Sunday, February 5, 2023

ಪಠಾಣ್' ಸಿನೆಮಾ ಬಾಯ್ಕಾಟ್ ಮಾಡಿದ್ದರ ಘೋರ ಪರಿಣಾಮಗಳು:

' *ಪಠಾಣ್' ಸಿನೆಮಾ ಬಾಯ್ಕಾಟ್ ಮಾಡಿದ್ದರ ಘೋರ ಪರಿಣಾಮಗಳು:* 

ವಿಶ್ವದಾದ್ಯಂತ 300 ಸ್ಕ್ರೀನ್‍ಗಳನ್ನು ಹೊಸದಾಗಿ ಸೇರಿಸಬೇಕಾಯ್ತು. ಹಾಗಾಗಿ ಪಠಾಣ್ ವಿಶ್ವದಾದ್ಯಂತ ಒಟ್ಟು 8000 ಸ್ಕ್ರೀನ್‍ಗಳಲ್ಲಿ ಬಿಡುಗಡೆಯಾಗಿ, ಅತೀ ಹೆಚ್ಚು ಸ್ಕ್ರೀನ್‍ಗಳಲ್ಲಿ ಬಿಡುಗಡೆಯಾದ ಹಿಂದಿ ಸಿನೆಮಾ ಎನ್ನುವ ಹೆಗ್ಗಳಿಕೆ ಪಡೆಯಿತು . 

ಜನರ ಬೇಡಿಕೆ ಎಷ್ಟಿದೆಯೆಂದರೆ ಸಿನಿಮಾ ಥಿಯೇಟರ್ ಗಳು ಸಾಕಾಗದೆ, ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಮುಚ್ಚಿಹೋಗಿದ್ದ 25ಕ್ಕೂ ಹೆಚ್ಚು ಸಿಂಗಲ್ ಪರದೆಯ ಸ್ಕ್ರೀನ್ ಸಿನಿಮಾ ಹಾಲ್ ಗಳನ್ನು  ತೆರೆದು , ಪಠಾಣ್  ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿದೆ .

ಇದೇ ಮೊಟ್ಟ ಮೊದಲ ಬಾರಿ ಶಾರೂಖ್ ಖಾನ್ ಸಿನೆಮಾವೊಂದು ಬೆಳಗ್ಗೆ 6 ಗಂಟೆಗೆ ಪ್ರದರ್ಶಿಸಲ್ಪಡುತ್ತಿದೆ

ಇವತ್ತು ಚಿತ್ರ ಬಿಡುಗಡೆಯಾಗಿ ಹತ್ತು ದಿನಗಳ ಕಳೆದರೂ ,  ಜನರ ನೂಕುನುಗ್ಗಲು ನಿಲ್ಲದಿರುವುದರಿಂದ ಇದೀಗ ದೇಶದೆಲ್ಲೆಡೆ ಅನೇಕ ಸ್ಕ್ರೀನ್‍ಗಳು ಶೋ ಸೇರಿಸಿದ್ದಾರೆ .

 ಸುಮಾರು ಲಕ್ಷ ಮುಂಗಡ ಟಿಕೇಟ್ ಬಿಕರಿಯಾಗಿದ್ದು, ಹಿಂದಿ ಸಿನೆಮಾ ಮಟ್ಟಿಗೆ ಇದು ಇನ್ನೊಂದು ದಾಖಲೆ .

ಇನ್ನು ಬಾಯ್ ಕಟ್ ಗ್ಯಾಂಗ್ ಭಕ್ತರ ಬಹು ದೊಡ್ಡ ಬೇಡಿಕೆಯಂತೆ , ಬೇಷರಮ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿರುವ ಕೇಸರಿ ಬಿಕನಿಯ ದೃಶ್ಯಕ್ಕೆ ಒಂಚೂರೂ ಕತ್ತರಿ ಹಾಕದೇ , ಪಠಾಣ್ ಬಿಡುಗಡೆಯಾಗಿದೆ.

