ಹಣಗಂಡಿ ಪಂಚಾಯತಿಯ ನಿಷ್ಕಾಳಜಿ . ಸೊರಗುತ್ತಿರುವ ಸ್ವಚ್ಛತಾ ವ್ಯವಸ್ಥೆ. ವಿಲೇವಾರಿಯಾಗದ ಕಸ: ಬೇಸತ್ತ ಜನ
ಮಹಿಬುಬ ಮ ಬಾರಿಗಡ್ಡಿ
ಹಣಗಂಡಿ ; ಗ್ರಾಮ ಪಂಚಾಯಿತಿಯ ಟಿಪ್ಪು ಸುಲ್ತಾನ್ ಸರ್ಕಲ್ ಹತ್ತಿರ ಜನಬೀಡ ಪ್ರದೇಶದಲ್ಲಿ ಕಾಣುವ ಕಸದ ರಾಶಿ ಬೀದಿನಾಯಿ-ಹಂದಿಗಳಿAದ ರಸ್ತೆಯಲ್ಲಿ ಪಕ್ಕದಲ್ಲಿ ಬೀಳುವ ತ್ಯಾಜ್ಯದಿಂದ ಗಲೀಜ ಗ್ರಾಮವಾಗಿ ಬದಲಾಗುತ್ತಿದೆ, ಗ್ರಾಮದಲ್ಲಿ ನಿತ್ಯವೂ ಕಂಡುಬರುವ ದೃಶ್ಯವಿದು. ಕಸ ವಿಲೇವಾರಿಗೂ ಗ್ರಾಮ ಪಂಚಾಯತಿಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದು, ಇದರಿಂದಾಗಿ ಕಸದ ರಾಶಿಗಳು ತಿಂಗಳುಗಟ್ಟಲೇ ಸ್ಥಳದಲ್ಲಿ ಬಿದ್ದುಕೊಂಡಿರಬೇಕಾಗಿದೆ . ಕುಡಚಿ - ಜಮಖಂಡಿ ಪ್ರಮುಖ ರಸ್ತೆಯ, ಚಾ ಅಂಗಡಿ, ಎಗ್ ರೈಸ್ ಅಂಗಡಿ ಸೇರಿದಂತೆ , ವಿವಿಧ ವ್ಯಾಪಾರಸ್ಥರ ಕಸವನ್ನು ಒಂದೇ ಕಡೆ ಹಾಕುವುದರಿಂದ ಕಸದ ರಾಶಿಗಳು ಹೋಗುವ ಪ್ರಯಾಣಿಕರ ಕಣ್ಣಿಗೆ ಕಂಡು ಮುಜಗರವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ . ಕಸದ ತಾಜ್ಯ ವಿಲೇವಾರಿಗೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಜನರ ಬೇಸರಕ್ಕೆ ಕಾರಣವಾಗಿದೆ.
ಹಣಗಂಡಿಯ ಪ್ರಸಿದ್ದ ವಾಡೆ ; ಪಂಚಾಯತಿ ಯ್ಯಾಪ್ತಿಯಲ್ಲಿ ರಾಜ ವಾಡೆಗೆ ಖ್ಯಾತಿ ಪಡೆದಿರುವ ಗ್ರಾಮ , ಈ ಗ್ರಾಮ ಇತ್ತೀಚಿನ ದಿನಗಳಲ್ಲಿ ಕಸದ ಸಮಸ್ಯೆಯಿಂದ ಹಾಗೂ ಚರಂಡಿಯ ಕೊಳಚೆ ನೀರಿ ನಿಂದ ಅಪಖ್ಯಾತಿಗೆ ಒಳಗಾಗುತ್ತಿದೆ. ಗ್ರಾಮದ ಪ್ರಮುಖ ಪ್ರದೇಶಗಳಲ್ಲಿ ಚರಂಡಿಗಳು ತುಂಬಿ ಹೋಗಿದ್ದು, ಹೂಳು