Wednesday, April 24, 2024

ನೇಹಾ ಹಿರೇಮಠ್ ಬರ್ಬರ ಹತ್ಯೆ ಖಂಡಿಸಿ, ಕರವೇ ಗಜಸೇನೆ ಸಂಘಟನೆಯಿಂದ ಪ್ರತಿಭಟನೆ*



 *ಬಾಗಲಕೋಟೆ* / 

 *ರಬಕವಿ - ಬನಹಟ್ಟಿ :* 

ಬಾಗಲಕೋಟೆ ಜಿಲ್ಲೆಯ ರಬಕವಿ ಬನಟ್ಟಿ ತಾಲೂಕಿನ ಬನಹಟ್ಟಿ ನಗರದಲ್ಲಿ ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಎಂಸಿಎ  ವಿದ್ಯಾರ್ಥಿನಿ ನೇಹಾ ಹಿರೇಮಠ್ ಅವಳ ಹತ್ಯೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಗಜ ಸೇನೆ ತಾಲೂಕ ಘಟಕ ವತಿಯಿಂದ ಭಾರಿ ಪ್ರತಿಭಟನೆ ನಡೆಸಿದರು.

 ನಗರದ ಮಹಾತ್ಮ ಗಾಂಧಿ ವೃತ ಹತ್ತಿರ ಕರವೇ ಗಜ ಸೇನೆಯ ಕಾರ್ಯಕರ್ತರು  ಭಾರಿ ಪ್ರತಿಭಟನೆ ನಡೆಸಿ   ಆಕ್ರೋಶ ವ್ಯಕ್ತಪಡಿಸಿದಲ್ಲದೆ , ಕೆಲವು ಕಾಲ ರಸ್ತೆ  ತಡೆದು  ವಾಹನ ಸಂಚಾರವನ್ನು ಬಂದು ಮಾಡಿದ್ದರು.

