Saturday, January 29, 2022

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೇರ್ದಾಳ್ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾಗಿ ಪರಶುರಾಮ ಮೇತ್ರಿ ಆಯ್ಕೆ

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೇರ್ದಾಳ್ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾಗಿ ಪರಶುರಾಮ ಮೇತ್ರಿ ಆಯ್ಕೆ

ಎಸ್‍ಡಿಪಿಐ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಇಂದು ನಡೆದ ಪಕ್ಷದ ತೇರ್ದಾಳ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಸಭೆಯಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ನೂತನ ವಿಧಾನಸಭಾ ಕ್ಷೇತ್ರ ಸಮಿತಿಯ ಘೋಷಣೆ ಮಾಡಿದರು. 
ಅಧ್ಯಕ್ಷರು : ಪರಶುರಾಮ್ ಮೇತ್ರಿ
ಉಪಾಧ್ಯಕ್ಷರು: ಮುಬಾರಕ್ ಎಕ್ಸಾಂಬಿ
ಕಾರ್ಯದರ್ಶಿ : ಉಮರ್ ಫಾರೂಕ್ ಖಾಲೆಖಾನ್
ಜೂತೆ ಕಾರ್ಯದರ್ಶಿ : ಯಾಸೀನ್ ಬೆಲೆಗೆರೆ
ಖಜಾಂಚಿ : ಸಿರಾಜುದ್ದೀನ್
ಸದಸ್ಯರುಗಳಾಗಿ : ಜಯರಾಮ್ ಘಶ್ತಿ, ಮಹಾಲಿಂಗಪ್ಪ ಭಜಂತ್ರಿ, ಬೀಮ್ ಶಿ ಮಾವಿನಹಿಂಡಿ, ಹುಸೇನ್ ಉಕ್ಲಿ, ರಿಯಾಝ್ ನದಾಫ್, ಭಾಷಾ ಬಿಸ್ತಿ ಆಯ್ಕೆಯಾಗಿದ್ದಾರೆ. 
ಸಮಿತಿ ಘೋಷಣೆ ಮಾಡಿ ಮಾತನಾಡಿದ ಅಪ್ಸರ್ ಕೊಡ್ಲಿಪೇಟೆ ಪಕ್ಷವು ಕಳೆದ ಹನ್ನೆರಡು ವರ್ಷಗಳಿಂದ ತಳ ಸಮುದಾಯಗಳಲ್ಲಿ ರಾಜಕೀಯ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದ್ದು ಸುಮಾರು 300 ರಷ್ಟು ಜನ ಪ್ರತಿನಿಧಿಗಳು ಚುನಾಯಿತರಾಗಿ ಜನರ ಪ್ರತಿನಿಧಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಸಂವಿಧಾನದ ಆಶಯಗಳನ್ನು ಅನುಷ್ಠಾನ ಮಾಡಲು ಯುವ ಜನಾಂಗ ಹೋರಾಟ ಮಾಡಬೇಕು. ರಾಜಕೀಯ ಲಾಭಕ್ಕಾಗಿ  ಜನರನ್ನು ಧರ್ಮ , ಜಾತಿ ಮತ್ತು ಭಾಷೆಯ ಹೆಸರಿನಲ್ಲಿ  ವಿಭಜಿಸುವ  ಕೆಲಸ ಜೋರಾಗಿ ನಡೆಯುತ್ತಿದೆ , ಸಂಘ ಪರಿವಾರದ ಈ ಸಮಾಜ ವಿರೋಧಿ ಸಂಚನ್ನು ಎಲ್ಲರೂ ಒಂದಾಗಿ ಸೋಲಿಸ ಬೇಕಾಗಿದೆ. ಸಂವಿಧಾನ ಸಂರಕ್ಷಣೆ ಮತ್ತು ಅದರ ಆಶಯ ಅನುಷ್ಠಾನಕ್ಕಾಗಿ ಎಸ್ ಡಿ ಪಿ ಐ ನಡೆಸುವ ಎಲ್ಲಾ ಜನಪರ ಹೋರಾಟಗಳಿಗೆ ಜನಸಾಮಾನ್ಯರು ಕೈ ಜೋಡಿಸಬೇಕು ಎಂದು ಕರೆ ನೀಡಿದರು.           
ವೇದಿಕೆಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ಸಲೀಂ ಅಹಮದ್, ಜಿಲ್ಲಾಧ್ಯಕ್ಷರಾದ ಸಲೀಂ,ಜಿಲ್ಲಾ ಉಪಾಧ್ಯಕ್ಷರಾದ ಶ್ರೀನಾಥ್ ನವನಿ, ಯಮನಪ್ಪ ಗುಣದಾಳ ಮೊದಲಾದವರು ಉಪಸ್ಥಿತರಿದ್ದರು .

No comments:

Post a Comment