Thursday, February 12, 2026

ತನು-ಮನ-ಧನದಿಂದ ಜಿಲ್ಲಾ ಜಾನಪದ ಸಮ್ಮೇಳನವನ್ನು ಯಶಸ್ವಿಗೊಳಿಸಿ- ಮಾಜಿ ಪುರಸಭೆ ಅಧ್ಯಕ್ಷ ಬಸವರಾಜ ಬಾಳಿಕಾಯಿ

ತನು-ಮನ-ಧನದಿಂದ ಜಿಲ್ಲಾ ಜಾನಪದ ಸಮ್ಮೇಳನವನ್ನು ಯಶಸ್ವಿಗೊಳಿಸಿ- ಮಾಜಿ ಪುರಸಭೆ ಅಧ್ಯಕ್ಷ ಬಸವರಾಜ ಬಾಳಿಕಾಯಿ 

ತೇರದಾಳ: ಪಟ್ಟಣದಲ್ಲಿ ಇದೇ ತಿಂಗಳು ಫೆಬ್ರವರಿ 15 ರಂದು  ಶ್ರೀ ಅಲ್ಲಮಪ್ರಭುವಿನ ದೇವಸ್ಥಾನದಲ್ಲಿಜರಗುಲಿರುವ  ದ್ವಿತೀಯ ಜಿಲ್ಲಾ ಕರ್ನಾಟಕ ಜಾನಪದ ಸಮ್ಮೇಳನ ಜರುಗಲಿದ್ದು ಎಲ್ಲ ಪದಾಧಿಕಾರಿಗಳು ಹಾಗೂ ಕಲಾವಿದರು ತನುಮನದಿಂದ ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮಾಜಿ ಪುರಸಭಾ ಅಧ್ಯಕ್ಷ ಬಸವರಾಜ ಬಾಳಿಕಾಯಿ ಪೂರ್ವಭಾವಿ ಸಭೆಯಲ್ಲಿ ಹೇಳಿದರು.ಸಮಿತಿಗಳ ರಚನೆ ಹಾಗೂ ಕಾರ್ಯ ಹಂಚಿಕೆ ಕೆಲಸ ಸಮಾನ ಜೀವಿಗಳು ಒಗ್ಗೂಡಿಕೊಂಡು ಯಶಸ್ವಿಗೊಳಿಸಬೇಕೆಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ರಾಯಪ್ಪ ಕುಂಬಾರ್ ಅಭಿಮತವನ್ನು ವ್ಯಕ್ತಪಡಿಸಿದರು. ನನಗೆ ಈಗ 81 ವರ್ಷದ ಪ್ರಾಯ ನಾನು ಕೂಡ ತಾವು ವಹಿಸಿದ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳುವೆ ಯಾವುದೇ ಕಾರ್ಯ ಕೆಲಸಗಳ ಮಾಡುವಾಗ ಹಿಂಜರಿಕೆ ಪ್ರಶ್ನೆ ಇಲ್ಲ ಎಂದು ಹೇಳಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಗಂಗಾಧರ್ ಮೋಪಗಾರ ಮಾತನಾಡಿ ಕಾರ್ಯ ಹಂಚಿಕೆ ಹಾಗೂ ಸಮಿತಿಗಳ ಜವಾಬ್ದಾರಿ ವಹಿಸಿಕೊಂಡವರು ತನುಮನದಿಂದ  ತೊಡಗಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು. ಕಡಿಮೆ  ಸಮಯದ ಅಭಾವ ಇರೋದ್ರಿಂದ ಜಿಲ್ಲಾ ಸಮೇಳನಕ್ಕೆ ಕೆಲವೇ  ದಿನಗಳು ಉಳಿದಿದ್ದು  ಪದಾಧಿಕಾರಿಗಳು
ತಮಗೆ ವಹಿಸಿದ ಕೆಲಸದಲ್ಲಿ ಆಸಕ್ತಿವಹಿಸಿ
ಮುಂದಿನ ಕಾರ್ಯರೂಪರೇಷಗಳು ಲೋಪವಾಗದಂತೆ ನೋಡಿಕೊಳ್ಳಬೇಕೆಂದು ಹೇಳಿದರು. ತಾಲೂಕು ನೂತನ ನಿಯೋಜಿತ ಕಜಾಪ ಅಧ್ಯಕ್ಷರಾದ ಅಶೋಕ್ ಮಹಾಲಿಂಗಪುರ್ ಮಾತನಾಡಿ ನನಗೆ ಅಧ್ಯಕ್ಷ ಸ್ಥಾನ ದೊರಕಿರುವುದು ಅನಿರೀಕ್ಷಿತ ಅದರಂತೆ ಅಲಕ್ಷಿತ ಕಲಾವಿದರು ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸುವೆ. ಜಿಲ್ಲಾ ಸಮ್ಮೇಳನಕ್ಕೆ ಇನ್ನೂ ಸಾಕಷ್ಟು ಕಾರ್ಯ ಚಟುವಟಿಕೆಗಳು ಬಾಕಿ ಉಳಿದಿದ್ದು ತಮ್ಮೊಂದಿಗೆ ಸೇರಿ ಜಾನಪದ ಕಟ್ಟಾಳಾಗಿ ಕೆಲಸ ಮಾಡುವೆ ಎಂದು ಹೇಳಿದರು. ಹಿರಿಯ ಕಲಾವಿದರಾದ ಶಿವಾನಂದ್, ಸತ್ಯಪ್ಪ ಸುಣಗಾರ, ಭಾಗ್ಯಶ್ರೀ ಸುನಗಾರ, ಸಂತೋಷ್ ನಡುವಿನಕೆರೆ, ಪದ್ಮಸಾಗರ್ ನಾಗನೂರ, ಗಂಗಾಧರ ಸೇರಿದಂತೆ  ತಾಲೂಕಿನ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿರಿಯ ಕಲಾವಿದರು ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದರು.

No comments:

Post a Comment