  ಈ ಪ್ರತಿಭಟನೆಯ ಸಂದರ್ಭದಲ್ಲಿ   ಮೌಲಾನಾ ಮೋಹಸಿನ್ಅಹಮದ್ ಗೋಕಾಕ್ ಮಾತನಾಡಿ , ಹುಬ್ಬಳ್ಳಿಯಲ್ಲಿ ನಡೆದಂತಹ ನೇಹಾ ಹಿರೇಮಠ ಅವರ  ಭೀಕರ ಹತ್ಯವನ್ನು ಖಂಡಿಸುತ್ತೇವೆ .  ಇಂತಹ ಘಟನೆ ನಿಜಕ್ಕೂ ದುರಂತ ,  ಇಂತಹ ಪರಿಸ್ಥಿತಿಯಲ್ಲಿ ನೆಹ ಹಿರೇಮಠ ಅವರ ತಂದೆ ರಂಜನ್ ಹಿರೇಮಠ ಅವರ ದುಃಖದಲ್ಲಿ ನಾವು ಸಹ ಭಾಗಿಯಾಗುತ್ತೇವೆ . ಹಾಗೂ ಎಂದೆಂದಿಗೂ ನಿಮ್ಮ ಜೊತೆ ನಾವು ಇರಲು ಬಯಸುತ್ತೇವೆ ಎಂದು ಹೇಳಿದರು . ಸರ್ಕಾರದ ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ  ಪೃವೃತ್ತರಾಗಬೇಕು.  ಈ ಘಟನೆ ಒಂದು ಎರಡು ಅಲ್ಲ ರುಕ್ಸಾನಾ ಎಂಬ ಯುವತಿಯನ್ನು ಕೂಡ ಸುಟ್ಟು ಹಾಕಿದ ಆರೋಪಿ ಪ್ರದೀಪ್, ಇದೇ ರೀತಿ ಹಿಂದೆ ಉಡುಪಿಯಲ್ಲಿ ನಡೆದ ಘಟನೆಯಲ್ಲಿ ನಾಲ್ಕು ಜನ ಮುಸ್ಲಿಂ ಅಮಾಯಕರನ್ನು ಬರ್ಬರವಾಗಿ ಹತ್ಯಮಾಡಿದ ಆರೋಪಿ ಪ್ರವೀಣ್ ಚೌಗುಲೆ ಇವನನ್ನು ಕೂಡ ಗಲ್ಲಿಗೇರಿಸಬೇಕು ಎಂದು ಹೇಳಿದರು  . ನಡೆದಂತ ಘಟನೆ ಸರ್ಕಾರವು ಇಂತಹ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಇಲ್ಲವಾದರೆ ಕಾನೂನಿನ ಭಯ  ಇರುವುದಿಲ್ಲ . ಹತ್ಯಮಾಡಿದವರು ಯಾರೇ ಆಗಲಿ ಫಯಾಜ್  ಆಗಿರಲಿ  ,  ಅವರಪ್ಪನೇ ಆಗಿರಲಿ,  ಇಂತಹ ಅಮಾನುಷ ಬರ್ಬರ ಹತ್ಯೆ ಸಾರ್ವಜನಿಕರ  ಎಲ್ಲರ ಕಣ್ಣ ಮುಂದೆ ನಡೆಯುತ್ತಿರುವಾಗ  ತಮಾಷೆನ್ನಾಗಿ ನೋಡುತ್ತ ಮಗ್ನರಾಗಿದ್ರು .  ಈ ನೋಡುವಂತಹ  ಯುವಕರನ್ನು ಹೇಳಲು ಇಷ್ಟಪಡುತ್ತೇನೆ  ಇಂತಹ ಬರ್ಬರ ಅಮಾನುಷ ಹತ್ಯ ನಡೆಯುತ್ತಿರುವ ಸಂದರ್ಭದಲ್ಲಿ ನೀವು ಕೂಡ ಅದು ತಡೆಯಬಹುದಾಗಿತ್ತು  ಎಂದು ವಿಷಾದ ವ್ಯಕ್ತಪಡಿಸಿದರು. ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಗಜ ಸೇನೆ ವೇದಿಕೆ ಮುಖಾಂತರ  ಮನವಿ ಮಾಡಿಕೊಳ್ಳುವುದು ಇಷ್ಟೇ ನೇಹಾ ಹಿರೇಮಠ ಅವರ ಆರೋಪಿ ಫಯಾಜ್ ಆಗಲಿ , ಈ ಹಿಂದೆ ಉಡುಪಿಯಲ್ಲಿ ನಡೆದಂತಹ ಘಟನೆಯ ಆರೋಪಿ  ಪ್ರವೀಣ್ ಚೌಗಲೇ ಆಗಲಿ  ಹಾಗೂ ಪ್ರದೀಪ್ ಅನ್ನುವಂತ ಆರೋಪಿ ಈ ಎಲ್ಲಾ ಆರೋಪಿಗಳನ್ನು ಕೂಡಲೇ ಗಲ್ಲು ಶಿಕ್ಷೆ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು . 

 ಈ ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ ರಬಕವಿ ಬನಹಟ್ಟಿ ತಾಲೂಕ ತಹಶೀಲ್ದಾರ್ ಅವರಿಗೆ ಕರವೇ  ಗಜಸೇನೆ ವತಿಯಿಂದ ಮನವಿ ಸಲ್ಲಿಸಿದರು.

ಈ ಪ್ರತಿಭಟನೆಯಲ್ಲಿ ರಬಕವಿ ಬನಹಟ್ಟಿ,  ಮುಸ್ಲಿಂ ಧಾರ್ಮಿಕ ಮೌಲ್ವಿಗಳು ಕೂಡ ಸಾತ ನೀಡಿದ್ದು ವಿಶೇಷವಾಗಿತ್ತು. 
 ಈ ಸಂದರ್ಭದಲ್ಲಿ 
ಕರವೇ ಗಜಸೇನೆ  ಜಿಲ್ಲಾಧ್ಯಕ್ಷ  ಚನ್ನಪ್ಪ ಪಾಟೀಲ ,  ರಬಕವಿ ಬನಹಟ್ಟಿ ತಾಲೂಕು ಅಧ್ಯಕ್ಷ  ಮಹಮ್ಮದ್ ಹುಸೇನ್ ಲೆಂಗ್ರೆ , ಶಹನೂರು ಗೋಲಬಾವಿ , ಮೌಲಾನಾ  ಮೋಸಿನಅಹಮದ್  ಗೋಕಾಕ , ಯುನುಸ ನಿಪ್ಪಾಣಿ, ಬುಡನ ಜಮಾದಾರ ,  ಶಾನೂರ ಮಾಲದಾರ ,  ಶ್ರೀ ಮತಿ ಅನುರಾಧಾ ಶಿರಗುಪ್ಪಿ ,  ಶ್ರೀ ಮತಿ ರೇಣುಕಾ ಗಾಡಿವಡ್ಡರ ,  ಮೌಲಾನ ಹಸನ ಝಾರೆ  , ಇರ್ಷಾದ ಮೊಮಿನ , ಇನ್ನು ಹಲವಾರು ಮುಖಂಡರುಗಳು ಹಾಗೂ ಕರವೇ ಗಜಸೇನೆ ಕಾರ್ಯಕರ್ತರು ಹಾಗೂ ಯುವಕರು, ಮಹಿಳೆಯರು. ಇನ್ನೂ ಅನೇಕ  ಸಾತ್ ನೀಡಿದರು . 

