ಮೊಬೈಲ್ ಕಳೆದುಕೊಂಡ ವ್ಯಕ್ತಿಗೆ ಸ್ವತಹ ಕರೆದು ಹಿಂದಿರುಗಿಸಿ ಮಾನವಿಯತೆ ಮೆರೆದ ಲಾಲಸಾಬ್ :
ಮೊಬೈಲ್ ಕಳೆದುಕೊಂಡ ವ್ಯಕ್ತಿಗೆ ಹಿಂದಿರುಗಿಸಿ ಮಾನವಿಯತೆ ಮೆರೆದ ಲಾಲಸಾಬ್ :
ಬಾಗಲಕೋಟೆ /
ರಬಕವಿ - ಬನಹಟ್ಟಿ : ಸಿಕ್ಕಿದ್ದೆ ಶಿವಾಯ ನಮಃ ಅನ್ನುವಂತ ಯುಗದಲ್ಲಿ ಕಳೆದುಕೊಂಡ ಯಾರದೋ ವಸ್ತುಗಳನ್ನು ಯಾರಿಗಾದರೂ ಸಿಕ್ಕಿದರೆ ಗಾಡ್ ಗಿಫ್ಟ್ ಅಂತ ಹೇಳಿ ಯಾರು ವಾಪಸ್ ಮಾಡುವುದಿಲ್ಲ . ಇಲ್ಲೊಬ್ಬ ರಬಕವಿ - ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಬಿಲಾಲ್ ಮಸ್ಜಿದ್ ಬಡಾವಣೆಯ ನಿವಾಸಿಯಾದ ಲಾಲ್ ಸಾಬ್ ಅಥಣಿ ಎಂಬ ಯುವಕ , ಈತನಿಗೆ ರಸ್ತೆಯ ಪಕ್ಕದಲ್ಲಿ ಸಿಕ್ಕ 20 ಸಾವಿರದಿಂದ ಹೆಚ್ಚು ಬೆಲೆ ಬಾಳುವ ವಿವೊ ಕಂಪನಿಯ ಮೊಬೈಲ್ ಫೋನವನ್ನು ಕಳೆದುಕೊಂಡ ವ್ಯಕ್ತಿ ಮಂಜು ನಗರಸಭೆಯ ವ್ಯಾಪ್ತಿಯ ಹೊಸೂರ್ ಗ್ರಾಮದ ಯುವಕನಾಗಿದ್ದು , ಯುವಕನು ಕರೆ ಮಾಡಿದ ಸಂದರ್ಭದಲ್ಲಿ ಮಾತಾಡಿ ಸ್ಥಳದಲ್ಲಿ ಕರೆದು ಮೊಬೈಲ್ ಹಿಂದುರುಗಿಸಿ ಮಾನವಿಯತೆ ಮೆರೆದಿದ್ದಾನೆ.
ಲಾಲ್ ಸಾಬ್ ಅಥಣಿ ಈ ಯುವಕ ಸಮಾಜಕ್ಕೆ ಮಾದರಿಯಾದ ವ್ಯಕ್ತಿ ಹಾಗೂ ಮಾನವೀಯತೆಯ ಕಾರ್ಯವನ್ನು ಮೆಚ್ಚಿ , ಆತನ ಗೆಳೆಯರ ತಂಡದಿಂದ ತಡ ರಾತ್ರಿ 11:30 ಗಂಟೆಯಾದರೂ ಇತನಿಗೆ ಶಾಲು ಮಾಲೆಯನ್ನು ಹಾಕಿ ಸನ್ಮಾನ ಮಾಡಿದರು .
ಈ ಸಂದರ್ಭದಲ್ಲಿ , ಮೊಬೈಲ್ ವಾಪಸ್ ಪಡೆದುಕೊಂಡ ಯುವಕ ಮಂಜು , ನಗರದ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಬಿಜೆಪಿ ಅಲ್ಪಸಂಖ್ಯಾತರ ನಗರ ಘಟಕದ ಅಧ್ಯಕ್ಷ ಮಲಿಕ್ ಜೆ ಬಾರಿಗಡ್ಡಿ, ಆಸಿಫ್ ಪಾಗೆ , ಶರ್ಪೋದ್ದಿನ್ ಜಮಾದಾರ್, ಮೂಸಾ ಆಸಂಗಿ , ಮಹಿಬೂಬ್ ಮೀರಾಸಾಬ ಬಾರಿಗಡ್ಡಿ , ಇನ್ನೂ ಅನೇಕರು ಉಪಸ್ಥಿತರಿದ್ದರು .
ವರದಿ : ಮಹಿಬೂಬ್ ಎಂ ಬಾರಿಗಡ್ಡಿ

Comments
Post a Comment