Tuesday, January 11, 2022

ಹಾಸನ್ ಜಿಲ್ಲಾಸುದ್ದಿ ಕಲಾಂ ಎಕ್ಸ ಪ್ರೆಸ್ ನಲ್ಲಿ


ಅರಸೀಕೆರೆ : ಚಂಪಾ ಎಂದೇ ಪ್ರಖ್ಯಾತರಾಗಿದ್ದ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್ ಅವರು ನಿಧನರಾಗಿರುವುದು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಹೇಮಂತ್‌ ಕುಮಾರ್‌ ಹೇಳಿದರು . 

ನಗರದ ಪಿ.ಪಿ. ವೃತ್ತದಲ್ಲಿ ಕರವೇ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು , ಕನ್ನಡ ಸಾಹಿತ್ಯ ಪರಿಷತ್ತ್ ಕನ್ನಡ ಅಭಿವೃದ್ಧಿ ಪ್ರಾದ್ದಿಕಾರ ಅಧ್ಯಕ್ಷರಾಗಿ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಕನ್ನಡ ಕಟ್ಟು ಕೆಲಸಗಳನ್ನು ಮಾಡಿದ್ದರು . ಗೋಕಾಕ್ ಚಳವಳಿಯಲ್ಲಿಯೂ ಮುಂಚೂಣಿಯಲ್ಲಿ ಕೆಲಸ ಮಾಡಿದ್ದ ಚಂಪಾ ಅವರು ಕನ್ನಡಕ್ಕೆ ಎಲ್ಲಿಯೇ ಅನ್ಯಾಯವಾದರೂ ಧ್ವನಿ ಎತ್ತುತ್ತಿದ್ದರು .ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಾಗಿ, ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾಸಮಿತಿಯ ಸಕ್ರೀಯ ಸದಸ್ಯರಾಗಿ ಕರವೇ ಹಿತೈಷಿಗಳಾಗಿದರು ಕನ್ನಡ ನಾಡು-ನುಡಿ, ಸಂಸ್ಕೃತಿಯ ರಕ್ಷಣೆಗಾಗಿ ನಿರಂತರ ಹೋರಾಡುತ್ತಾ ಬಂದಿರುವ ಚಂಪಾರವರಿಗೆ ಬಂದಿರುವ ಪ್ರಶಸ್ತಿ ಗೌರವಗಳು ಹಲವಾರು ಇವರ ಅಗಲಿಕೆ ಈ ನಾಡಿಗೆ ತುಂಬಲಗದ ನಷ್ಟವಾಗಿದೆ ಎಂದರು

ನಗರಾಧ್ಯಕ್ಷ ಕಿರಣ್‌ಕುಮಾರ್‌ ಮಾತನಾಡಿ , ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವ ಮೂಲಕ ಕನ್ನಡ ವಿಮರ್ಶಾ ಕ್ಷೇತ್ರ , ನಾಟಕ ರಚನೆಯಲ್ಲಿ ಪ್ರಸಿದ್ಧರಾಗಿದ್ದರು ಚಂದ್ರಶೇಖರ ಪಾಟೀಲ್‌ರವರು , ಅವರು ರಚಿಸಿದ ನಾಟಕಗಳು ದೇಶ ಸೇರಿದಂತೆ ವಿದೇಶಗಳಲ್ಲಿಯೂ ಪ್ರದರ್ಶಿತವಾಗಿವೆ . ಸುದೀರ್ಘ ಅವಧಿ ಸಂಕ್ರಮಣ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ ಎಂದರು . ಜಿಲ್ಲಾ ಉಪಾಧ್ಯಕ್ಷ ತುಳಸಿದಾಸ್ , ಕಾರ್ಯದರ್ಶಿ ರವಿಶಂಕರ್ , ಚಂದ್ರಶೇಖರ್ ಯಾದವ್ , ರೋಷನ್ , ಸಂತೋಷ್ , ಮೊಹಿದ್ದೀನ್‌ಪಾಷ , ಮಲ್ಲಿಕ್ , ರಕ್ಷಿತ್ , ಅರುಣ್ , ಪ್ರಸನ್ನ , ಕೋಡಿಹಳ್ಳಿ ಲೋಕೇಶ್ ಉಪಸ್ಥಿತರಿದ್ದರು .


Kalaam Express news

ವರದಿ : 
ಪರ್ವೀಜ್ ಅಹಮದ್
ಅರಸೀಕೆರೆ
ಹಾಸನ ಜಿಲ್ಲೆ   

No comments:

Post a Comment