*ಅತಿಯಾದ ಧಾರ್ಮಿಕತೆಯಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಹಿಂದುಳಿದ ಮುಸ್ಲಿಂ ಸಮುದಾಯ*
ಧರ್ಮ ಹಾಗೂ ಜಾತಿಯನ್ನು ದೇಶ ಮತ್ತು ರಾಜ್ಯದಲ್ಲಿ ಒಳ್ಳೆಯ ಹೆಸರು ಮಾಡಬೇಕಾದರೆ ಪ್ರತಿಯೊಂದು ಕ್ಷೇತ್ರದಲ್ಲಿ ಇರುವುದು ಅನಿವಾರ್ಯ , ಮುಸ್ಲಿಂ ಸಮುದಾಯ ಕೇವಲ ಧರ್ಮಾನುಸಾರ ನಡೆದರೆ ಸಾಲದು ,ಧರ್ಮದ ಉದ್ದೇಶ ,ನಡವಳಿಕೆ ಹಾಗೂ ಸರ್ಗದ ಕಡೆ ನಮ್ಮ ದೃಷ್ಟಿ ಇರಲಿ ಇರಲೇಬೇಕು ಇಲ್ಲದಿದ್ದಲ್ಲಿ ನಾವು ನಾಸ್ತಿಕರ ಆಗುವವರಲ್ಲಿ ಸಂಶವೇ ಇರಲ್ಲ , ಆದ್ದರಿಂದ ಧರ್ಮದ ಬೋಧನೆ ಎಷ್ಟು ಮಟ್ಟಿಗೆ ಸೀಮಿತ ಇರಬೇಕು ಎಂದರೆ ಜಗತ್ತಿನಲ್ಲಿ ಸಮಾಜ ಹಾಗೂ ಧರ್ಮವನ್ನು ಮುನ್ನಡೆಸಿಕೊಂಡು ಹೋಗುವದರಲ್ಲಿ ಧರ್ಮ ಯಾವತ್ತು ಅಡ್ಡಿಯಾಗಬಾರದು ,.
ಮುಸ್ಲಿಂ ಸಮುದಾಯ ಕೇವಲ ತಮ್ಮ ಧಾರ್ಮಿಕ ಬೋಧನೆ ಅಷ್ಟೇ ಮಾಡಿ ಎಂದು ಯಾರೂ ಸೂಪಿ ಸಂತರು ಸಹಬಾ ಪೈಗಂಬರಗಳು ಯಾವತ್ತೂ ಕೂಡ ಹೇಳಲಿಲ್ಲ ,ಜೊತೆಗೆ ಜಗತ್ತಿನ ಎಲ್ಲ ಸಮುದಾಯದ ಪ್ರೀತಿ ವಿಶ್ವಾಸ ಅವರ ಧರ್ಮಗಳ ಜೊತೆಗೆ ಅನನ್ಯವಾಗಿ ಇರಬೇಕು ಎಂದು ಹೇಳಿಕೊಟ್ಟಿದ್ದಾರೆ ,ಆದರೆ ಅತಿಯಾದ ಧಾರ್ಮಿಕತೆಯನ್ನು ಮುಸ್ಲಿಮರು ಅಳವಡಿಸಿಕೊಂಡಿದ್ದಕ್ಕೆ , ಇಂದು ಭಾರತ ದೇಶದಲ್ಲಿ ಮುಸ್ಲಿಮರ ಮೇಲೆ ಇಷ್ಟೆಲ್ಲಾ ದಬ್ಬಾಳಿಕೆ ಹಾಗೂ ಅನಾಹುತಗಳು ಆಗಲಿಕ್ಕೆ ಕಾರಣಗಳು ಆಗಿವೆ ,
ಒಂದು ಧರ್ಮ ಎಲ್ಲವನ್ನು ಕಲಿಸುತ್ತಿದೆ ಆದರೆ ಮುಸ್ಲಿಂ ಸಮುದಾಯ ಈ ಎಲ್ಲವನ್ನು ಕಲಿಯದೇ ,ಒಂದೇ ಒಂದು ಕಲಿಯುತ್ತವೆ ಅದುವೇ ಧಾರ್ಮಿಕ ಬೋಧನೆ ,
