*ಬಾಗಲಕೋಟೆ/*ರಬಕವಿ ಬನಹಟ್ಟಿ* :
ಈಗಿನ ಕಾಲದ ಮಕ್ಕಳು ತಮ್ಮದೇ ಆದ ಮೊಬೈಲ್ ಫೋನಿನ ಜಗತ್ತಿನಲ್ಲಿ ಇರುತ್ತಾರೆ, ಆದರೆ ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದ ಭಾರಪೇಟ ಗಲ್ಲಿಯಲ್ಲಿ ಅಸದದುಲ್ಲಾ ಎಂಬ ಯುವಕ ತನ್ನ ಪ್ರಾಣವನ್ನು ಲೆಕ್ಕಿಸದೆ 6 ವರ್ಷದ ಮಾಹೆರಾ ಎಂಬ ಹೆಣ್ಣಮಗು ಆಟ ಆಡುತ್ತಿರುವಾಗ ನೀರಿನ ಟ್ಯಾಂಕ್ ಒಂದರಲ್ಲಿ ಬಿದ್ದು ನೀರು ಕುಡಿದು ಪ್ರಜ್ಞೆಯನ್ನು ತಪ್ಪಿತ್ತು. ಕೂಡಲೇ ನೋಡಿದ ಯುವಕನು ಆಕೆಯನ್ನು ಕೈಯಲ್ಲಿ ಗಾಬರಿ ಗೊಳ್ಳದೆ ಎತ್ತಿಕೊಂಡು ಹೋಗಿ ಸಮೀಪದ ಡೊರ್ಲೆ ಮಕ್ಕಳ ಆಸ್ಪತ್ರೆಗೆ ದಾಖಲಿಸಿ , ಮಗುವಿನ ಪ್ರಾಣ ಉಳಿಸಿದ ಘಟನೆಯನ್ನು ನಡೆದಿದೆ.
ಮಾಹೆರಾ ಅಬ್ದುರಜಾಕ ಇನಾಮ್ದಾರ್ ಎಂಬ 6 ವರ್ಷದ ಹೆಣ್ಣು ಮಗುವಿನ ಪ್ರಾಣವನ್ನು ಕಾಪಾಡಿದ , ಅಸದದ್ದುಲ್ಲಾ ಗದ್ಯಾಳ ಎಂಬ ಯುವಕನಿಗೆ ಜಮಿಯತ್ ಎ ಉಲ್ಮಾ ಸಂಘಟನೆಯವರು ಕರೆದು ಇವರ ಕಾರ್ಯವನ್ನು ಮೆಚ್ಚಿ , ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನಾ ಮೋಸಿನ್ಅಹಮದ್ ಗೋಕಾಕ್, ಮಾನವೀತೆಯ ಕೆಲಸ , ನಮ್ಮ ಸಮಾಜ ಹೆಮ್ಮೆ ಪಡುವ ಸಂಗತಿ ಮೊದಲು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಮನುಷ್ಯತ್ವ ಅಥವಾ ಮಾನವೀಯತೆ ಇಂದ್ ಜೀವನ ಸಾಗಿಸಬೇಕು ಎಂದು ಮಹಮ್ಮದ್ ಪೈಗಂಬರ್ ರವರು ಹೇಳಿದ್ದಾರೆ ಎಂದು ಹೇಳಿದರು . ಇಂತಹ ಕೆಲಸಕ್ಕೆ ನಾವು ಮೆಚ್ಚುಗೆ ತಿಳಿಸುತ್ತೇವೆ. ಕೇವಲ ಮುಸ್ಲಿಂ ಸಮಾಜ ಅಷ್ಟವಲ್ಲದೆ , ಯಾವುದೇ ಸಮಾಜವಿದ್ದರೂ ಇಂತಹ ಕೆಲಸ ಅಥವಾ ಅವರ ಕಷ್ಟ ಸುಖದಲ್ಲಿ ಭಾಗಿಯಾಗಬೇಕೆಂದು ಈಗಿನ ಯುವಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ
ಮೌಲಾನ ಮೋಸಿನ ಗೋಕಾಕ , ಗಪುರ ಮೌಲಾನ , ಕರವೇ ಗಜಸೇನೆ ತಾಲೂಕ ಅಧ್ಯಕ್ಷ ಮಹಮ್ಮದಹುಸೇನ್ ಲೆಂಗ್ರೆ ಯುವಕನ ತಂದೆ ಬಂದೆನಮಾಜ್ ಗದ್ಯಾಳ ಇನ್ನೂ ಅನೇಕರು ಇದ್ದರು .
ವರದಿ ಮಹಿಬೂಬ್ ಎಂ ಬಾರಿಗಡ್ಡಿ
No comments:
Post a Comment