Monday, July 14, 2025

500 ಕೋಟಿ ಬಾರಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣದ ಸಂಭ್ರಮ :

500 ಕೋಟಿ ಬಾರಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣದ ಸಂಭ್ರಮ  : 
 ಬಾಗಲಕೋಟೆ  / 
 ರಬಕವಿ - ಬನಹಟ್ಟಿ : 
ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪೈಕಿ  ಮಹತ್ವದ ಯೋಜನೆಯದ ಶಕ್ತಿ ಯೋಜನೆಯು 11.06.2023 ಜಾರಿಗೊಳಿಸುವ ಮೂಲಕ ಎರಡು ವರ್ಷ ಪೂರೈಸಿ,  ರಾಜ್ಯದ ಎಲ್ಲಾ ಮಹಿಳೆಯರು ವಿದ್ಯಾರ್ಥಿನಿಯರು ಸೇರಿದಂತೆ ಸರಿಸುಮಾರು 500 ಕೋಟಿ ಫಲಾನುಭವಿಗಳು  ಪ್ರಯಾಣ ಮಾಡುವ ಮೂಲಕ ಶಕ್ತಿ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡಿರುತ್ತಾರೆ. 
 ಸದರಿ ಶಕ್ತಿ ಯೋಜನೆಯ ಸಂಭ್ರಮಾಚರಣೆಯನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಾಗಲಕೋಟೆ ವಿಭಾಗ ಬನಹಟ್ಟಿ ಬಸ್ ನಿಲ್ದಾಣದಲ್ಲಿ  ಬಸ್ ಒಂದನ್ನು  ಪೂಜೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು.

ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಡಿ 500 ಕೋಟಿ ಬಾರಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿರುವ ಸಂಭ್ರಮದ ಅಂಗವಾಗಿ ಮಾತನಾಡಿದ , ತೇರದಾಳ್ ಮತಕ್ಷೇತ್ರದ ಶಾಸಕ  ಸಿದ್ದು ಸವದಿ  ಯೋಜನೆಯಿಂದ ಜನರಿಗೆ ಒಳ್ಳೆದಾಗಿದೆ . ಅದೇ ಪ್ರಕಾರ ಊರು ಕೂಡ ಡೆವಲಪ್ಮೆಂಟ್ ಆಗಬೇಕು ಅನ್ನೋದು ನನ್ನ ಭಾವನೆಯಾಗಿದೆ . ಏಕೆಂದರೆ ಎಲ್ಲ ತರಹದ ನಿತ್ಯ ಬಳಕೆಯ ವಸ್ತುಗಳ ಬೆಲೆಗಳು  ಏರಿಕೆ ಗಳಾಗಿವೆ ಇದರಿಂದ ಈ ಯೋಜನೆ ಸುಧಾರಣೆ ಆಗಿದೆ. 
 ರೆಗುಲರ್ ಆಗಿ ರಸ್ತೆಗಳು, ಚರಂಡಿಗಳು,  ಸಿಟಿ  ಡೆವಲಪ್ಮೆಂಟ್, ಸ್ಲಂ ಡೆವಲಪ್ಮೆಂಟ, ಸರ್ಕಾರವು  ಎರಡು ವರ್ಷ ಅವಧಿ ಆದರೂ ಒಂದು ಮನೆ ಕೂಡ ಬಡವರಿಗೆ ಕೊಟ್ಟಿಲ್ಲ , ಆದರಿಂದ ಈ ಶಕ್ತಿ ಗ್ಯಾರಂಟಿ ಯೋಜನೆ ಯೋಜನೆಯಿಂದ, ಇತರ ಅಭಿವೃದ್ಧಿಯ ಕೆಲಸಗಳು ಸ್ಥಗಿತ ಗೊಳ್ಳದೆ,  ಸಾಲ ಬೇಕಾದರೂ ಮಾಡಿ  ಬಡವರಿಗೆ ಅನುಕೂಲ ಮಾಡಿ . ನೀವು ಹೇಗೆ ಗ್ಯಾರಂಟಿ ಯೋಜನೆಗಳು ಎಷ್ಟು ನೀಟಾಗಿ ಮಾಡ್ತೀರಿ ಅದಕ್ಕೆ ನನ್ನ ಸ್ವಾಗತ ಇದೆ . ಅದರಂತೆ  ಇತರ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಳಸದೆ ,   ಮಾಡಿ  ನಮ್ಮ ಬೆಂಬಲ ಕೂಡ ನಿಮಗೆ ಇದೆ  ಎಂದು ಹೇಳಿದರು. 