ಮುಸ್ಲಿಮರು ರಾಜಕೀಯ ಮಾಡಬಾರದು ,ಅದು ಮುಸ್ಲಿಮರ ಕೆಲಸವಲ್ಲ ,ಮುಸ್ಲಿಮರು ಕೇವಲ ಸ್ವರ್ಗದ ಕಡೆ ಹೇಗೆ ಹೋಗಬೇಕು ಅನ್ನುವಂತ ಗುರಿ ನಮ್ಮದಾಗಿರಬೇಕು ಹೊರತು, ಜಗತ್ತಿನ ಆಧುನಿಕ ಹಾಗೂ ಉನ್ನತಿಕರಣದ ಶಿಕ್ಷಣ ರಾಜಕೀಯ , ಹಾಗೂ ಆರ್ಥಿಕ ಸಮಸ್ಯೆಗಳ ಪರಿಹಾರ ಮಾಡುವುದಕ್ಕೋಸ್ಕರ ನಮ್ಮ ಗುರಿ ಇರಬಾರದು ಎಂದು ಧಾರ್ಮಿಕ ಬೋಧನೆಗಳಿಂದ ಕಲಿಯಲ್ಪಟ್ಟ ಮುಸ್ಲಿಂ ಸಮುದಾಯ , ಸ್ವಯಂ ಅವರೇ ಇವತ್ತಿನ ಈ ಪರಿಸ್ಥಿತಿಯಕೆ ಕಾರಣವಾಗಿದ್ದಾರೆ ಅನ್ನುವುದರಲ್ಲಿ ಎರಡು ಮಾತಿಲ್ಲ .
ಅತಿಯಾದ ಅಮೃತ ಕೂಡ ವಿಷವಾಗುತ್ತದೆ ಎಂದು ಗಾದೆ ಮಾತು ಕೂಡ ಕೇಳಿರಬಹುದು .ಅದರಂತೆನೆ ನಾವು ದಿನನಿತ್ಯ ಸಕ್ಕರೆಯನ್ನು ಅತಿಯಾಗಿ ಸೇವನೆ ಮಾಡುತ್ತಾ ಇದ್ದರೆ , ಒಂದು ದಿನ ನಮಗೆ ಸಕ್ಕರೆ ರೋಗ ಕೂಡ ಬರಬಹುದು ಅನ್ನುವುದರಲ್ಲಿ ಸಂಶವೇ ಇಲ್ಲ .
ಭಾರತೀಯ ಮುಸ್ಲಿಮರು ಅಷ್ಟೇ ರಾಜಕೀಯ ಹಾಗೂ ಆರ್ಥಿಕತೆಯಿಂದ ಬಹಳಷ್ಟು ಹಿಂದೆ ಉಳಿದಿದ್ದಾರೆ .ಜಗತ್ತಿನಲ್ಲಿ ಸಾಕಷ್ಟು ಮುಸ್ಲಿಂ ದೇಶಗಳಿವೆ ,ಆದರೆ ಭಾರತೀಯ ಮುಸ್ಲಿಮರಷ್ಟು ಧಾರ್ಮಿಕತೆ ಮತ್ತು ಜಾತಿಯನ್ನು ಅಳವಡಿಸಿಕೊಂಡಿಲ್ಲ ,ಮುಸ್ಲಿಮರ ದೇಶಗಳಲ್ಲಿ ಆಧುನಿಕ ಹಾಗೂ ಉನ್ನತೀಕರಣ ಶಿಕ್ಷಣ ಪಡೆಯುವುದಕ್ಕೆ ಅಲ್ಲಿನ ಜನರಿಗೆ ಯಾವುದೇ ಧಾರ್ಮಿಕತೆ ಅಡ್ಡಿಪಡಿಸಿಲ್ಲ ,ಅದಕ್ಕೇನೇ ಮುಸ್ಲಿಂ ದೇಶದ ಜನರ ಶ್ರೀಮಂತಿಕೆಗೆ ಬೇರೆ ದೇಶದ ಜನರು ಬೆರಗಾಗುತ್ತಾರೆ .
