ಆಮ್ ಆದ್ಮಿ ಪಕ್ಷ ತೆರೆದಾಳ ಮತಕ್ಷೇತ್ರದಲ್ಲಿ ಗ್ರಾಮ ಸಂಪರ್ಕ ಅಭಿಯಾನ ಹಾಗೂ ಕಾರ್ಯಕರ್ತರ ಸಭೆ
ಬಾಗಲಕೋಟ ಜಿಲ್ಲೆಯ ತೇರದಾಳ ಮತಕ್ಷೇತ್ರದ ಮಹಾಲಿಂಗಪುರ್ ನಗರದ ಶ್ರೀ ಚೆನ್ನಶ್ವರ ಕಲ್ಯಾಣ ಮಂಟಪದಲ್ಲಿ ಆಮ್ ಆದ್ಮಿ ಪಕ್ಷದ ಗ್ರಾಮ ಸಂಪರ್ಕ ಅಭಿಯಾನ ಮತ್ತು ಕಾರ್ಯಕರ್ತರ ಸಭೆ ನಡೆಯಿತು
ಇದೇ ಸಂದರ್ಭದಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ , ರಮೇಶ್ ಬದನೂರ ಈ ದೇಶಕ್ಕೆ ಭ್ರಷ್ಟಾಚಾರ ಅನ್ನುವುದು ಒಂದು ದೊಡ್ಡ ಕ್ಯಾನ್ಸರ್ ಇದ್ದಹಾಗೆ , ದೇಶ ಭ್ರಷ್ಟಾಚಾರದಿಂದ ತುಂಬಿತುಳುಕುತ್ತಿದ. ಭ್ರಷ್ಟಾಚಾರವನ್ನು ಹೋಗಲಾಡಿಸಬೇಕಾದರೆ ಯುವಕರೆಲ್ಲರೂ ಒಂದಾಗಬೇಕು .ಪಕ್ಷದಲ್ಲಿ ಯಾವುದೇ ಜಾತಿ ರಾಜಕಾರಣ ಹಾಗೂ ಕುಟುಂಬ ರಾಜಕಾರಣ ಇರುವುದಿಲ್ಲ ಎಂದು ಹೇಳಿದರು .
ಸುದ್ದಿಗಾರರ ಜೊತೆ ಮಾತನಾಡಿದ ಅವರು ,ಆಮ್ ಆದ್ಮಿ ಪಕ್ಷವು ದೇಶದಲ್ಲಿ ಜನಸೇವೆ ಮಾಡ್ತಾಯಿದೆ ಹೊರತು ರಾಜಕಾರಣವಲ್ಲ, ದೆಹಲಿ ಮತ್ತು ಪಂಜಾಬದಲ್ಲಿ ಜನರು ಸರ್ಕಾರದ ಸೇವೆಗಳನ್ನು ಪಡೆಯುತ್ತಿದ್ದಾರೆಯೋ ಅದನ್ನೇ ಆಮ್ ಆದ್ಮಿ ಪಕ್ಷ ಅಧಿಕಾರದಲ್ಲಿ ಬಂದನಂತರ ಕರ್ನಾಟಕದ ಜನರಿಗೆ ಕೊಡಬೇಕು ಅನ್ನುವುದು ಮುಖ್ಯ ಉದ್ದೇಶವಾಗಿದೆ , ಎಂದು ಹೇಳಿದರು .
ಇದೇ ಸಂದರ್ಭದಲ್ಲಿ ತೇರದಾಳ ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಆಕಾಂಕ್ಷಿ ಅರ್ಜುನ್ ಹಲಗಿ ಗೌಡರ ಮಾತನಾಡಿ ಒಂದು ವೇಳೆ ನನ್ನನ್ನು ಮತ ಕ್ಷೇತ್ರದ ಶಾಸಕ ಮಾಡಿದರೆ ಶಾಸಕರಿಗೆ ಬರುವಂತ ಸಂಬಳ 2 ,ಲಕ್ಷ 5000 ರೂಪಾಯಿಗಳನ್ನು ಅತಿ ಕಡುಬಡವ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ನಾನು ಕೊಡುತ್ತೇನೆ ಎಂದು ಹೇಳಿದರು .
ಇದೇ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ತೇರದಾಳ ಮತಕ್ಷೇತ್ರದ ಅಧ್ಯಕ್ಷ ಶಂಕರ್ ಹುಕ್ಕೇರಿ ಹಾಗೂ ಆಮ್ ಆದ್ಮಿ ಪಕ್ಷದ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ , ಬಾಬು ಶೇಕ್ , ಇನ್ನೂ ಅನೇಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು .
KALAAM EXPRESS NEWS
TERDAL ZONE
BAGALKOTE
No comments:
Post a Comment