲಿ ಸಾಬೀತಾಗಿದೆ.  ಸಾಮಾಜಿಕ ನ್ಯಾಯ ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೇಸ್ ಸಮುದಾಯದ ಜೊತೆ ನಂಬಿಕೆ ದ್ರೋಹ ಮಾಡಿದೆ.
ಮುಸ್ಲಿಂ ವಿರುದ್ಧದ ಆರೋಪ, ಆಪಾದನೆಗಳಿಗೆ ಮುಸ್ಲಿಂ ಸಮಾಜವೇ ಉತ್ತಿರಸಬೇಕು ಎಂದಾದರೆ ಕಾಂಗ್ರೇಸ ಪಕ್ಷವನ್ನು ಯಾಕಾಗಿ ಬೆಂಬಲಿಸಬೇಕು ಎಂಬ ಪ್ರಶ್ನೆ ಇಂದು ಮುಸ್ಲಿಮ್ ಸಮಾಜ ಕೇಳುತ್ತಿದೆ. ಬಿಜೆಪಿಯವರು ಹೇಳಿಕೆ ನೀಡಿದಾಕ್ಷಣ ಮುಸ್ಲಿಮರ ಕುರಿತು ಯುಟರ್ನ ಹೊಡೆಯುವಷ್ಟು ಭಯ ಕಾಂಗ್ರೇಸ್ ಪಕ್ಷಕ್ಕೆ ಆವರಿಸಿದೆ ಎಂದಾದರೆ ಕಾಂಗ್ರೇಸ್ ಪಕ್ಷದಿಂದ ಇನ್ನೆಂಥ ನಿರೀಕ್ಷೆ ಇಡಬಹುದು.

2 ಬಿ ಮಿಸಲಾತಿ ಕುರಿತು ಕಾಂಗ್ರೇಸ್ ಪಕ್ಷದ ಸರಕಾರಕ್ಕೆ ನಮ್ಮ ಬೇಡಿಕೆ ಎಂದರೆ, ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸು ಇಲ್ಲದೆ 2 ಬಿ ಮಿಸಲಾತಿ ರದ್ದತಿಯ ಆದೇಶವನ್ನು ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ಹಿಂದಿನ ಸಚಿವ ಸಂಪುಟದ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಮತ್ತು ಕರ್ನಾಟಕದ ಮುಸ್ಲಿಮರಿಗೆ ವರ್ಗ ಆಧಾರಿತವಾಗಿ ನೀಡಲಾದ ಮೀಸಲಾತಿಯನ್ನು ಎಥಾಸ್ಥಿತಿ ಮುಂದುವರೆಸಲಾಗಿದೆ ಎಂಬುದರ ಕುರಿತು ಸುಪ್ರೀಮ್ ಕೋರ್ಟಗೆ ಅಫಿಡೆವಿಟ್ ಸಲ್ಲಿಸಬೇಕು. ಈ ನಿರ್ಣಯ ಕೈಗೊಂಡಾಗ ಮಾತ್ರ ಕಾಂಗ್ರೇಸ್ ಮುಸ್ಲಿಮರ ಋಣ ತೀರಿಸಿದಂತಾಗುತ್ತದೆ.

ಬೆಳಗಾವಿಯಲ್ಲಿ ನಡೆದಿರುವ ಅಧಿವೇಶನದ ಸಂದರ್ಭದಲ್ಲಿ ರಾಜ್ಯದ ಹಲವಾರು ಸಂಘಟನೆಗಳು ಹತ್ತಾರು ಸಮಸ್ಯೆ - ವಿಷಯಗಳನ್ನು ಮುಂದಿಟ್ಟು ಹೋರಾಟ ನಡೆಸುತ್ತಿವೆ.  ಇಂಥಹ ಗದ್ದಲ, ಗೊಂದಲದಲ್ಲಿ ನಮ್ಮ ಕರ್ನಾಟಕ ಮುಸ್ಲಿಂ ಯುನಿಟಿ ಸಂಘಟನೆಯು ಹೋರಾಟ ನಡೆಸಿದರೆ ಸರ್ಕಾರಕ್ಕೆ ವಿಷಯ ಮುಟ್ಟಿಸಲು ಸಾಧ್ಯ ವಾಗುವುದಿಲ್ಲ ಎಂಬ ಕಾರಣಕ್ಕಾಗಿ, ಮುಂದಿನ ದಿನಗಳಲ್ಲಿ ಕೆ ಎಂ ಯು ಸಂಘಟನೆಯ ನೇತೃತ್ವದಲ್ಲಿ  ಬೆಂಗಳೂರಿನ “ಪ್ರೀಡಂ ಪಾರ್ಕ”ನಲ್ಲಿ ಹೋರಾಟನಡೆಸಿ ಮುಸ್ಲಿಮ್ 2ಬಿ ಮೀಸಲಾತಿ ಬೇಡಿಕೆಯ ಈಡೇರಿಕೆಗೆ ಕಾರ್ಯಯೋಜನೆ ರೂಪಿಸಿದ್ದೇವೆ ಎಂದು ಹೇಳಿದರು.

No comments:

Post a Comment