ಭಾರತೀಯ ಸಮುದಾಯದ ಧಾರ್ಮಿಕ ಬೋಧನೆ ಮಾಡುವಂತಹ ಶಿಕ್ಷಕರು ಧಾರ್ಮಿಕ ಬೋಧನೆ ಜೊತೆ ,ರಾಜ್ಯ ರಾಷ್ಟ್ರಮಟ್ಟದಲ್ಲಿ ರಾಜಕೀಯ ಶಿಕ್ಷಣದ ಬಗ್ಗೆ ಹಾಗೂ ನಮ್ಮ ದೇಶದ ಸಂವಿಧಾನದಲ್ಲಿ ನಮ್ಮ ಹಕ್ಕು ಮತ್ತು ಅದರ ರಕ್ಷಣೆ ಬಗ್ಗೆ , ಭಾರತದ ದೇಶಕ್ಕಾಗಿ ಮುಸ್ಲಿಂ ಸಮುದಾಯದ ಜನ ಪ್ರಾಣ ತ್ಯಾಗ ಮಾಡಿದ ,ನಮ್ಮ ಭಾರತ ದೇಶದ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟವರ ಮಾಹಿತಿಯನ್ನು ದಿನನಿತ್ಯ ಬೋಧನೆಯ ರೂಪದಲ್ಲಿ ಕೊಡಬೇಕು , ಧಾರ್ಮಿಕ ಬೋಧನೆ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಬರುವ ದಿನಮಾನಗಳಲ್ಲಿ ಕೇವಲ ಧಾರ್ಮಿಕ ಬೋಧನೆ ಕಲಿತು ಹಫೀಜ ಹಾಗೂ ಮೌಲ್ವಿಗಳಾಗಿ , ಜೊತೆಗೆ ದೇಶವನ್ನು ಮುನ್ನಡೆಸಿಕೊಂಡು ಹೋಗುವವರಂತವರಾಗಬೇಕು. ಆಗಲೇ ಭಾರತೀಯ ಮುಸ್ಲಿಂ ಸಮುದಾಯ ಅಭಿವೃದ್ಧಿಯಾಗಲಿಕ್ಕೆ ಸಾಧ್ಯ ಅನ್ನುವುದರಲ್ಲಿ ಎರಡು ಮಾತಿಲ್ಲ ,
ಮುಸ್ಲಿಂ ಸಮುದಾಯ ರಾಜಕೀಯದಲ್ಲಿ ಹಾಗೂ ಇತರ ಆಧುನಿಕ ಹಾಗೂ ಉನ್ನತೀಕರಣದ ಶಿಕ್ಷಣದಲ್ಲಿ ಬದಲಾವಣೆ ಕಾಣುವುದಿಲ್ಲವೋ ,ಆ ಸಮುದಾಯ ಎಂದು ಅಭಿವೃದ್ಧಿ ಕಾಣಲು ಅಸಾಧ್ಯ ಅಂತಲೇ ಹೇಳಬಹುದು .
ಮುಸ್ಲಿಂ ಸಮುದಾಯ ಯಾವ ರೀತಿ ರಾಜಕೀಯ ಮಾಡಬೇಕು ? ಯಾವ ರೀತಿ ತಮ್ಮ ಸಮಾಜದ ಹಣಕಾಸಿನ ಆರ್ಥಿಕತೆ ಹೆಚ್ಚೆಚ್ಚು ಮಾಡಿಕೊಳ್ಳಬೇಕು ,ನಮ್ಮ ಸಮುದಾಯ ಜಗತ್ತಿನ ಉನ್ನತಿಕರಣದ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಸಮುದಾಯದ ಹಾಗೂ ಸಮಾಜದ ಗುರಿ ಇರಬೇಕು ಅಂದರೇನೇ ರಾಜಕೀಯ ಹಾಗೂ ಆರ್ಥಿಕದ ಜೊತೆಗೆ ದೇಶವನ್ನು ಮುನ್ನಡೆಸಲಿಕ್ಕೆ ಸಹಾಯವಾಗಬಹುದು .ಎನ್ನುವುದರಲ್ಲಿ ಸಂಶಯವೇ ಇಲ್ಲ .
