ಭಾರಿ ಬಿಸಿಲಿಗೆ ತತ್ತರಿಸಿದ ಅವಳಿ ನಗರದ ಜನತೆ :

ಭಾರಿ ಬಿಸಿಲಿಗೆ ತತ್ತರಿಸಿದ ಅವಳಿ ನಗರದ ಜನತೆ :


 ಅವಳಿ ನಗರ ಎಂದು ಖ್ಯಾತವಾಗಿರುವ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ನಗರಗಳಲ್ಲಿ ಭಾರಿ ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದ್ದು , ಸೂರ್ಯ ಜನರ ತಲೆ ಸುಡುವುದರ ಜೊತೆಗೆ ಮೈ ಬೆವರು ಕೂಡ ಇಳಿಸುತ್ತಿದ್ದಾನೆ ಬೇಸಿಗೆಯ ಬಿಸಿ ಉಷ್ಣಾಂಶ ಭಾರಿ ಹೆಚ್ಚಳವಾಗಿರುವ ಹಿನ್ನೆಲೆ ಬೇಸುಗೆಯಿಂದ ದನ ಹಾರಿಸಿಕೊಳ್ಳಲು ತಂಪು ಪಾನಿ ಹಾಗೂ ಎಳೆನೀರಿಗೆ ಮೊರೆ ಹೋಗುತ್ತಿದ್ದಾರೆ ಆದ್ದರಿಂದ ತಂಪು ಪಾನಿ ಹಾಗೂ ಎಳನೀರಿನ ಬೇಡಿಕೆ ಹೆಚ್ಚಾಗುತ್ತಿದೆ . 

 ಜಮಖಂಡಿ ರಬಕವಿ ಬನಹಟ್ಟಿ ತೇರದಾಳ್ ಕಲ್ಲಿನ ಗುಡ್ ಇರುವಂತಹ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಬಿಸಿಲು ಜಾಸ್ತಿ ಅಂತಾನೆ ಹೇಳಬಹುದು . ಬೆಸುಗೆಕಾಲ ಬಂತಂದರೆ ಸಾಕು ಎಳೆ ನೀರಿನ ಕಡೆ ಜನರು ಮರೆ ಹೋಗುತ್ತಾರೆ . 

 ಭಾರಿ ಬಿಸಿಲಿನ ತಾಪಮಾನದ ನಡುವೆ ರಂಜಾನ್ ಉಪವಾಸ : ಇಸ್ಲಾಮಿನ ಪವಿತ್ರ ತಿಂಗಳು ರಂಜಾನ್ , ರಂಜಾನ್ ತಿಂಗಳು ಭಾರಿ ಬಿಸಿಲಿನ 
 ಉಪವಾಸ ರೋಜಾ ಆಚರಣೆ ಮಾಡುತ್ತಿರಲ್ಲ ಅಬ್ಬಬ್ಬಾ ನೀವುಗಳು ಭಾರಿ ಗಟ್ಟಿ ಎನ್ನುತ್ತಿದ್ದಾರೆ . 

 ಮನೆಯಿಂದ ಹೊರಗೆ ಹೋಗಲು ಹಿಂದೆಟು :

 ರಬಕವಿ ಬನಹಟ್ಟಿ ನಗರಗಳಲ್ಲಿ ಕಲ್ಲಿನ ಗುಡ್ಡ ಗಾಡು ಪ್ರದೇಶವಾಗಿರುವುದರಿಂದ ಇಲ್ಲಿನ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಗೆ ಏರುತ್ತಿದೆ .ಆದರಿಂದ ಜನರು ಬಿಸಿಲಿಗೆ ಹೆದರಿ ಮನೆಯಿಂದ ಆಚೆಗೆ ಹೋಗಲು ಹೆದರುತ್ತಿದ್ದಾರೆ . ಮಧ್ಯಾಹ್ನ 1 ಗಂಟೆ ನಂತರ ರಸ್ತೆಗಳು ಹಾಗೂ ಮಾರ್ಕೆಟ್ಗಳು ಬಿಕೋ ಎನ್ನುತ್ತಿರುತ್ತವೆ . ಹೆಚ್ಚುತ್ತಿರುವ ಬಿಸಿಲಿನ ಕಾವು ಜೊತೆಗೆ ನಡುವೆ ಲೋಕಸಭಾ ಚುನಾವಣೆಯ ಭಾರಿ ಕಾವು ಏರತೊಡಗಿದೆ. 

 ವರದಿ : 
ಮಹಿಬೂಬ್ ಎಂ ಬಾರಿಗಡ್ಡಿ 


 

Comments

Popular posts from this blog

ಬನಹಟ್ಟಿ ನಗರದಲ್ಲಿ ಎಸ್‌ಡಿಪಿಐ ವತಿಯಿಂದ ಎಸ್‌ಐಆರ್ ಜಾಗೃತಿ ಕಾರ್ಯಕ್ರಮ

ಸಚಿವ ಜಮೀರ ಅಹ್ಮದ ಖಾನ್ ಜನ್ಮ ದಿನಾಚರಣೆ ನಿಮಿತ್ಯ ಆಸ್ಪತ್ರೆ ರೋಗಿಗಳಿಗೆ ಹಾಲು ಹಣ್ಣು ವಿತರಣೆ :

ಬಿ ಜಡ್ ಜಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ನೀಡಲು ಮುಸ್ಲಿಂ ಸಮುದಾಯ ಅಗ್ರಹ