ತೆಗೆಯುವ ಕೆಲಸವಾಗಿಲ್ಲ. ಚರಂಡಿಯಲ್ಲಿ ನೀರು ನಿಂತು, ದುರ್ನಾತ ಬರುತ್ತಿದ್ದರೂ, ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಇದರ ಜೊತೆಯಲ್ಲಿಯೇ, ಕಸದ ಸಮಸ್ಯೆಯೂ ಹೆಚ್ಚಾಗುತ್ತಲಿದೆ. ಮನೆಗಳ ಹಾಗೂ ಅಂಗಡಿಗಳ ಸ್ಥಳದಿಂದ ಕಸ ಸಂಗ್ರಹ ಮಾಡುವ ವ್ಯವಸ್ಥೆ ಗ್ರಾಮದಲ್ಲಿ ಇದೆಯೇ? ಎನ್ನುವಂತ ಪ್ರಶ್ನೆ ಕಾಡುತ್ತಿದೆ . ಆದರೆ, ಬಹುತೇಕ ಜನರು ಇಂದಿಗೂ ರಸ್ತೆ ಅಕ್ಕ-ಪಕ್ಕದಲ್ಲಿ ಕಸ ಹಾಕುತ್ತಿದ್ದಾರೆ. ಗ್ರಾಮದ ಪ್ರಮುಖ ವೃತ್ತಗಳಲ್ಲಿ ಕಸ ಸಂಗ್ರಹಕ್ಕೆ ವ್ಯವಸ್ಥೆ ಇಲ್ಲದಿರುವುದರಿಂದಲೇ ,ಕಸದ ಸಮಶೈ ಹೆಚ್ಚಾಗುತ್ತಿದೆ. ಕಸ
ಸಂಗ್ರಹಿಸುವ ಸಿಬ್ಬಂದಿ, ರಸ್ತೆ ಅಕ್ಕ-ಪಕ್ಕದ ಕಸದ ರಾಶಿ ಸಂಗ್ರಹಿಸುತ್ತಿಲ್ಲ ಕಾರಣಕ್ಕೆ ಹಲವು ದಿನಗಳ ಕಾಲದ ಕಸದ ರಾಶಿ ಬದ್ದಲ್ಲೆ ಬಿದ್ದುಕೊಂಡಿರುತ್ತದೆ.
ಅಷ್ಟಾದರೂ ಕಸದ ವಿಲೇವಾರಿ ಆಗುತ್ತಿಲ್ಲವೆಂದು ಜನರು ಗ್ರಾಮ ಪಂಚಾಯಿತಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ವಚ್ಚತೆ ಬಗ್ಗೆ ಏನು ಕ್ರಮ ತೆಗೆÀದುಕೊಳ್ಳುತ್ತಿಲ್ಲ ಇದರಿಂದಾಗಿ ಕಸದ ಸಮಸ್ಯೆಯಾಗುತ್ತಿದೆ. ರಸ್ತೆಯಲ್ಲಿ ಓಡಾಡಲು ಆಗುತ್ತಿಲ್ಲ' ಎಂದು ಜನರು ಅಳಲು ತೋಡಿಕೊಂಡರು.
ವಿಲೇವಾರಿಯಾದ ಕಸದ ಸ್ಥಳದಲ್ಲಿ ದುರ್ನಾತ ಬರುತ್ತಿದ್ದು, , ವಾಯು ವಿವಾಹರಕ್ಕೆ ಹೋಗುವ ಸ್ಥಿತಿಯಿಲ್ಲ. ಹೋದರೆ, ರಸ್ತೆಯಲ್ಲಿ ಓಡಾಡುವ ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿಯಿದೆ.ಇದರಿಂದ ಆರೋಗ್ಯಕ್ಕೆ ಸಮಸ್ಯೆ ಉಂಟಾಗುವುದು ಖಚಿತ' ಎಂದು ಹೇಳಿದರು.
