Friday, March 14, 2025

ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ "ರೋಜಾ" ಮಹತ್ವವಾದ ಸ್ತಂಭ, ರಮಜಾನ್ ಯಾಕೆ ಆಚರಿಸಲ್ಪಡುತ್ತದೆ ? ಲೇಖನ : ಮಹಿಬೂಬ್ ಮ ಬಾರಿಗಡ್ಡಿ

ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ  "ರೋಜಾ"  ಮಹತ್ವವಾದ ಸ್ತಂಭ,ರಮಜಾನ್ ಯಾಕೆ ಆಚರಿಸಲ್ಪಡುತ್ತದೆ ?

1)  ಕಲ್ಮಾ ಏ ತೋಯ್ಯಬ , 2 )ರೋಜಾ ,  3 ) ಜಕಾತ್ , 4 )ನಮಾಜ್  , 5 ) ಹಜ್ ಇವೆಲ್ಲ ಇಸ್ಲಾಂ ಧರ್ಮದ ಭದ್ರಬುನಾದಿಗಳು ಅಂದರೆ 5 ಫೌಂಡೇಶನ್ ಗಳು, ಉದಾಹರಣೆಗೆ  , ಒಂದು ಮನೆಗೆ ಅದರ ಅಡಿಪಾಯ  ಫೌಂಡೇಶನ್ ಹೇಗೆ ಮುಖ್ಯವಾಗಿರುತ್ತದೆಯೋ, ಹಾಗೆ ಅದರ ಸ್ತಂಭಗಳು ಕೂಡ ಅಷ್ಟೇ ಮುಖ್ಯ , ಅದೇ ರೀತಿ ಕೂಡ ಇಸ್ಲಾಂ ಧರ್ಮದಲ್ಲಿ 5 ಸ್ತಂಭಗಳಲ್ಲಿ ಒಂದು ರಮಜಾನ್ ತಿಂಗಳಿನಲ್ಲಿ "  ರೋಜಾ " ( ಉಪವಾಸ ) ಆಚರಣೆ ಮಾಡುವಂತ ಒಂದು ಸ್ತಂಭ , ಈ ರೋಜಾ ಉಪವಾಸ ಆಚರಣೆ ಶ್ರೀಮಂತ, ಬಡವ,ಮೇಲು, ಕೀಳು  ಅನ್ನುವಂತ ಭಾವನೆ ಇಲ್ಲದೆ ಪ್ರತಿಯೊಬ್ಬರೂ ಕಂಪಲ್ಸರಿ ಮಾಡಲೇಬೇಕಾದಂತಹ  ಉಪವಾಸ  "ರೋಜಾ"  ಆಗಿದೆ . ಇಸ್ಲಾಂ ಧರ್ಮದಲ್ಲಿ ಕೇವಲ ರೋಜಾ ಉಪವಾಸ ಇರುವುದು ಅಷ್ಟೇ ಅಲ್ಲದೆ, ತನ್ನ ಇಡೀ ದೇಹ ವೆ "ರೋಜಾ " ಉಪವಾಸ ಮಾಡಿದರೆ ಮಾತ್ರ ಪೂರ್ಣ ಪ್ರಮಾಣದಲ್ಲಿ ಉಪವಾಸ ಆಚರಣೆ ಆಗುವುದು ಸತ್ಯ. 