 ಸಂಘಟನೆ ಕಾರ್ಯಕರ್ತರು   ಸಮಾಜ ಹಿರಿಯರು ತಾಯಂದಿರು ಮಠಾಧೀಶರು ಭಾಗವಹಿಸಿದ್ದರು .

 ವರದಿ : 
ಮಹಿಬೂಬ ಎಂ ಬಾರಿಗಡ್ಡಿ

Thursday, April 11, 2024

ಸಂಭ್ರಮದ ಹಬ್ಬ ಈದ ವುಲ್ ಫಿತರ್ ಆಚರಣೆ , ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು ಮೌಲಾನಾ ಮೊಹಮ್ಮದ್ ಝುಬೇರ್ ನಾಯಕ್ ವಾಡಿ*


 *ಬಾಗಲಕೋಟೆ / ರಬಕವಿ ಬನಹಟ್ಟಿ :* 

ಮುಸ್ಲಿಮರ ಪವಿತ್ರ ತಿಂಗಳುಗಳಲ್ಲಿ ರಂಜಾನ್ ತಿಂಗಳು ಬಹಳ ಮುಖ್ಯವಾದದ್ದು , ವಿಶ್ವಾದ್ಯಂತ ಇಡೀ ತಿಂಗಳು ರೋಜಾ ಉಪವಾಸ , ಸೂರ್ಯ ಮುಳುಗಿದ ಮೇಲೆ ಆಹಾರ ಸೇವನೆ , ದಾನ ಧರ್ಮ ಈ ಪವಿತ್ರ ತಿಂಗಳಲ್ಲಿ ವಿಶೇಷವಾಗಿರುತ್ತದೆ . ಈ ಪವಿತ್ರ ತಿಂಗಳಲ್ಲಿ 30 ದಿನ ರೋಜೆ ಉಪವಾಸ ಮುಗಿದ ಮರು ದಿನವೇ ಈದ್ ಉಲ್ ಫಿತರ್ ಹಬ್ಬ , ಇವತ್ತು ಗುರುವಾರ ಇಡೀ ರಾಜ್ಯದ್ಯಂತ ಸಂಭ್ರಮಾ ಸಡಗರದೊಂದಿಗೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಲಕ್ಷ್ಮೀನಗರದ ಅರೇಬಿಕ್ ಶಾಲಾ ಅವರಣದ ಈದ್ಗಾ ಮೈದಾನದಲ್ಲಿ ಅತಿ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು . 

 ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನ ಮೊಹಮ್ಮದ್ ಜುಬೇರ್ ನಾಯಕ್ ವಾಡಿ , ಜಗತ್ತು ಹಾಗೂ ಈಗಿನ ಪರಿಸ್ಥಿತಿಯೂ ನಮಗೆ ಕೈಬೀಸಿ ಕರೆತಾ ಇದೆ ಮುಸ್ಲಿಮರೇ ನಿಮಗೆ ಬೇಕಾಗಿರುವುದು ನಿಮ್ಮ ದಿನನಿತ್ಯ ಜೀವನ ಶೈಲಿಗಳನ್ನು ಬದಲಿಸಬೇಕು ಮುಸ್ಲಿಮರಿಗೆ ಬೇಕಾಗಿರುವುದು ಅಲ್ಲಾಹನ ಆಜ್ಞೆ ಹಾಗೂ ಪೈಗಂಬರರ ತತ್ವ ಸಿದ್ಧಾಂತಗಳನ್ನು ಅವಳಿಸಿಕೊಂಡು ನಿಜವಾದ ಮುಸ್ಲಿಮರು ಆಗಬೇಕು ಹಾಗೂ ಈಗಿನ ಪರಿಸ್ಥಿತಿಯ ಸಂದರ್ಭದಲ್ಲಿ ನಮಗೆ ಅವಕಾಶ ಕೊಡಿ ಬಂದಿದೆ ನಿಜವಾದ ಮುಸ್ಲಿಮನಾಗಬೇಕೆಂದರೆ ನಮ್ಮ ನಡವಳಿಕೆ ನಮ್ಮ ಚಲನವನ, ವ್ಯವಹಾರ , ದಿನನಿತ್ಯದ ಜೀವನ ಶೈಲಿಗಳನ್ನು ಬದಲಿಸಬೇಕಾಗಿದೆ . ಇವತ್ತಿನ ದಿನಮಾನಗಳಲ್ಲಿ ಜಗತ್ತು ಇಸ್ಲಾಂ ಹಾಗೂ ಮುಸ್ಲಿಮರನ್ನು ಕೆಂಗಣ್ಣಿನ ಮೂಲಕ ನೋಡುತ್ತಿದೆ . ಮುಸ್ಲಿಮರ ವಿರುದ್ಧ ಇಡೀ ಜಗತ್ತಿನಲ್ಲಿ ನಾಲ್ಕು ದಿಕ್ಕುಗಳಲ್ಲಿ ಇಸ್ಲಾಂ ಧರ್ಮವು ರಕ್ತಪಾತ , ಭಯೋತ್ಪಾದನೆ , ಕೊಲ್ಲುವುದು, ಬಡಿಯುವುದು ಕೇವಲ ಅಷ್ಟೇ ಬಯಸುತ್ತಿದೆ ಎಂದು ಸುಳ್ಳಿನ ಪ್ರೊಪಗೊಂಡ ಮೂಲಕ ಜಗತ್ತಿನ ಪ್ರತಿಯೊಬ್ಬ ಮನುಷ್ಯನ ಮೆದುಳಿನಲ್ಲಿ ಇಸ್ಲಾಂ ಧರ್ಮದ ವಿರುದ್ಧ ಹಾಗೂ ಮುಸ್ಲಿಮರ ವಿರುದ್ಧ ತಲೆಯಲ್ಲಿ ತುಂಬುತ್ತಿದ್ದಾರೆ ಇಸ್ಲಾಂ ಮತ್ತು ಮುಸ್ಲಿಮರು ಯಾವುದೇ ರೀತಿಯಲ್ಲಿ ಇಸ್ಲಾಂ ಧರ್ಮವು ಅಂತ್ಯವಾಗಬೇಕೆಂದು ಷಡ್ಯಂತ್ರ ಮಾಡಲಾಗುತ್ತಿದೆ . ಇವೆಲ್ಲವೂ ಇಸ್ಲಾಂ ಧರ್ಮದ ವಿರುದ್ಧ ಸುಳ್ಳಿನ ಪ್ರೊಪಗೊಂಡ ಮೂಲಕ ದ್ವೇಷ ಹರಡುಸ್ತಾ ಇದ್ದಾರೆ . ಆದರೆ ಇದಕ್ಕೆಲ್ಲ ಕಾರಣಗಳು ಮುಸ್ಲಿಮರು ನಾವು ಏಕೆಂದರೆ ಸತ್ಯವಾದ ನಿಜವಾದ ಇಸ್ಲಾಂ ಧರ್ಮದ ತತ್ವ ಸಿದ್ಧಾಂತಗಳನ್ನು ಇಡೀ ಜಗತ್ತಿಗೆ ತೋರಿಸಲು ನಾವು ವಿಫಲರಾಗಿದ್ದೇವೆ ಎಂದು ಹೇಳಿದರು . 