ಮುಸ್ಲಿಂ ಸಮುದಾಯದ ಅಂಜುಮನ್ ಸ್ಥಳೀಯ ಸಂಸ್ಥೆಗಳು , ಇತರೆ ಸಂಘ ಸಂಸ್ಥೆಗಳು , ಇವುಗಳನ್ನು ಹೇಗೆ ಮುನ್ನಡಿಸಿಕೊಂಡು ಹೋಗಬೇಕು ?. ಹಾಗೂ ಅವುಗಳ ರಕ್ಷಣೆ , ಪಾಲನೆ ,ನಿರ್ವಹಣೆ ,ಹೇಗೆ ಮಾಡಬೇಕು ? ಅನ್ನೋದು ಪರಿಜ್ಞಾನ ಕಡಿಮೆ ಇರುವುದರಿಂದ , ಹಾಗೂ ತಮ್ಮ ವೈಯಕ್ತಿಕ ತಮ್ಮ ಹುದ್ದೆಗಳ ಮೇಲೆ ಆಸೆಗಳು ಇಟ್ಟುಕೊಂಡಿದ್ದರಿಂದ , ಇಂದಿನ ಸಮುದಾಯದ ಆಗ ಹೋಗುವ ಲಾಭ ನಷ್ಟಗಳಿಗೆ ಸ್ವತಹ ಮುಸ್ಲಿಮರೆ ಕಾರಣವಾಗಿದ್ದಾರೆ ಎನ್ನುವುದರಲ್ಲಿ ,ಎರಡು ಮಾತಿಲ್ಲ ,
ಮುಸ್ಲಿಂ ಸಮುದಾಯದ ಧಾರ್ಮಿಕ ವಿದ್ವಾಂಸರು ,ಮೌಲ್ವಿಗಳು ,ಮುಫ್ತಿ ಗಳು , ಆಧುನಿಕರಣದ ಶಿಕ್ಷಣ ಹಾಗೂ ತಂತ್ರಜ್ಞಾನದ ಶಿಕ್ಷಣದ ಕಡೆ ,ಹಾಗೂ ರಾಜ್ಯ ಹಾಗೂ ರಾಷ್ಟ್ರಮಟ್ಟದ ರಾಜಕಾರಣದ ಕಡೆ ಹೆಚ್ಚು ವಾಲುವುದಿಲ್ಲವೋ , ಮುಸ್ಲಿಂ ಸಮುದಾಯ ಎಂದಿಗೂ ಅಭಿವೃದ್ಧಿ ಕಾಣಲು ಅಸಾಧ್ಯ ,
ಭಾರತ ದೇಶದ ಮುಸ್ಲಿಂ ಸಮುದಾಯ ಹಲವಾರು ಪಂಗಡಗಳಿಂದ ಹಂಚಿ ,ಹರಿದು ಹೋಗಿದ್ದರಿಂದ ಈಗಿನ ಪರಿಸ್ಥಿತಿಗೆ ಮುಸ್ಲಿಮರೇ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ .
ಲೇಖನ :
ಮಹೆಬೂಬ್ ಎಂ ಬಾರಿಗಡ್ಡಿ .
, ಹೊನ್ನನುಡಿ ದಿನಪತ್ರಿಕೆ ರಬಕವಿ ಬನಹಟ್ಟಿ ತಾಲೂಕ ವರದಿಗಾರರು
ಮೊಬೈಲ್ ನಂಬರ್ :
9448698786
9448593518
No comments:
Post a Comment