ಪಂಚಗ್ಯಾರoಟಿ ಯೋಜನೆಗಳು ದೇಶದಲ್ಲಿಯೇ ಹೊಸ ಚರಿತ್ರೆ ಬರೆದಿದೆ . - ಕಾಂಗ್ರೇಸ್ ಮುಖಂಡ ಸಿದ್ದು ಕೊಣ್ಣೂರ
ತೇರದಾಳ: ನಮ್ಮ ಘಣ ಸರಕಾರವು ಬಡವರ ಉದ್ಧಾರಕ್ಕಾಗಿ ಪಂಚಗ್ಯಾರoಟಿ ಯೋಜನೆಗಳನ್ನು ಜಾರಿಗೆ ತಂದು ಬಡವರ ಬದುಕಿಗೆ ಆಸರೆಯಾಗಿದೆ. ಯಾವುದೇ ಧರ್ಮ ಜಾತಿ ಮತ ಎನ್ನದೆ ಪ್ರತಿ ಕುಟುಂಬದ ಹೆಣ್ಣುಮಗಳಿಗೆ ಅವರು ಶ್ರೀಮಂತರಿರಲಿ. ಬಡವರಿರಲಿ ಎಲ್ಲಾ ಮಹೀಳೆಯರಿಗೂ ಈ ಯೋಜನೆ ನೀಡಿ ಇಡೀ ದೇಶದಲ್ಲಿಯೇ ಹೊಸ ಚರಿತ್ರೆ ಬರೆದಿದೆ ಎಂದು ಕಾಂಗ್ರೆಸ್ ಯುವ ಧುರಿಣರಾದ ಸಿದ್ದು ಕೊಣ್ಣೂರ ಹೇಳಿದರು.
ತೇರದಾಳ ಪಟ್ಟಣದ ಶ್ರೀ ಬ್ರಹ್ಮಾನಂದ ದೇವಸ್ಥಾನದಲ್ಲಿ ಜಿಲ್ಲಾ ಪಂಚಾಯತ ಬಾಗಲಕೋಟೆ, ತಾಲೂಕು ಪಂಚಾಯತ ರಬಕವಿ-ಬನಹಟ್ಟಿ ಹಾಗೂ ಪುರಸಬೆ ತೇರದಾಳ ಇವರ ನೇತೃದಲ್ಲಿ ತೇರದಾಳ ತಾಲೂಕಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು ಕೊರತೆಗಳ ಸಭೆಯಲ್ಲಿ ಮಾತನಾಡಿದ, ಅವರು ಅಧಿಕಾರಿಗಳಾದವರು ದಯವಿಟ್ಟು ನಿಮ್ಮ ಹತ್ತಿರ ಬರುವ ಯಾರನ್ನೂ ಕಚೇರಿಗೆ ಅಲೆಯುವಂತೆ ಮಾಡಬೇಡಿ. ಅವರ ನೋವಿಗೆ ಸ್ಪಂದಿಸಿ ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಗ್ಯಾರಂಟಿ ಅನುಷ್ಠಾಣ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷೆ ಜಯಶ್ರೀ ತಿಮ್ಮಾಪೂರವರು ಪೂರ್ವಕಾಲದಿಂದಲೂ ಮಹಿಳೆಯು ಒಂದು ಸಂಕೋಲೆಯಲ್ಲಿ ಜೀವನ ನಡೆಸುತ್ತಾ ಬಂದಿದ್ದಾಳೆ. ಅವಳಿಗೆ ಕಾನೂನಿನಲ್ಲಿ ಸಮಾನ ಸ್ಥಾನಮಾನವಿದ್ದರೂ ಅವಳು ಒಂದು ರೀತಿಯ ಮೀತಿಯಲ್ಲಿಯೇ ಜೀವನ ನಡೆಸಬೇಕಾದ ಪರಿಸ್ಥಿತಿ ಇತ್ತು. ಆದರೆ ಆ ಸಂಕೋಲೆಯಲ್ಲಿ ಸಿಲುಕಿಕೊಂಡಿದ್ದ ಎಲ್ಲಾ ತಾಯಂದಿರನ್ನು ಬಿಡುಗಡೆಮಾಡಿ ಅವರ ಮುಖದಲ್ಲಿ ಮಂದಹಾಸ ಮೂಡುವಂತೆ ಸ್ವಾಭಿಮಾನದ ಬದುಕನ್ನು ನೀಡಿದವರು ಧೀಮಂತ ನಾಯಕ ನಮ್ಮ ಸಿದ್ಧರಾಮಯ್ಯನವರು ಎಂದರು. ತಾಲೂಕು ಅಧ್ಯಕ್ಷ ನೇಮಣ್ಣ ಸಾವಂತನವರ, ತಹಶೀಲದಾರ ವಿಜಯಕುಮಾರ ಕಡಕೋಳ ಮಾತನಾಡಿದರು. ವೇದಿಕೆಯಲ್ಲಿ ಪುರಸಭೆಯ ಮುಖ್ಯಾದಿಕಾರಿ ಎಫ್.ಬಿ.ಗಿಡ್ಡಿ, ತಾಲೂಕಾಪಂಚಾಯತ ಅಧಿಕಾರಿ ವಿನಯಕುಮಾರ ಹುಲ್ಯಾಳ ಆಹಾರ ನಿರೀಕ್ಷಕ ಎಸ್.ಐ. ಸೂಡಿ ಹಾಗೂ ಗ್ಯಾರಂಟಿ ಪ್ರಾಧಿಕಾರ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ವರದಿ : ಮಹೆಬೂಬ್ ಬಾರಿಗಡ್ಡಿ
No comments:
Post a Comment