Friday, December 27, 2024

ಎಸ್‌ ಡಿ ಪಿ ಐ ಪಕ್ಷ ಸುನಾಮಿ ಇದ್ದ ಹಾಗೆ ತಡೆಯೋಕೆ ಬಂದ್ರೆ ಕೊಚ್ಚಿಕೊಂಡು ಹೋಗ್ತೀರಾ ! ಕಾಂಗ್ರೆಸ್ ಪ್ರಭಾವಿ ನಾಯಕನಿಗೆ ಪರೋಕ್ಷ ಟಾಂಗ್ ನೀಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಆರ್ ಭಾಸ್ಕರ್ ಪ್ರಸಾದ್ :




 ಬಾಗಲಕೋಟೆ  / ತೇರದಾಳ್   :  ಬಾಗಲಕೋಟೆ ಜಿಲ್ಲೆಯ ತೆರದಾಳ ಪಟ್ಟಣದಲ್ಲಿ ಎಸ್ ಡಿ ಪಿ ಐ ತೆರದಾಳ ಮತ ಕ್ಷೇತ್ರ ಘಟಕದ ಆಶ್ರಯದಲ್ಲಿ , ರಾಜ್ಯ ಸೋಶಿಯಲ್ ಡಿಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷಕ್ಕೆ  ನೂತನವಾಗಿ ಆಯ್ಕೆಯಾಗಿರುವಂತಹ ರಾಜ್ಯ ನಾಯಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಬಸ್ ನಿಲ್ದಾಣದ ಹತ್ತಿರ ಮಹಾತ್ಮ ಗಾಂಧಿ ಮೈದಾನದಲ್ಲಿ ಆಯೋಜನೆಯನ್ನು  ಮಾಡಿದರು . 

 ಅಭಿನಂದನಾ ಸಮಾರಂಭದ ವೇದಿಕೆಯಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ರಾಜ್ಯ ಸೋಶಿಯಲ್ ಡಿಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೂತನವಾಗಿ ಆಯ್ಕೆಯಾಗಿರುವಂತ ಬಿ ಆರ್ ಭಾಸ್ಕರ್ ಪ್ರಸಾದ್ ಅವರು  ಹೆಸರು ಹೇಳದೆ , ತೇರದಾಳ  ಮತಕ್ಷೇತ್ರದ ಕಾಂಗ್ರೆಸ್ ಪ್ರಭಾವಿ ನಾಯಕ ಹೇಳಿದ ಮಾತು ನಮ್ಮ ಮತ ಕ್ಷೇತ್ರದಲ್ಲಿ ಎಸ್ ಡಿ ಪಿ ಐ ಪಕ್ಷ ಬೆಳೆಯೋಕೆ ಬಿಡಬಾರದು ಅನ್ನುವಂತ ಮಾತಿಗೆ, ನಿಮಗೆ ಸೂರ್ಯ ನ ಬಿಸಿಲು ತಡೆಯೋಕೆ ಆಗುತ್ತಾ ? ನಿಮಗೆ ಗಾಳಿ ತಡೆಯೋಕೆ ಆಗುತ್ತಾ ? ನಿಮಗೆ ಸುನಾಮಿ ತಡೆಯೋಕೆ ಆಗುತ್ತಾ ? ಅದೇ ತರ ಎಸ್ ಡಿ ಪಿ ಐ ಪಕ್ಷವು ನೀವುಗಳು ತಡೆಯೋಕೆ ಬಂದ್ರೆ ಹೆಸರು ಇಲ್ದಂಗೆ  ಕೊಚ್ಚಿಕೊಂಡು  ಹೋಗ್ತೀರಾ  ಎಂದು ಪರೋಕ್ಷವಾಗಿ ಟಾಂಗ್ ನೀಡಿದರು .