 ವರದಿ ಮಹಬೂಬ್ ಎಂ ಬಾರಿಗಡ್ಡಿ

Tuesday, July 8, 2025

ರಬಕವಿ - ಬನಹಟ್ಟಿ ನಗರಸಭೆ ವಾರ್ಡ್ ಚುನಾವಣೆ ಕಾವು :

ರಬಕವಿ - ಬನಹಟ್ಟಿ ನಗರಸಭೆ ವಾರ್ಡ್  ಚುನಾವಣೆ ಕಾವು  : 

     ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ನಗರ ಸಭೆಯ ಆಡಳಿತ ಮಂಡಳಿಯ  ಚುನಾವಣೆಗೆ ಇನ್ನೂ ಸಾಕಷ್ಟು ಸಮಯಾವಕಾಶವಿದ್ದರೂ,  ಈಗಲೇ ಚುನಾವಣೆ ಕಾವು ಬಲು ಜೋರಾಗಿಯೇ ಕಾಣ್ತಾ ಇದೆ. 

   ಒಂದಿಬ್ಬರು ಹಾಲಿ ಅಭ್ಯರ್ಥಿಗಳ ಹೊರತು ಪಡಿಸಿದರೆ,
ಉಳಿದೆಲ್ಲ ಇವರ ವಿರುದ್ಧ ಸೆಡ್ಡು ಹೊಡೆಯಲು ತೆರೆ ಮರೆಯಲ್ಲಿ ಅಭ್ಯರ್ಥಿಗಳು ತಯಾರಾಗುತ್ತಿದ್ದಾರೆ. ನಗರ ಸಭೆ  ಚುನಾವಣೆ ಇದಾಗಿದ್ದರೂ ಪಕ್ಷ ಮತ್ತು ಜಾತಿ ರಾಜಕಾರಣದ ಗತ್ತು, ಗಮ್ಮತ್ತು ಇಲ್ಲಿ ಸಾಕಷ್ಟು ಕೆಲಸ
ಮಾಡಲಿದೆ. 

     ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲೂ ಅಭ್ಯರ್ಥಿಗಳಾಗಲು ಮುಖಂಡರು ಸಜ್ಜಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಬಹುತೇಕ ಅಭ್ಯರ್ಥಿಗಳು ಬೇರೆ ಬೇರೆ ಪಕ್ಷದ ವಲಸೆ ಹೋಗುವ ಸಾಧ್ಯತೆ ಕೂಡ ತಳ್ಳಿ  ಹಾಕುವಂತಿಲ್ಲ . ವಾರ್ಡ್ ನಂಬರ್ 05 ರಲ್ಲಿ ಭಾರಿ  ತ್ರಿಕೋನ ಸ್ಪರ್ಧೆ ಮತ್ತೆ  ಆಗುವುದು  ನಿಚ್ಚಳ ಲಕ್ಷಣಗಳು ಗೋಚರಿಸುತ್ತಿವೆ. ಹಾಗಾಗಿ ಹಾಲಿ  ಗೆದ್ದ ಬಿಜೆಪಿ ಅಭ್ಯರ್ಥಿ ಸ್ಪರ್ಧೆಗೆ ಇಳಿತಾರೋ  ಇಲ್ಲವೋ , ಕಾದು ನೋಡಬೇಕಾಗಿದೆ. ಅದರಂತೆ ಸೋತ ಕಾಂಗ್ರೆಸ್ ಅಭ್ಯರ್ಥಿ ಯು ತನ್ನ  ಸ್ಥಾನ ಭದ್ರಪಡಿಸಿಕೊಳ್ಳಲು ಏನೆಲ್ಲ ತಂತ್ರಗಳ ಮೊರೆ ಹೋಗಿದ್ದಾರೆ ಅನ್ನೋದು ಕೂಡ ಕಾದು ನೋಡಬೇಕಾಗಿದೆ . ಈ ಬಾರಿ ವಾರ್ಡ್ 05 ರಲ್ಲಿ  ಕಾಂಗ್ರೆಸ್ ಅಭ್ಯರ್ಥಿಗಳ ಸ್ಪರ್ಧೆಗೆ ತೀವ್ರ ಪೈಪೋಟಿಯಾಗಲಿದೆ .

