*ರಬಕವಿ ಬನಹಟ್ಟಿ*:
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಶ್ರೀ ಕಾಡಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ , ಕರ್ನಾಟಕ ನೇಕಾರ ಸೇವಾ ಸಂಘ ಇವರ ಆಶ್ರಯದಲ್ಲಿ ಸಭೆಯನ್ನು ನಿಯೋಜನೆ ಮಾಡಲಾಗಿತ್ತು .
ಕರ್ನಾಟಕ ಸರ್ಕಾರ 07-07-2024 ರಂದು ರಾಜ್ಯ ನೇಕಾರ ಒತ್ತಾಯದ ಮೇರೆಗೆ 10 ಹೆಚ್ ಪಿ ಉಚಿತ ವಿದ್ಯುತ್ ಘೋಷಣೆ ಮಾಡಿದ್ದರು ಘೋಷಣೆ ಮಾಡಿಯು ಸರ್ಕಾರ ಅನುಷ್ಠಾನ ತರುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ , ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘವು ಸರ್ಕಾರಕ್ಕೆ ಮನವರಿಕೆ ಮಾಡುವುದು ಗೋಸ್ಕರ , ಪತ್ರ ಅಭಿಯಾನ ಚಳುವಳಿ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ನೇಕಾರರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ತಿರ್ಕಿ ಹೇಳಿದರು .
ಪ್ರತಿಯೊಬ್ಬರೂ ಪತ್ರ ಅಭಿಯಾನ ಪ್ರಾರಂಭಿಸೋಣ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನೇಕಾರರನ್ನು ಹೋರಾಟಕ್ಕೆ ಜಾಗೃತಿ ಮೂಡಿಸುವ ಕೆಲಸವನ್ನು ಪ್ರಾರಂಭ ಮಾಡಿ , ಜಿಲ್ಲಾ ಮಟ್ಟದ ಸಭೆಯನ್ನು ಮಾಡಲಾಗುವುದು ಹಾಗೂ ದಿನಾಂಕ 18-08-2023 ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ನೇಕಾರರು ಮಾನಕಾಪೂರದಲ್ಲಿ ಸಭೆ ಸೇರಿ ಚರ್ಚಲಾಗುವುದು ನಾವುಗಳು ಕೂಡಾ ಸಭೆಗೆ ಭಾಗವಹಿಸಲಿದ್ದೆವೆ ಎಂದು ಹೇಳಿದರು .
ದಿ 27-08-2023 ರಂದು ರಬಕವಿ ಬನಹಟ್ಟಿಯಲ್ಲಿ ಬಾಗಲಕೋಟ ಜಿಲ್ಲೆ ಮತ್ತು ಬೆಳಗಾವಿ ವಿಜಯಪುರ ಜಿಲ್ಲೆಯ ನೇಕಾರರ ಬೃಹತ್ ಸಭೆಯನ್ನು , ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ವತಿಯಿಂದ ಕರೆಯಲು ನಿರ್ಧರಿಸಲಾಗಿದೆ ಈ ಸಭೆಯು ನಾಡಿನ ಲಕ್ಷಾಂತರ ಜನ ನೇಕಾರರ ಶಾಶ್ವತ ಪರಿಹಾರಕ್ಕಾಗಿ ಕಟ್ಟಕಡೆಯ ವ್ಯಕ್ತಿಗೂ ಸಮರ್ಪಕ ಸೌಲಭ್ಯಗಳು ದೊರೆಯಲಿ ಎನ್ನುವ ಉದ್ದೇಶವಾಗಿದೆ ಹಲವಾರು ವರ್ಷಗಳಿಂದ ನಮ್ಮೆಲ್ಲರ ಹೋರಾಟಗಳನ್ನು ಮುಂದಿಟ್ಟುಕೊಂಡು ಬೇರೆಯವರು ಕೆಲವಿಷ್ಟು ನಮ್ಮ ನಾಯಕರುಗಳು ಒಳಗೂಡಿ ತಮ್ಮ ಸ್ವಾರ್ಥ ಸಾಧನೆಗಾಗಿ ಅಧಿಕಾರದ ಹಾಗೂ ವ್ಯಾಪಾರೀಕರಣದ ಉದ್ಯಮಿಗಳಾಗುವ ದೃಷ್ಠಿ ಕೊನದಿಂದಾಗಿ ಪ್ರಾಮಾಣಿಕವಾದ ಹೋರಾಟಗಳನ್ನು ಹತ್ತಿಕ್ಕುವ ಹುನ್ನಾರವನ್ನು ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿವೆ . ಇದಕ್ಕೆ ಯಾವುದಕ್ಕೂ ಜಗ್ಗದೆ ನಿರಂತರ ಹೋರಾಟಗಳು ನೇಕಾರರ ಸ್ವಂತ ಬಸ್ ಚಾರ್ಜ್ ಹಾಗೂ ಊಟ ತಮ್ಮದೆ , ಸ್ವಂತ ಖರ್ಚಿನಲ್ಲಿ ಹೋರಾಟಗಳು ನಿರಂತರ ನಡೆಯುತ್ತಿವೆ ಎಂದು ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಹೇಳಿದರು .
ಇದೇ ಸಂದರ್ಭದಲ್ಲಿ ಸಂಗಪ್ಪ ಉದ್ಗಟ್ಟಿ ಲಕ್ಕಪ್ಪ ಪವಾರ್ ,ಆನಂದ್ ಜಗದಾಳ್ ,ಮಹದೇವ್ ನುಚ್ಚಿ, ಆನಂದ ಜೀರಗಾಳ ,ಆನಂದ್ ಬಾಣಕಾರ್ , ಅಶೋಕ್ ಕರಲಟ್ಟಿ , ಕಾಡು ಕೋಕಟ್ನೂರ್ , ಬಸು ಚಿಂಚಕಂಡಿ , ರಬಕವಿ ಬನಹಟ್ಟಿ ರಾಂಪುರ ಹೊಸೂರ್ ಆಸಂಗಿ ಹುನ್ನೂರ್ ಮಹಾಲಿಂಗಪುರ್ ತೆರದಾಳ ದ ನೂರಾರು ಜನ ನೇಕಾರರು ಭಾಗವಹಿಸಿದ್ದರು .
ವರದಿ :
No comments:
Post a Comment