ಇಡೀ ದೇಹವೇ ರೋಜಾ ಉಪವಾಸ ಅಂದರೆ ಏನು ಅಂತೀರಾ ?  ಬನ್ನಿ ತಿಳಿಯೋಣ  , ತನ್ನ ಬುದ್ಧಿ  ಈ ಉಪವಾಸ ಆಚರಣೆಯ ಸಂದರ್ಭದಲ್ಲಿ ಕೆಟ್ಟ ದುರಾಲೋಚನೆ ಮಾಡತಕ್ಕದ್ದು  , ಕಣ್ಣುಗಳಿಂದ ಕೆಟ್ಟದ್ದನ್ನು ನೋಡ ಬಾರದು , ನಾವು ಮಾತಾಡುವಂತ ಬಾಯಿಂದ ಕೆಟ್ಟ ಪದಗಳ ಬಳಸ ಬಾರದು  ,  ಸ್ವಂತ ಹೆಂಡತಿಯನ್ನು ಕೂಡ ಕೆಟ್ಟ ರೀತಿಯಿಂದ ನೋಡ ಬಾರದು , ತನ್ನ ಕೈಯಗಳಿಂದ ಕೆಟ್ಟ ಕೆಲಸವನ್ನು ಮಾಡ ಬಾರದು   , ತನ್ನ ಕಾಲಗಳ ಮೂಲಕ ಕೆಟ್ಟ ಕೆಲಸದ ಕಡೆ ಹೋಗ ಬಾರದು   , ಈ ಪ್ರಕಾರವಾಗಿ ಉಪವಾಸ ರೋಜಾವನ್ನು ಮಾಡಿದರೆ ಮಾತ್ರ ಅಲ್ಲಾಹನಿಗೆ ಅರ್ಪಣೆ ಯಾಗುತ್ತದೆ . 
ಪವಿತ್ರ ರಮ ಜಾನ್ ತಿಂಗಳ ಉಪವಾಸ ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದು . ಇಸ್ಲಾಂ ಧರ್ಮದಲ್ಲಿ ಈದ್ ಮಿಲಾದ್, ಮೊಹರಂ, ಬಕ್ರೀದ್ ಈ ಹಬ್ಬಗಳಲ್ಲಿ ಶ್ರೇಷ್ಠ ರಮಜಾನ್ ಹಬ್ಬ . ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಒಂಬತ್ತನೆಯ ತಿಂಗಳಾಗಿ ಬರುತ್ತದೆ. ರಮಜಾನ್‌ನಲ್ಲಿ ಒಂದು ತಿಂಗಳು, ರೋಜಾ ಉಪವಾಸ ಮಾಡುವದರ ಮುಲಕ  ವೈಜ್ಞಾನಿಕವಾಗಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ರೋಗಾನು ಜೀವಿಗಳು ಕೂಡ ಸಾಯುತ್ತವೆ  ಹಾಗೂ ಅಲ್ಲಾಹನ ಕೃಪೆಗೆ ಕೂಡ ಪಾತ್ರರಾಗುತ್ತೇವೆ . 

 *ಅಲ್ಲಾಹನು ನಮಗೆ 30 ದಿನ ಉಪವಾಸ   ರೋಜಾ ಉಪವಾಸ ಕಾರ್ಯ ಕೊಟ್ಟಿದ್ದರಿಂದ  ಅಲ್ಲಾಹನಿಗೆ ಏನು ಸಿಗುತ್ತದೆ ?*  

ಅನ್ನುವ ಪ್ರಶ್ನೆ ಉದ್ಭವವಾಗುತ್ತದೆ ಮನುಷ್ಯನು ಏನೇ ಮಾಡಿದರು , ಮಾಡದಿದ್ದರೂ ಕೂಡ ಅಲ್ಲಾಹನ ಭಂಡಾರದಲ್ಲಿ ಒಂದು ಸಾಸಿವೆ ಕಾಳಷ್ಟು ಕಡಿಮೆಯಾಗುವುದಿಲ್ಲ ಹಾಗೇನೇ ಹೆಚ್ಚಿಗೆ ಕೂಡ ಆಗುವುದಿಲ್ಲ  . ಅದೇ ರೀತಿ ಮನುಷ್ಯನು ಯಾವ ರೀತಿ ಭಕ್ತಿಯಿಂದ ತನ್ನ ದೇಹವು ತ್ಯಾಗದ ಮೂಲಕ ಅರ್ಪಣೆ ಮಾಡುತ್ತಾನೋ ಅದೇ ಅಲ್ಲಾಹನಿಗೆ ಅರ್ಪಣೆ ಯಾಗುತ್ತದೆ .
 ಮತ್ತು ಅಲ್ಲಾಹನಿಗೆ  ಹತ್ತಿರವಾಗಲು ಸಹಾಯ ಮಾಡುತ್ತೆ ಎಂದು ಮುಸ್ಲಿಮರು ನಂಬಿಕೆ . ಹಾಗಾಗಿ ರಮಜಾನ್ ತಿಂಗಳಲ್ಲಿ  " ರೋಜಾ" ನಮಾಜ್, ಬಡವ ಶ್ರೀಮಂತ ಮೇಲು ಕೀಳು ಇಲ್ಲದೆ ಮಾಡುವಂತಹ ಪುಣ್ಯದ ಕಾರ್ಯ , ಆದರೆ  ಶ್ರೀಮಂತ ರಿಗೆ ಮಾತ್ರ ಹಜ್ , ಜಕಾತ್  ( ದಾನ  ) ನೀಡುವದಕ್ಕೆ ಕಟ್ಟೆಪ್ಪನೆ ನೀಡುತ್ತದೆ ಇಸ್ಲಾಂ  . 

