Friday, March 22, 2024

ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷರಾಗಿ ಶಫೀಕ್ ಎಂ ಬೇಪಾರಿ ನೇಮಕ*

*ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ  ಜಿಲ್ಲಾ ಅಧ್ಯಕ್ಷರಾಗಿ ಶಫೀಕ್ ಎಂ ಬೇಪಾರಿ ನೇಮಕ* 

 *ಬಾಗಲಕೋಟ್* : ಕರ್ನಾಟಕ ರಾಜ್ಯ ಸಮಾಜ  ಸೇವೆ ಪ್ರಶಸ್ತಿ ಪಡೆದ ಬಾಗಲಕೋಟೆ ಜಿಲ್ಲೆಯ ಮುಧೋಳ್ ನಗರದ ಶಫೀಕ್  ಎಂ ಬೇಪಾರಿ  ಅವರನ್ನು ,ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ಬಾಗಲಕೋಟೆ ಜಿಲ್ಲಾ ಅಧ್ಯಕ್ಷರಾಗಿ ,  ರಾಷ್ಟ್ರೀಯ ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷರಾದ  ಇಮ್ರಾನ್ ಪ್ರತಾಪ್ಗಡ ಅವರು ತಕ್ಷಣ ನೇಮಕವಾಗುವಂತೆ ಆದೇಶ ಹೊರಡಿಸಿದ್ದಾರೆ . 

ಮುಧೋಳ್ ನಗರದಲ್ಲಿ ಸಾಕಷ್ಟು ಸಮಾಜ ಸೇವೆಗಳಲ್ಲಿ ಗುರುತಿಸಿಕೊಂಡ ಶಫೀಕ್ ಎಂ ಬೇಪಾರಿ ಅವರನ್ನು ಕಾಂಗ್ರೆಸ್ ಪಕ್ಷ ಗುರುತಿಸಿ , ಮತ್ತಷ್ಟು ಅವರ ಸೇವೆ ಪಕ್ಷಕ್ಕೆ ಬೇಕಾಗಿದೆ ಎಂದು ಉನ್ನತ ಹುದ್ದೆ ಕೊಟ್ಟು ಅವರ ಮೇಲೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ .

ಶಫೀಕ್  ಎಮ್ ಬೇಪಾರಿ ಇವರನ್ನು ಪ್ರೋತ್ಸಾಹಿಸಿದ , ಉದಯ್ ಸಿಂಹ ಪಡ್ತಾರೆ , ರಾಜು ಬಾಗವಾನ್ ,   ಹಾಗೂ, ದಾನೇಶ್ ತಡೆಸಲೂರ್ ಆಯ್ ಆರ್ ರಾಮದುರ್ಗ್, ಐ ಯಾಚ್ ಅಂಬಿ ವಕೀಲರು , ಕಾಟೆ ಬಸ್ವಂತ್ ಕಾಕಾ ,ಆರಿಫ್ ಮೊಮಿನ್ , ಪ್ರಶಾಂತ್ ಕಾಳೆ, ಯೂಸುಫ್ ಜಮಾದಾರ್ ಹಾಗೂ ಇನ್ನೂ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರನ್ನು  ಕೃತಜ್ಞತೆಗಳನ್ನು ಹೇಳಿದ್ದಾರೆ .

ವರದಿ ಮಹಿಬೂಬ್  ಎಂ ಬಾರಿಗಡ್ಡಿ

No comments:

Post a Comment