Monday, December 9, 2024

ಬನಹಟ್ಟಿ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ

ಬನಹಟ್ಟಿ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ 

 ಬಾಗಲಕೋಟೆ/ 
 ರಬಕವಿ ಬನಹಟ್ಟಿ : ತಾಲೂಕಿನ ಬನಹಟ್ಟಿ ಪೊಲೀಸ್ ಇಲಾಖೆಯ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ತಡೆ ಮಾಸಾಚರಣೆ 01-12 2024 ರಿಂದ 31-12- 2024ರ ವರೆಗೆ ಒಂದು ತಿಂಗಳು ಕಾಲ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ  ಹಮ್ಮಿಕೊಂಡಿದ್ದಾರೆ  .

ನಗರದ ಬಸ್ ನಿಲ್ದಾಣ ಹಾಗೂ ಆಟೋ ನಿಲ್ದಾಣಗಳಲ್ಲಿ ಈ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು . ಠಾಣಾಧಿಕಾರಿ ಶ್ರೀಮತಿ ಶಾಂತಾ ಹಳ್ಳಿ ಅವರು ಅಪರಾಧ ತಡೆ ಹಾಗೂ ಅಪಘಾತಗಳ ಬಗ್ಗೆ ಆಟೋ ಚಾಲಕರಿಗೆ ಅರಿವು ನೀಡಿದರು. ನಂತರ ಬನಹಟ್ಟಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅಪರಾಧ ತಡೆ ಮಾಸಾಚರಣೆ ಬಗ್ಗೆ ಮಾಹಿತಿ ನೀಡಿದರು ನಂತರ  ಬಸ್ ನಿಲ್ದಾಣದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜೊತೆ ಮಾತನಾಡಿದ ಠಾಣಾ ಅಧಿಕಾರಿ ಶ್ರೀಮತಿ ಶಾಂತಾ ಹಳ್ಳಿ ಅವರು ಈ ಬಸ್ ನಿಲ್ದಾಣದಲ್ಲಿ ಯಾರೇ ಅಪರಾಧ ಮಾಡಿದರೂ ನಮ್ಮ ಪೊಲೀಸ್ ಇಲಾಖೆಗೆ ಕೂಡಲೇ ಮಾಹಿತಿಯನ್ನು ನೀಡಬೇಕು ಮತ್ತು ನಿಲ್ದಾಣದ ಮುಂಬಾಗ ಫ್ಲೆಕ್ಸ್ ಗಳನ್ನು ಕಟ್ಟದಂತೆ ನಿಗಾ ಮತ್ತು ಜಾಗೃತಿ ವಹಿಸಬೇಕು ಎಂದು ಹೇಳಿದಾಗ ನಿಲ್ದಾಣದ ಕಾರ್ಯನಿರ್ವಾಹಕ ಅಧಿಕಾರಿ, ಜನರು ಫ್ಲೆಕ್ಸ್ ಗಳನ್ನು ಕಟ್ಟಲಿಕ್ಕೆ ಬಂದಾಗ ಕಟ್ಟಬೇಡಿ ಎಂದು ಹೇಳಿದರೂ ಕೂಡ ಯಾರು ಕೇಳುವುದಿಲ್ಲ ಮೇಡಂ ಎಂದು ಉತ್ತರ ನೀಡಿದಾಗ ಠಾಣಾಧಿಕಾರಿ ಇದು ನಿಮ್ಮ ಆಸ್ತಿ ಇದನ್ನು ನೀವೇ ಸಂರಕ್ಷಿಸಲು  ಮುಂದಾಗಬೇಕು ಎಂದು ಅವರಿಗೆ ತಿಳಿ ಹೇಳಿದರು. 


 ಈ ಸಂದರ್ಭದಲ್ಲಿ ಬೀಟ್ ಸಿಂಬಂದಿ ಆರ್ ಆರ್ ಕಾಂಬಳೆ ಮತ್ತು ಎಸ್ ಬಿ ಸಿಬ್ಬಂದಿ ಆನಂದ್ ಕೋಲೂರ್ ಉಪಸ್ಥಿತರಿದ್ದರು.

 ವರದಿ ಮೆಹಬೂಬ್ ಬಾರಿಗಡ್ಡಿ 

No comments:

Post a Comment