ಉಪವಾಸವು ಕೇವಲ ದಿನವಿಡೀ ಹಸಿವಿನಿಂದ ಇರಲು ಮಾತ್ರವಲ್ಲದೆ . ಆತ್ಮ ನಿಯಂತ್ರಣ, "ತಾಳ್ಮೆ ಸಬರ ತ್ಯಾಗ, ಆಧ್ಯಾತ್ಮಿಕ ಮತ್ತು ಮಾನಸಿಕ ಶುದ್ಧಿಕರಣದೊಂದಿಗೆ ತಕ್ವಾವನ್ನು ಕಲಿಯುವುದು. 

 ಮುಸ್ಲಿಂ ಬಾಂಧವರು ಈ ರಮಜಾನ್ ತಿಂಗಳು ಗಾಗಿ ಇಡೀ ವರ್ಷ ಉತ್ಸಾಹದಿಂದ ಕಾಯುತ್ತಾರೆ.  "ಸಹೇರಿ " ಅಂದರೆ ನಸುಖಿನ ಜಾವ್ ವೇಳೆ ಅಲ್ಪ ಭೋಜನ    ಸೇವಿಸುವ ಮೂಲಕ ಉಪವಾಸವನ್ನು ಆರಂಭವಾಗಿ , ಸಾಯಂಕಾಲ ಸೂರ್ಯಸ್ತ  ಆದ ನಂತರ  ನೀರು ಮತ್ತು ಪೂರ್ಣ ಪ್ರಮಾಣದಲ್ಲಿ ಭೋಜನವನ್ನು ಮಾಡಿ  ಉಪವಾಸವನ್ನು ತೆರೆ ಮಾಡಲಾಗುತ್ತದೆ  .

ರಮಜಾನ್ ತಿಂಗಳು ಆಚರಣೆಯ ಪ್ರತಿದಿನ ರಾತ್ರಿ 9 ಘಂಟೆಯ ವೇಳೆಯಲ್ಲಿ ವಿಶೇಷ ನಮಾಜ್  "ತರಾವೀಹ್" . ವೇಳೆ  ಸಂಪೂರ್ಣವಾಗಿ ಕುರಾನ್  ಪಠಿಸಲಾಗುತ್ತದೆ. ಬಡವ ಶ್ರೀಮಂತ  ಭೇದ-ಭಾವ ಇಲ್ಲದೆ ಪುರುಷರು ಮಸೀದಿಗಳಲ್ಲಿ ಸಂಘಟಿತರಾಗಿ ಸಾಮೂಹಿಕವಾಗಿ ಪ್ರಾರ್ಥನೆ ನೆರವೇರಿಸಿದರೆ, ಮಹಿಳೆಯರು ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ.

