Monday, February 16, 2026

15 ಗ್ರಾಂ ಬಂಗಾರ ಕದ್ದ ಕಳ್ಳ, ಈಗ ಪೊಲೀಸರ ಅತಿಥಿ :

15 ಗ್ರಾಂ ಬಂಗಾರ ಕದ್ದ ಕಳ್ಳ, ಈಗ ಪೊಲೀಸರ ಅತಿಥಿ : 

 ರಬಕವಿ : ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಮಹಿಳೆಯೊಬ್ಬರ ತರಕಾರಿ ಚೀಲದಿಂದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ , ಕಳ್ಳ ಆರೋಪಿಯನ್ನು ಪೊಲೀಸರು ಕೇವಲ 24 ಗಂಟೆಗಳಲ್ಲಿ ಬಂಧಿಸಿ ಯಶಸ್ವಿಯಾಗಿದ್ದಾರೆ . ಪೊಲೀಸರ ಈ ಚುರುಕು ಕಾರ್ಯಾಚರಣೆಯಲ್ಲಿ, ಅಪರಾಧ ವಿಭಾಗದ ಪಿಎಸ್ಐ ಪಿ ಎಸ್ ಪೂಜಾರಿ, ಮತ್ತು ಪೊಲೀಸ್ ಸಿಬ್ಬಂದಿ ಡಿ ವಿ ಕುಂಬಾರ್ ಸಿ ಎಚ್ ಸಿ, ಪಿ ಹೆಚ್ ಗಣಿ ಸಿಪಿಸಿ, ಎಸ್ ಜಿ ಲಗಳಿ ಸಿಪಿಸಿ, ವಿ ಎಸ್ ಅಜ್ಜನಗೌಡರ್, ಎಸ್ ಎಸ್ ಬಾಡಗಿ ಸಿಪಿಸಿ, ರವರ ತಂಡ ಆರೋಪಿಗಾಗಿ ಬಲೆ ಬೀಸಿ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ.

ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮಾಂಗಲ್ಯ ಸರ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಯಂಕವ್ವ ಮಾಂತೇಶ್ ಹೂಗಾರ ಎಂಬ ಮಹಿಳೆ ತಮ್ಮ ಹೊಲದ ಚೀಲದಲ್ಲಿ ಮಾಂಗಲ್ಯ ಸರ ಇಟ್ಟು ಸಂತೆಗೆ ಹೋಗಿದ್ದರು. ತರಕಾರಿ ತೆಗೆದುಕೊಂಡು ಬಂದು ನೋಡುವಷ್ಟರಲ್ಲಿ ಚೀಲದಲ್ಲಿದ್ದ ಮಾಂಗಲ್ಯ ಸರ ಕಳ್ಳತನವಾಗಿತ್ತು. ಈ ಸಂಬಂಧ ತನಿಖೆ ಕೈಗೊಂಡ ಬನಹಟ್ಟಿ ಪೊಲೀಸರು, ಪ್ರಕರಣ ದಾಖಲಾದ ಕೇವಲ 24 ಗಂಟೆಗಳಲ್ಲಿ ಆರೋಪಿ ಅಬೂಬ್ಕರ್ ರಂಜಾನ್ ಸಾಬ್ ಮುಲ್ಲಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯಿಂದ ಸುಮಾರು 3 ಲಕ್ಷ ರೂ. ಮೌಲ್ಯದ 10 ಗ್ರಾಂ ಮಾಂಗಲ್ಯ ಸರ, 5 ಗ್ರಾಂ ಸರ ಮತ್ತು ಕಳ್ಳತನಕ್ಕೆ ಬಳಸಿದ್ದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸರ ಯಶಸ್ವಿ ಯಶಸ್ವಿ ಕಾರ್ಯಾಚರಣೆಯಲ್ಲಿ , ಮಹದೇವ್ ಶಿರಹಟ್ಟಿ ಸಿಪಿಐ ಇವರ ನೇತೃತ್ವದ ಪೊಲೀಸ್ ಠಾಣಾ ಅಧಿಕಾರಿ ಶಿವರಾಜ್ ದರಿಗೋನ್ ಪಿಎಸ್ಐ ( ಕಾಸು ) ಹಾಗೂ ಸಿಬ್ಬಂದಿ ಯವರ ಕಾರ್ಯಕ್ಷಮತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಗೋಯೆಲ್ ಐಪಿಎಸ್, ರೋಷನ್ ಜಮೀರ್ ಎಸ್, ಡಿ ಎಸ್ ಪಿ ಜಮಖಂಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ .

No comments:

Post a Comment