 *ಹಬ್ಬದ ಸಂಭ್ರಮದ ನಡುವೆ ಮತ ಚಲಾವಣೆಯ ಕರೆ ಕೊಟ್ಟ ಮೌಲಾನ ಮಹಮ್ಮದ್ ಝುಬೇರ್ ನಾಯಕ್ ವಾಡಿ :* 

 ಭಾರತ ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮತದಾನ ಮಾಡುವುದು ಅವಕಾಶ ಮಾಡಕೊಟ್ಟಿದ್ದು ಸಂವಿಧಾನ ನಿಜವಾದ , ಸತ್ಯವಾದ , 
ಸಾಮಾಜಿಕ ಸೇವೆಯನ್ನು ಮಾಡುವಂತಹ ವ್ಯಕ್ತಿಯನ್ನು ಸಾಕ್ಷಿ ಹಾಗೂ ಆಯ್ಕೆ ಮೂಲಕ ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ವಾಗಿದೆ ಎಂದು ವತ್ತಿ ಹೇಳಿದರು 

 ವರದಿ :
ಮಹಿಬೂಬ್ ಬಾರಿಗಡ್ಡಿ

Friday, March 22, 2024

ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷರಾಗಿ ಶಫೀಕ್ ಎಂ ಬೇಪಾರಿ ನೇಮಕ*

*ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ  ಜಿಲ್ಲಾ ಅಧ್ಯಕ್ಷರಾಗಿ ಶಫೀಕ್ ಎಂ ಬೇಪಾರಿ ನೇಮಕ* 

 *ಬಾಗಲಕೋಟ್* : ಕರ್ನಾಟಕ ರಾಜ್ಯ ಸಮಾಜ  ಸೇವೆ ಪ್ರಶಸ್ತಿ ಪಡೆದ ಬಾಗಲಕೋಟೆ ಜಿಲ್ಲೆಯ ಮುಧೋಳ್ ನಗರದ ಶಫೀಕ್  ಎಂ ಬೇಪಾರಿ  ಅವರನ್ನು ,ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ಬಾಗಲಕೋಟೆ ಜಿಲ್ಲಾ ಅಧ್ಯಕ್ಷರಾಗಿ ,  ರಾಷ್ಟ್ರೀಯ ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷರಾದ  ಇಮ್ರಾನ್ ಪ್ರತಾಪ್ಗಡ ಅವರು ತಕ್ಷಣ ನೇಮಕವಾಗುವಂತೆ ಆದೇಶ ಹೊರಡಿಸಿದ್ದಾರೆ . 

ಮುಧೋಳ್ ನಗರದಲ್ಲಿ ಸಾಕಷ್ಟು ಸಮಾಜ ಸೇವೆಗಳಲ್ಲಿ ಗುರುತಿಸಿಕೊಂಡ ಶಫೀಕ್ ಎಂ ಬೇಪಾರಿ ಅವರನ್ನು ಕಾಂಗ್ರೆಸ್ ಪಕ್ಷ ಗುರುತಿಸಿ , ಮತ್ತಷ್ಟು ಅವರ ಸೇವೆ ಪಕ್ಷಕ್ಕೆ ಬೇಕಾಗಿದೆ ಎಂದು ಉನ್ನತ ಹುದ್ದೆ ಕೊಟ್ಟು ಅವರ ಮೇಲೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ .

ಶಫೀಕ್  ಎಮ್ ಬೇಪಾರಿ ಇವರನ್ನು ಪ್ರೋತ್ಸಾಹಿಸಿದ , ಉದಯ್ ಸಿಂಹ ಪಡ್ತಾರೆ , ರಾಜು ಬಾಗವಾನ್ ,   ಹಾಗೂ, ದಾನೇಶ್ ತಡೆಸಲೂರ್ ಆಯ್ ಆರ್ ರಾಮದುರ್ಗ್, ಐ ಯಾಚ್ ಅಂಬಿ ವಕೀಲರು , ಕಾಟೆ ಬಸ್ವಂತ್ ಕಾಕಾ ,ಆರಿಫ್ ಮೊಮಿನ್ , ಪ್ರಶಾಂತ್ ಕಾಳೆ, ಯೂಸುಫ್ ಜಮಾದಾರ್ ಹಾಗೂ ಇನ್ನೂ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರನ್ನು  ಕೃತಜ್ಞತೆಗಳನ್ನು ಹೇಳಿದ್ದಾರೆ .

ವರದಿ ಮಹಿಬೂಬ್  ಎಂ ಬಾರಿಗಡ್ಡಿ