ಈ ತಿಂಗಳಲ್ಲಿ ಯಾವ ರಾತ್ರಿಯ ದಿನ ಕುರಾನಿನ ಪ್ರಥಮ ವಾಕ್ಯಗಳು ಅವತೀರ್ಣ ಗೊಂಡವೋ ಅದಕ್ಕೆ ಅತ್ಯಂತ ಹೆಚ್ಚಿನ ಮಹತ್ವವಿದೆ.  "ಲೈಲತುಲ್ ಕದ್ರ "ಎಂದು ಕರೆಯಲಾಗುವ ಈ ರಾತ್ರಿ ಯಾವುದೆಂದು ಸ್ಪಷ್ಟವಾಗಿ ಹೇಳಲು ಸಾಧ್ಯವೇ ಇಲ್ಲ  ರಮಜಾನ್ ಮಾಸದಲ್ಲಿ  21, 23, 25, 27, 29ನೇ ದಿನಾಂಕದಂದು ಅಂದರೆ ಕೊನೆಯ ಹತ್ತು ದಿನಗಳ ಬೆಸ ಸಂಖ್ಯೆಗಳ ದಿನಗಳ  ರಾತ್ರಿ ಲೈಲತುಲ್ ಕದ್ರ ಆಗಿರಬಹುದು ಅನ್ನುವುದು ನಂಬಿಕೆಯಿಂದ .  27ನೇ ದಿನದ ಮುನ್ನಾರಾತ್ರಿ ಹೆಚ್ಚು ಸಂಭವನೀಯ ಇರಬಹುದು ಎಂದು ಹೆಚ್ಚಿನವರು ನಂಬಿಕೆ . ಈ ರಾತ್ರಿಯಲ್ಲಿ ನಡೆಸುವ ಪ್ರಾರ್ಥನೆಗಳು ಉಳಿದ ಸಮಯದ ಪ್ರಾರ್ಥನೆಗಿಂತ ಸಾವಿರಾರು ಪಟ್ಟು ಹೆಚ್ಚು ಪುಣ್ಯದ ಪ್ರತಿ ಫಲಪ್ರದ ಎಂದು ಹೇಳಲಾಗುತ್ತದೆ.

ರಮಜಾನ ಕೊನೆಯ ಹತ್ತು ದಿನಗಳಲ್ಲಿ ಪ್ರವಾದಿ ಮೊಹಮ್ಮದ್‌ರನ್ನು ಮೂಲಕ ನೆನಪಿಸಿಕೊಳ್ಳುವುದು ಕುರಾನ್ ಎಂಬ ನಂಬಿಕೆ ಇದೆ. ಈ ಅವಧಿಯಲ್ಲಿ ಮುಸ್ಲಿಮರು ಮಸೀದಿಯಲ್ಲೇ "ಅಯತೇಕಾಬ " (ತಂಗುವುದು) ಭಕ್ತಿಯಿಂದ ಮಾಡುವ ಮೂಲಕ ಧಾರ್ಮಿಕ ಜ್ಞಾನವನ್ನು ಹೆಚ್ಚಿಸಿ ಗೊಂಡು . ಅಲ್ಲಾಹನ ಕೃಪೆಗೆ ಪಾತ್ರರಾಗುತ್ತಾರೆ.

ರಮಜಾನ್ ತಿಂಗಳಲ್ಲಿ ಜಕಾತ್ ದಾನ  ಶ್ರೀಮಂತರು ತಮ್ಮ ಸಂಪತ್ತಿನ ಅಂದರೆ ಒಂದು ವರ್ಷದ ಅವಧಿಯಲ್ಲಿ ಗಳಿಸಿದ ಆದಾಯದಲ್ಲಿ ಶೇ.2.5ರಷ್ಟು ಪಾಲನ್ನು ಜಕಾತ್ ಮತ್ತು ಸದಕಾ, ಫೀತರಾ ಎಂಬ ದಾನದ ರೂಪದಲ್ಲಿ  ಬಡವರಿಗೆ, ವಿಧವೆ , ಅನಾಥ ಮಕ್ಕಳಿಗೆ ನೀಡಲೇಬೇಕು . ಅನ್ನುವುದು ಇಸ್ಲಾಂ ಧರ್ಮದ ಕಟ್ಟಾಜ್ಞೆ ಯಾಗಿದೆ . ಇನ್ನು ದಾನ ಕೊಡುವಾಗ ಹೆಮ್ಮೆಯ ಬದಲು ವಿನೀತ ಭಾವವಿರಬೇಕು. ದಾನಕ್ಕಾಗಿ ಬಡವರು ತಮ್ಮ ಮನೆಗೆ ಬರುವುದು ಇಸ್ಲಾಂ ಧರ್ಮದಲ್ಲಿಲ್ಲ. ದಾನಿಗಳೇ ಅವರ ಮನೆಗೆ ಹೋಗಿ ದಾನ ನೀಡಬೇಕು ಎಂಬ ನಿಯಮ ಕೂಡ ಇದೆ ಎಂದು ಹೇಳಲಾಗುತ್ತಿದೆ.

 ಲೇಖನ - 
ಮಹಿಬೂಬ್ ಎಂ ಬಾರಿಗಡ್ಡಿ