ಅಂದಹಾಗೆ ಇದೇ ಮೊದಲಬಾರಿ ಶಾರೂಖ್ ಖಾನ್ ತನ್ನ ಚಲನಚಿತ್ರವೊಂದನ್ನು ಎಲ್ಲೂ ಪ್ರಮೋಷನ್ , ಪ್ರಚಾರ ಮಾಡಿಲ್ಲ. ಕಪಿಲ್ ಶರ್ಮಾ ಶೋ, ಬಿಗ್‍ ಬಾಸ್ ಅಥವಾ ಇನ್ನೆಲ್ಲೂ ಕಿಂಗ್ ಖಾನ್ ಪಠಾಣ್ ಚಿತ್ರವನ್ನು ಪ್ರಚಾರ ಮಾಡಿಯೇ ಇಲ್ಲ , ಸಿನೆಮಾ ಪ್ರಚಾರದ ಸಂಪೂರ್ಣ ಜವಾಬ್ದಾರಿಯನ್ನು ದಳ, ಸೇನೆ ಹಾಗೂ ಬಾಯ್ಕೋಟ್ ಗ್ಯಾಂಗ್ಸ್ ಭಕ್ತರು ವಹಿಸಿಕೊಂಡ ಕಾರಣ ಪಠಾಣ್ ಸೂಪರ್ ಡೂಪರ್ ಹಿಟ್ ಆಗಿದೆಯೆಂತೆ ,

ನೆರೆಯ ಜಮಖಂಡಿ ನಗರದಲ್ಲಿ ಹಾಗೂ ಬಾಗಲಕೋಟೆ ಜಿಲ್ಲೆಯ ಹಲವಾರು  ಕೇಂದ್ರಗಳಲ್ಲಿ ಪ್ರದರ್ಶನಗೊಂಡ ಚಲನಚಿತ್ರ ಪಠಾನ್ , ರಬಕವಿ ಬನಹಟ್ಟಿಯಲ್ಲಿ ಪ್ರದರ್ಶನಗೊಳ್ಳದೆ , ಥಿಯೇಟರ್ ಮಾಲೀಕರಿಗೆ ಹಾಗೂ  ಶಾರುಖ್ ಖಾನ್  ಫ್ಯಾನ್ಸ್ ಗಳಿಗೆ ನಿರಾಶೆ ಉಂಟು ಮಾಡಿದೆ . 

ವಿಶ್ವದ್ಯಂತ  10 ದಿನಗಳಲ್ಲಿ 700 ಕೋಟಿ ಗಳಿಸಿ ವಿಶ್ವ ದಾಖಲೆ ಮಾಡಿದ ಬಾಲಿವುಡ್ ಹಿಂದಿ ಚಲನಚಿತ್ರ ಪಟಾನ್ , ರಬಕವಿ ಬನಹಟ್ಟಿ ನಗರಗಳ ಸಿನಿಮಾ ಹಾಲಗಳಲ್ಲಿ  ಯಾವಾಗ ಪ್ರದರ್ಶನ ಗೊಳ್ಳುತ್ತೆ ಕಾದು ನೋಡಬೇಕು .

 *ಒಟ್ಟಾರೆಯಾಗಿ ಹೇಳುವುದಾದರೆ ಭಕ್ತರು ಪಠಾಣ್ ಬಾಯ್ಕಾಟ್ ಮಾಡಿರುವುದರಿಂದ ಈ ಚಿತ್ರದ ಮೇಲೆ ಬಹಳ ದೊಡ್ಡ ಪರಿಣಾಮ  ಬೀರಿದೆ .* 


 *ಲೇಖನ : ಮಹಿಬೂಬ ಎಂ ಬಾರಿಗಡ್ಡಿ
ಕಲಾಂ ಎಕ್ಸ್ ಪ್ರೆಸ್ ನ್ಯೂಸ್*

No comments:

Post a Comment