ಗ್ರಾಮದ ವಾರ್ಡ್ ನಂಬರ್ ೩ ರ ಇಳಿಜಾರು ಪ್ರದೇಶ ವಾಗಿದೆ. ಚರಂಡಿಯ ( ಗಟಾರು ) ಕೆಲಸ ಅರ್ಧಕ್ಕೆ ನಿಂತಿದ್ದರಿAದ ಚರಂಡಿಯ ಕೊಳಚೆ ನೀರು ರಸ್ತೆಯ ತುಂಬೆಲ್ಲ ಹರಡಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಮಳೆ ಬಂತAದರೆ ಸಾಕು ರಸ್ತೆ ತುಂಬೆಲ್ಲ ಚರಂಡಿ ನೀರು ನಿಂತು ರಸ್ತೆ ಬ್ಲಾಕ್ ವಾಗುತ್ತದೆ . ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಭಾರಿ ತೊಂದರೆ ಆಗುತ್ತಲಿದೆ .ಈ ಕುರಿತು ಗ್ರಾಮ ಅಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ನೀಡಿದರು ಏನು ಪ್ರಯೋಜನವಾಗುತ್ತಿಲ್ಲ ಎಂದು ಸಾರ್ವಜನಿಕರು ತಮ್ಮ ಅಳಲು ತೋಡಿಕೊಂಡರು.
ಹೇಳಿಕೆ ೦೧ : ದೊಡ್ಡ ಗ್ರಾಮ, ಸಿಬ್ಬಂದಿಗಳು ಇಬ್ಬರೇ ಇರುವುದರಿಂದ ಕಸದ ಸಮಸ್ಯೆ ಆಗುತ್ತಿದೆ. ಆದ್ದರಿಂದ ೧೫ ದಿನಕ್ಕೊಮ್ಮೆ ಕಸ ತೆಗೆಯುವಂತ ವ್ಯವಸ್ಥೆ ಇದೆ. ಹೆದ್ದಾರಿ ಪಕ್ಕದಲ್ಲಿ ಬಿದ್ದ ಕಸವನ್ನು ತೆಗೆಯುವಂತಹ ಕ್ರಮ ತೆಗೆದುಕೊಳ್ಳುತ್ತೇನೆ.
ಪಿ . ಪಿ. ರಾವಳ , ಗ್ರಾಮ ಪಂಚಾಯತ ಅಧಿಕಾರಿ
ಹೇಳಿಕೆ ೦೨ ಚರಂಡಿ ( ಗಟಾರ ) ಅರ್ದಂ ಬರ್ದ ಕಾಮಗಾರಿ ಮಾಡಿ ರಸ್ಥೆ ತುಂಬೆಲ್ಲಾ ಕೊಳಚೆ ನೀರು ಹರಡುವುದರಿಂದ ಇಲ್ಲಿನ ಸಾರ್ವಜನಿಕರಿಗೆ
ತೊಂದರೆಯಾಗುತ್ತಿದೆ. ಜೊತೆಗೆ ರೋಗ ಹರಡುವ ಭೀತಿ ಇರುತ್ತದೆ. ಮತ್ತು ಪ್ರಮುಖ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಕಳೆದ ನಾಲ್ಕು ತಿಂಗಳಿನಿoದ ಕಸ ವೀಲೇವಾರಿಯಾಗದೆ ಹಾಗೆ ಬಿದ್ದಿರುತ್ತದೆ. ಕಸವನ್ನು ನಾಯಿ ಹಂದಿಗಳು ಚೆಲ್ಲಾ ಪಿಲ್ಲಿಯಾಗಿ ಮಾಡುತ್ತಲ್ಲಿವೆ .ವಾಹನಗಳು ಹಾದಾಡುವ ಸಮಯದಲ್ಲಿ ನಾಯಿ ಹಂದಿಗಳು ಅಡ್ಡ ಬಂದರೆ ಅನಾಹುತ ಗ್ಯಾರಂಟಿ , ಹಲವು ಬಾರಿ ಗ್ರಾಮ ಪಂಚಾಯತ ಅಧಿಕಾರಿಗಳಿಗೆ ತಿಳಿಸಿದರೊ ಏನೊ ಕ್ರಮ ತೆಗೆದುಕೊಳ್ಳುತ್ತಿಲ್ಲ.
ಸ್ಥಳೀಯ ನಿವಾಸಿ - ಶಾನುರ ಸುಲೆಮಾನ ರಾಮದುರ್ಗ

No comments:
Post a Comment