ಮಾತನಾಡಿದ ರಾಜ್ಯ ನೂತನವಾಗಿ ಎಸ್ ಡಿ ಪಿ ಐ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಅಪ್ಸರ  ಕೊಡ್ಲಿಪೇಟೆ ಅವರು ಈ ದೇಶದ ಅಭಿಮಾನ ವಾಗಿದ್ದ ವೀರ ಟಿಪ್ಪು ಸುಲ್ತಾನ್ ಅವರು 275 ವರ್ಷಗಳ ಹಿಂದೆ ಹೇಳಿದ ಮಾತು ನೂರು ದಿನ ಇಲಿ ಯಾಗಿ ಬಾಳುವುದೆಗಿಂತ ಒಂದು ದಿನ ಹುಲಿಯಾಗಿ ಬಾಳಿ ಎಂದು ಹೇಳಿದ್ದರು ಇದೇ ಸಂದೇಶವನ್ನು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು 75 - 80 ವರ್ಷಗಳ ಹಿಂದೆ ಮರುನಾಮಕರಣ ಮಾಡುವ ಮುಖಾಂತರ ಬದುಕಿದರೆ ಹುಲಿ ಸಿಂಹಗಳಾಗಿ ಬದುಕಿ ಏಕೆಂದರೆ ಬಲಿ ಕೊಡುವಂತದ್ದು ಕೋಳಿ ಕುರಿಗಳನ್ನೇ ಹೊರತು ಹುಲಿ  - ಸಿಂಹ ಅಲ್ಲ ಎಂದು ಹೇಳಿದ್ದರು  . ನಾವು ಜೀವನ ಮಾಡಬೇಕಾದರೆ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಟಿಪ್ಪು ಸುಲ್ತಾನ್ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಾವು ಹುಲಿ ಮತ್ತು ಸಿಂಹಗಳಾಗಿ   ಬದುಕಬಹುದು  . ಒಂದು ವೇಳೆ  ಅವರ ಆದರ್ಶಗಳನ್ನು ಪಾಲಿಸದೆ ಹೋದಲ್ಲಿ ನಮ್ಮನ್ನು ನಾಯಿ ನರಿ ಕೋಳಿಗಳನ್ನು ಲಿಂಚಿಂಗ್ ಮಾಡಿ, ಕೊಂದು   ಹಾಕುವಂತ ವ್ಯವಸ್ಥೆ ಇಲ್ಲಿ ನಾವು ನೋಡುತ್ತಿದ್ದೇವೆ  . ಇಂದಿನ ಭಾರತದ  ಕರ್ನಾಟಕದಲ್ಲಿ ರಾಜಕೀಯ ಪವರ್ ಇಲ್ಲದೆ , ರಾಜಕೀಯ ಅಧಿಕಾರವಿಲ್ಲದೆ ಗುಲಾಮರಾಗಿ ಬದುಕುವಂಥ ಪರಿಸ್ಥಿತಿ ಈ ನಾಡಿಗೆ ಇಂದಿನ ಶೋಷಿತ ದಲಿತ ಅಲ್ಪಸಂಖ್ಯಾತರಿಗೆ ಇಲ್ಲಿರುವಂತಹ ಭ್ರಷ್ಟ ರಾಜಕಾರಣಿಗಳು ತಂದೊಡ್ಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು .

 ರಾಜ್ಯ ವಾಕ್ಫ್ ಬೋರ್ಡ್ 1 ಲಕ್ಷ 20,000 ಎಕರೆ ಜಮೀನಿನಲ್ಲಿ ಕೇವಲ 27,000 ಎಕರೆ ಜಮೀನು ಮಾತ್ರ ಬಾಕಿ ಉಳಿದಿದೆ  ಬಾಕಿ ಉಳಿದಂತಹ ಜಮೀನು ಎಲ್ಲ ರಾಜಕೀಯ ಪಕ್ಷದ ಮುಖಂಡರು ಕಬ್ಳಿಸಿಕೊಂಡಿದ್ದಾರೆ ಎಂದು ಆರೋಪ ಮಾಡಿದರು .

 ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಹಣ್ಣಾನ್,  wim ರಾಜ್ಯ ಕಾರ್ಯದರ್ಶಿ ನಶ್ರೀಯ ಬಳ್ಳಾರಿ, ರಾಜ್ಯ ಕಾರ್ಯದರ್ಶಿ ರಂಜಾನ್ ಕಡಿವಾಲ್, ರಿಯಾಜ್ ಕಡಂಬು ಹಾಗೂ ಬಾಗಲಕೋಟೆ ಜಿಲ್ಲಾ ಸಮಿತಿ ಎಲ್ಲ ಪದಾಧಿಕಾರಿಗಳು ಜಿಲ್ಲೆಯ ಕಾರ್ಯಕರ್ತರು, ಜಿಲ್ಲಾ ಮುಖಂಡರುಗಳು ಉಪಸ್ಥಿತರಿದ್ದರು.

No comments:

Post a Comment