  ಒಂದು ಅಂದಾಜಿನ ಪ್ರಕಾರ   ಅಭ್ಯರ್ಥಿಗಳ ಪಟ್ಟಿಯು ದೊಡ್ಡದಾಗಲಿದೆ ಎಂದು ಅಂದಾಜಿಸಲಾಗಿದೆ .ಏಕೆಂದರೆ ಈ ಬಾರಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಾಗೂ ಎಐಎಂಐಮ್ ಪಕ್ಷ  ಸ್ಪರ್ಧೆಯಲ್ಲಿ ಧುಮುಕುವ ಸಾಧ್ಯತೆ ಇದೆ. ಈ ಬಾರಿಯೂ ಭಾರಿ ಸ್ಪರ್ಧೆ ಏರ್ಪಡಿಲಿದೆ ಎನ್ನುವ ಮಾತುಗಳು ವ್ಯಾಪಕವಾಗಿದ್ದು, ವಾರ್ಡ್ ನಂಬರ್ 05 ರ ಚುನಾವಣೆ ಭಾರಿ ರೋಚಕ ವಾಗಲಿದೆ . ಅದಕ್ಕೆ ಕಾರಣಗಳು ಸಾಕಷ್ಟಿವೆ ಚುನಾವಣೆ ಹೊತ್ತಿಗೆ ಕಾರಣಗಳು ಬಹಿರಂಗವಾಗಲಿದ್ದು , ವೈಯಕ್ತಿಕ ಪ್ರತಿಷ್ಠೆಗಳು ವಿಜೃಂಭಿಸಿದೆ ಎನ್ನುವುದು ಸದ್ಯದ ಅಂದಾಜು. 
 ರಬಕವಿ ಬನಹಟ್ಟಿ ನಗರಸಭೆಯ ಆಡಳಿತ ಕ್ಷೇತ್ರಗಳಲ್ಲಿ ಚುನಾವಣೆ ಹುಟ್ಟಿಕೊಂಡಿದೆ . ಈ ವಾರ್ಡಿನ ಕ್ಷೇತ್ರದ ಹಾಲಿ ಮತ್ತು ಮಾಜಿ ಅಭ್ಯರ್ಥಿಗಳು ಸೇರಿದಂತೆ ಪ್ರತಿಷ್ಠಿತರ ನಡುವೆ ರಾಜಕೀಯ ಬಲಾಬಲ ವರೆಗಟ್ಟುವ ಅಖಾಡ ನಿರ್ಮಾಣವಾಗಲಿದೆ.

 ಒಟ್ಟಾರೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯ ಸ್ಥಳೀಯ ಚುನಾವಣೆಯ ಚಟುವಟಿಕೆಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಹಾಲಿ ಅಭ್ಯರ್ಥಿಗಳ ಎದೆ ಬಡಿತ ಆರಂಭಗೊಂಡಿದೆ. ಈ ಚುನಾವಣೆ ರಾಜಕೀಯ ವಲಯದಲ್ಲೂ ಸಾಕಷ್ಟು ಕುತೂಹಲವನ್ನು, ಹುಟ್ಟು ಹಾಕಿದೆ .

 ವರದಿ : 
ಮಹಿಬೂಬ್ ಎಂ ಬಾರಿಗಡ್ಡಿ

Saturday, June 7, 2025

ಈದಗಾ ಮೈದಾನದಲ್ಲಿ ಹಬ್ಬದ ಸಡಗರ ಜೊತೆಗೆ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಪಿ ಯು ಕಾಲೇಜ್ ಗೆ ಮನವಿ ಸಲ್ಲಿಸಿದ ನಗರದ ಮುಸ್ಲಿಂ ಬಾಂಧವರು ...

ಸಂಭ್ರಮ ಸಡಗರದಿಂದ ಬನಹಟ್ಟಿ   ನಗರದಲ್ಲಿ ಬಕ್ರೀದ್ ಹಬ್ಬ  ಆಚರಣೆ   : 

 ಈದಗಾ ಮೈದಾನದಲ್ಲಿ ಹಬ್ಬದ  ಸಡಗರ  ಜೊತೆಗೆ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಪಿ ಯು ಕಾಲೇಜ್ ಗೆ ಮನವಿ ಸಲ್ಲಿಸಿದ ನಗರದ ಮುಸ್ಲಿಂ ಬಾಂಧವರು ...

ಬಾಗಲಕೋಟೆ / 

ರಬಕವಿ - ಬನಹಟ್ಟಿ : ತ್ಯಾಗ ಬಲಿದಾನಗಳ ಸಾಂಕೇತಿಕ ಹಬ್ಬವಾದ ಬಕ್ರೀದ್ ಹಬ್ಬ ಇಸ್ಲಾಂ ಧರ್ಮದಲ್ಲಿ ಸಾವಿರಾರು ವರ್ಷಗಳಿಂದ ಪ್ರಾಣಿಗಳನ್ನು ಬಲಿ ಕೊಡುವಂತ ಪದ್ಧತಿ ಜಾರಿಯಲ್ಲಿದೆ . ಅಲ್ಲಾಹನು ತನ್ನ ಪ್ರೀತಿಯ ಪೈಗಂಬರರಾದ ಈಬ್ರಾಹಿಂ ಅಲೈ ಸಲಾಂ ಅವರ ಮನಸ್ಸು ನೋಡಲು ಬಹಳ ವರ್ಷಗಳ ನಂತರ ನಿನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವನ್ನೇ ನನ್ನ ಭಕ್ತಿಯ ಪ್ರೀತಿಗೆ ಬಲಿ ಕೊಡ್ತೀಯಾ ? ಎಂದು ಹೇಳಿದಾಗ ಆಗ  ಬಹಳ ವರ್ಷಗಳ ನಂತರ ಒಂದು ಗಂಡು ಮಗುವಾಗಿ ಪಡೆದ ಇಬ್ರಾಹಿಂ ಪೈಗಂಬರ ಅವರ ಮಗನಾದ ಇಸ್ಮಾಯಿಲ್ ಅಲೈ ಸಲಾಂ ನನ್ನು ಅಲ್ಲಾಹನ ಆಜ್ಞೆಯ ಪ್ರಕಾರ ಅವರನ್ನು ಬಲಿಯನ್ನಾಗಿ ಕೊಡಲು ತನ್ನ ಚೂಪಾದ ಚೂರಿಯಿಂದ ಮಗನ ಬಲಿ ಕೊಡಲು ಸಿದ್ಧವಾದಾಗ ಅಲ್ಲಾಹನು ಸ್ವರ್ಗದಿಂದ ಒಂದು ಕುರಿಯನ್ನು ಪ್ರತ್ಯಕ್ಷ ಮಾಡಿಸಿ   ಓ ನನ್ನ ಪೈಗಂಬರರೇ ನೀನು ನನ್ನ ಭಕ್ತಿಗೆ ಮೆಚ್ಚುಗೆವನ್ನಾಗಿಸಿದ್ದೀರಿ ಆದ್ದರಿಂದ ಇದರ ಬದಲಾಗಿ ಈ ಕುರಿಯನ್ನು ಬಲಿ ಕೊಟ್ಟು ನನ್ನ ಆಜ್ಞೆಯ ಪಾಲಿಸುವಂತೆ ಹೇಳಿದಾಗ   ಪೈಗಂಬರರು ತನ್ನ ಮಗನನ್ನು ತೆಗೆದು ಕುರಿಯನ್ನು ಬಲಿಯನ್ನಾಗಿ ಕೊಟ್ಟರು    ಆದ್ದರಿಂದ ಆಗಿನ ಕಾಲದಿಂದ ಇವತ್ತಿನವರೆಗೆ ಕುರಿ ಬಕ್ರ  ಮುಂತಾದ ಪ್ರಾಣಿಗಳನ್ನು ಬಲಿಯ  ಪದ್ಧತಿಯಾಗಿ ಜಾರಿಯಾಯಿತು . 

  ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನಾ ಹಮೀ ರಮಜಾ ,    ನಾವುಗಳು ಯಾವುದೇ ಧಾರ್ಮಿಕ ಕಾರ್ಯಗಳನ್ನು ಮಾಡಿದರೆ ಕೇವಲ ಅಲ್ಲಾಹನ ಮೆಚ್ಚುಗೆಗಾಗಿ ಮಾಡಬೇಕು ಹೊರತು ನಮ್ಮ ದೊಡ್ಡ ಸ್ಥಿಕೆಯನ್ನು ತೋರಿಸಲಿಕ್ಕೆ ಮಾಡಬಾರದು  . ಜೊತೆಗೆ ನಾವುಗಳು ದುಶ್ಚಟಗಳನ್ನು ಕೂಡ ತ್ಯಾಗವನ್ನು ಮಾಡಬೇಕು ಎಂದು ಹೇಳಿದರು.

 ಇದೇ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಸದಸ್ಯರಾದ ಬಸವರಾಜ ಕೊಕಟ್ನೂರ್ ಇವರಿಗೆ ನಗರದ ಮುಸ್ಲಿಂ ಸಮಾಜ ವತಿಯಿಂದ   ಅಬುಲ್ ಕಲಾಂ ಆಜಾದ್ ಪಿಯು ಕಾಲೇಜಿಗೆ ಮನವಿ ಸಲ್ಲಿಸಿದರು.

 ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. 
 
 ವರದಿ ಮಹಿಬೂಬ ಎಂ ಬಾರಿಗಡ್ಡಿ